ಇತ್ತೀಚಿನ ಸುದ್ದಿ
ಹಳ್ಳೂರ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವ, ರಥೋತ್ಸವ: ವಾದ್ಯಮೇಳದೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ
27/08/2024, 11:26
ಸಂತೋಷ್ ಬೆಳಗಾವಿ
info.reporterkarnataka@gmail.com
ಹಳ್ಳೂರ 26 ಗ್ರಾಮದಲ್ಲಿ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವವು ಹಾಗೂ ರಥೋತ್ಸವವು ಸೋಮವಾರದಂದು ಅತೀ ವಿಜೃಂಭಣೆಯಿಂದ ಜರುಗಿತು.
ಮುಂಜಾನೆ ಶ್ರೀ ಬಸವೇಶ್ವರ ವಿಶೇಷ ಪೂಜೆ ಅಭಿಷೇಕ ನಡೆದು ಗ್ರಾಮದ ಸರ್ವ ದೇವರಿಗೆ ಗ್ರಾಮಸ್ಥ ರು ನೈವೇದ್ಯ ಅರ್ಪಿಸಿದರು. ಸಾಯಂಕಾಲ ಸಮಯದಲ್ಲಿ ಶ್ರೀ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀ ಬಸವೇಶ್ವರ ಭವ್ಯ ರಥೋತ್ಸವಕ್ಕೆ ಪೂಜೆಯೊಂದಿಗೆ ಚಾಲನೆ ನೀಡಿದರು. ಗ್ರಾಮದ ಎರಡೂ ದೈವದ ಜೋಡು ಉಚಾಯಿ, ಕಾಂಡ್ಯಾಳು ಬಾಸಿಂಗ, ನಕ್ಷತ್ರ ಮಾಲೆ ರಾರಾಜಿಸುತ್ತಿದ್ದು ಹಾಗೂ ಸಕಲ ವಾದ್ಯಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ರಥೋತ್ಸವ ಜರುಗಿ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ಬಂದು ಸಂಪನ್ನಗೊಂಡಿತು. ಭಕ್ತಾದಿಗಳ ಇಷ್ಟಾರ್ಥಗಳನ್ನು ಈಡೇರಿಸುವ ಸಲುವಾಗಿ ರಥೋತ್ಸವ ಮೇಲೆ ಬೆಂಡು ಬತ್ತಾಸು ಖಾರಿಕು ಹಾರಿಸಿ ಹರಕೆ ತೀರಿಸಿದರು. ಜಾತ್ರೆಯಲ್ಲಿ ಶ್ರೀ ಬಸವೇಶ್ವರ ಮಹಾರಾಜಕಿ ಜೈ ಅಂಥ ಜೈ ಕಾರ ಹಾಕುತ್ತಿದ್ದರು. ಜಾತ್ರೆಯಲ್ಲಿ ಗ್ರಾಮಸ್ಥರು ಪಾಲ್ಗೊಂಡಿದ್ದರು.