11:59 PM Wednesday16 - July 2025
ಬ್ರೇಕಿಂಗ್ ನ್ಯೂಸ್
ಎಐಸಿಸಿ ಅಖಿಲ ಭಾರತ ಹಿಂದುಳಿದ ವರ್ಗಗಳ ಸಲಹಾ ಸಮಿತಿಯ ಮೊದಲ ಸಭೆ ಅತ್ಯಂತ… ಭಾರೀ ಮಳೆ: ಕೊಡಗು ಜಿಲ್ಲೆಯ ಎಲ್ಲ ಅಂಗನವಾಡಿ, ಶಾಲೆ ಹಾಗೂ ಪಿಯು ಕಾಲೇಜಿಗೆ… ಕರ್ಣಾಟಕ ಬ್ಯಾಂಕ್ ವಿಲೀನಗೊಳಿಸುವ ಯಾವುದೇ ಪ್ರಸ್ತಾಪ ಇಲ್ಲ: ಬ್ಯಾಂಕಿನ ನೂತನ ವ್ಯವಸ್ಥಾಪಕ ನಿರ್ದೇಶಕ,… ಕರ್ನಾಟಕ ರಾಜ್ಯ ನರ್ಸಿಂಗ್ ಕೌನ್ಸಿಲ್ ಅಭಿವೃದ್ಧಿಪಡಿಸಿದ ವಿಶೇಷ ಡಿಜಿಲಾಕರ್ ಲೋಕಾರ್ಪಣೆ: ಮುಖ್ಯಮಂತ್ರಿ ಸಿದ್ದರಾಮಯ್ಯ… Kodagu | ಬೇಲೂರಿನಲ್ಲಿ ಉಪಟಳ ನೀಡುತ್ತಿದ್ದ ‘ಕರಡಿ’ ಆನೆಗೆ ದುಬಾರೆಯಲ್ಲಿ ‘ಬಬ್ರುವಾಹನ’ ಎಂದು… ಸಿಗಂಧೂರು ಸೇತುವೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ ಆಗಿಲ್ಲ: ಪ್ರತಿಪಕ್ಷ ನಾಯಕ ಆರ್.ಅಶೋಕ್ Chikkamagaluru | ಮೂಡಿಗೆರೆ: ವಿದ್ಯುತ್ ತಂತಿ ಸ್ವರ್ಶಿಸಿ ಅನ್ನದಾತ ದಾರುಣ ಸಾವು ಕಾರ್ಕಳ ಥೀಮ್ ಪಾರ್ಕ್‌ ಪರಶುರಾಮ ಮೂರ್ತಿ ಹಿತ್ತಾಳೆಯದ್ದೇ ಹೊರತು ಕಂಚಿನಿಂದ ಮಾಡಿದ್ದು ಅಲ್ಲ:… ಕನ್ನಡದ ಮೇರು ನಟಿ ಸರೋಜಾದೇವಿ ನಿಧನ: ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಿಎಂ ಬೊಮ್ಮಾಯಿ… Kodagu | ವಿರಾಜಪೇಟೆ: ಲೋಕೋಪಯೋಗಿ ಇಲಾಖೆಯ ವಸತಿ ಗೃಹದಲ್ಲಿ ಬೆಂಕಿ ಆಕಸ್ಮಿಕ; ಅಪಾರ…

ಇತ್ತೀಚಿನ ಸುದ್ದಿ

ಹಾಸನ ಮೂಲದ ವ್ಯಕ್ತಿ ಚಾರ್ಮಾಡಿ ಘಾಟ್ ನಲ್ಲಿ ಆತ್ಮಹತ್ಯೆಗೆ ಯತ್ನ: ಜೀವ ಉಳಿಸಿದ 112 ಪೊಲೀಸರು

17/12/2024, 10:19

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಚಾರ್ಮಾಡಿ ಘಾಟಿಯ ಏಕಲವ್ಯ ಶಾಲೆಯ ಸಮೀಪ ಹಾಸನ ಮೂಲದ ವ್ಯಕ್ತಿಯೋರ್ವ ಹರಿತದ ಆಯುಧದಿಂದ ಕುತ್ತಿಗೆ ಕೊಯ್ದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸೋಮವಾರ ಸಂಜೆ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆದರೆ 112 ಸಂಚಾರಿ ಪೊಲೀಸರು ವ್ಯಕ್ತಿ ಹಾಸನ ಮೂಲದ ಮನು ಎಂಬುವರನ್ನು ರಕ್ಷಿಸಿ ಉಳಿಸಿದ್ದಾರೆ. ಹಾಸನದಿಂದ ಕೊಟ್ಟಿಗೆಹಾರಕ್ಕೆ ಬಂದು ಚಾರ್ಮಾಡಿ ಘಾಟ್ ಬಳಿ ಏಕಲವ್ಯ ಶಾಲೆಯ ಸಮೀಪ ರಸ್ತೆಯಲ್ಲಿ ತನ್ನ ಕುತ್ತಿಗೆಯನ್ನು ಬ್ಲೇಡಿನಿಂದ ಕುಯ್ದು ಸ್ನೇಹಿತರಿಗೆ ವ್ಯಾಟ್ಸ್ ಆಫ್ ಮೂಲಕ ವೀಡಿಯೋ ಸಂದೇಶ ಕಳುಹಿಸಿದ್ದಾನೆ. ಆದರೆ ಅಲರ್ಟ್ ಆದ ಸ್ನೇಹಿತರು 112 ಸಂಚಾರಿ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ತಕ್ಷಣ ಕಾರ್ಯ ಪ್ರವೃತ್ತರಾದ 112 ಪೊಲೀಸರು ಚಾರ್ಮಾಡಿ ಘಾಟ್ ಗೆ ತೆರಳಿ ವ್ಯಕ್ತಿಯಿಂದ ಹರಿತವಾದ ಬ್ಲೇಡ್ ಕಸಿದು ಹರಸಾಹಸ ಪಟ್ಟು ಆತನನ್ನು ಹಿಡಿದು ಬಣಕಲ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಮೂಡಿಗೆರೆ ಎಂಜಿಎಂ ಆಸ್ಪತ್ರೆಯಲ್ಲಿ ಕುತ್ತಿಗೆಗೆ ವೈದ್ಯರಿಂದ ಹೊಲಿಗೆ ಹಾಕಿಸಿ ಪ್ರಾಣ ಉಳಿಸಿದ್ದಾರೆ. ಬಳಿಕ ಅವರ ಪತ್ನಿಗೆ ಕರೆ ಮಾಡಿ ಅವರೊಂದಿಗೆ ಕಳುಹಿಸಿಕೊಟ್ಟಿದ್ದಾರೆ. ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಬಿ ಎಸ್.ಅಭಿಷೇಕ್, ದಿಲೀಪ್, ಸುಂಕ ಬೋವಿ, ಓಂಕಾರ ನಾಯ್ಕ್ ಭಾಗವಹಿಸಿದ್ದರು. ಪೊಲೀಸರ ಕ್ಷಿಪ್ರವಾದ ಕಾರ್ಯವನ್ನು ಸಾರ್ವಜನಿಕರು ಪ್ರಶಂಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು