ಇತ್ತೀಚಿನ ಸುದ್ದಿ
ಹರ್ಷಿಕಾ ಪೂಣಚ್ಚ – ಭುವನ್ ದಂಪತಿ ಮಗುವಿನ ಮೊದಲ ವರ್ಷದ ಹುಟ್ಟುಹಬ್ಬ: ಹರಿದು ಬಂದ ಸ್ಯಾಂಡಲ್ ವುಡ್ ತಾರಾ ಬಳಗ
06/10/2025, 15:25

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnata@gmail.com
ಸ್ಯಾಂಡಲ್ ವುಡ್ ತಾರಾ ದಂಪತಿ ಭುವನ್ ಹಾಗೂ ಹರ್ಷಿಕ ಪೂಣಚ್ಚ ಅವರ ಮಗುವಿನ ಹುಟ್ಟುಹಬ್ಬ ಆಚರಣೆ ಬೆಂಗಳೂರಿನಲ್ಲಿ ಅದ್ದೂರಿಯಾಗಿ ನೆರವೇರಿದ್ದು, ಸ್ಯಾಂಡಲ್ ವುಡ್ ತಾರಾ ಬಳಗವೇ ಕಾರ್ಯಕ್ರಮಕೆ ಆಗಮಿಸಿ ಸಂಭ್ರಮಿಸಿದರು.
ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ. ಎಸ್. ಪೊನ್ನಣ್ಣ ಹಾಗೂ ಅವರ ಪತ್ನಿ
ಕಾಂಚನ್ ಪೊನ್ನಣ್ಣ ಸೇರಿದಂತೆ ಖ್ಯಾತ ನಟ ಗಣೇಶ್, ನಟಿ ಮಾಲಾಶ್ರೀ, ಪ್ರಿಯಾಂಕಾ ಉಪೇಂದ್ರ, ಶ್ರುತಿ, ನಿರ್ದೇಶಕ ಯೋಗರಾಜ್ ಭಟ್ ಮತ್ತಿತರ ಸಿನಿಮಾ ರಂಗದವರು ಹಾಜರಿದ್ದು ಮಗುವಿಗೆ ಆಶೀರ್ವದಿಸಿದರು.