11:23 PM Wednesday5 - November 2025
ಬ್ರೇಕಿಂಗ್ ನ್ಯೂಸ್
Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ… ದೀಪಾಲಂಕೃತ ವಿಧಾನ ಸೌಧ ಈಗ ಟೂರಿಸ್ಟ್ ಎಟ್ರೆಕ್ಷನ್ ಸೆಂಟರ್: ಸ್ಪೀಕರ್ ಖಾದರ್ ನಡೆಗೆ… ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ | ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ; ಒಳ್ಳೆ… ಮಂಡ್ಯ ಜಿಲ್ಲೆಯ 50ಕ್ಕೂ ಹೆಚ್ಚು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇಸಿಜಿ ಯಂತ್ರ Chikkamagaluru | ಶೃಂಗೇರಿ: ನರಹಂತಕ ಕಾಡಾನೆ ಕೊನೆಗೂ ಸೆರೆ; ಸಾಕಾನೆಯ ಮೂಲಕ ಕಾರ್ಯಾಚರಣೆ

ಇತ್ತೀಚಿನ ಸುದ್ದಿ

ಹಳ್ಳೂರ: ಹಿಂದೂ -ಮುಸ್ಲಿಂ ಭಾವೈಕ್ಯತೆಯ ಮೊಹರಂ ಹಬ್ಬ ಆಚರಣೆ

17/07/2024, 23:41

ಸಂತೋಷ್ ಬೆಳಗಾವಿ

info.reporterkarnataka@gmail.com

ಮೂಡಲಗಿ ತಾಲೂಕಿನ ಹಳ್ಳೂರದಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆಯ ಪ್ರತೀಕವಾದ ಮೊಹರಂ ಹಬ್ಬವನ್ನು ಬುಧವಾರದಂದು ಬೇಧ ಭಾವ ಇಲ್ಲದೆ ಗ್ರಾಮಸ್ಥರೆಲ್ಲರು ಸೇರಿ ಶ್ರದ್ಧಾ ಭಕ್ತಿಯಿಂದ ಆಚರಿಸಿದರು.
ಪಿರಸಾಭ ದರ್ಗಾ ದಿಂದ ದೇವರ ಡೊಲಿಯನ್ನು ಹೊರಗೆ ತಂದರು ಭಕ್ತರು ಲಾಲ್ ಸಾಬ್ ಕಿ ದೋಸ್ತ್ರಾ ದಿನ್ ಅನ್ನುತ್ತಾ ದೇವರ ಡೋಲಿಯ ಮೇಲೆ ಕಾರಿಕ್, ಬೆಂಡು ಬತ್ತಾಸು ಬಿಸ್ಕಿಟ್ಟ ಹಾರಿಸಿ ಹರಕೆ ತೀರಿಸಿದರು. ಗ್ರಾಮದ ಯುವಕರು ಖತಾಲಗಳ ಅನೇಕ ತಂಡದವರು ಹೆಜ್ಜೆ ಹಾಕುತ್ತಾ, ಕರಬಲ್ ಆಡುತ್ತಾ ಹೆಜ್ಜೆ ಕುಣಿತ ಲೇಜಿಮ್ ಕುಣಿತ, ಹಗ್ಗದ ಆಟ, ಬಾರಕೋಲ ಬಡಿತ, ತಾಳ ಬಡಿತ ಹೀಗೆ ಬೇರೆ ಬೇರೆ ಮನರಂಜನೆಯನ್ನು ಪ್ರದರ್ಶಿಸಿದರು. ಭವ್ಯವಾದ ಮೆರವಣಿಗೆ ನಡೆಯಿತು. ನಂತರ ಶ್ರೀ ಮಹಾಲಕ್ಷ್ಮೀ ದೇವಿ ದೇವಸ್ಥಾನದಲ್ಲಿ ದೇವರು ಎಬ್ಬಿಸಿ ವರ್ಷದ ಮಳೆ ಬೆಳೆ ಒಳ್ಳೇದು, ಕೆಟ್ಟದ್ದು ಹೇಳುವ ನುಡಿಗಳು ನಡೆದವು. ನಂತರ ದೇವರುಗಳನ್ನು ಬಾವಿಗೆ ಕಳುಹಿಸುವುದರ ಮೂಲಕ ಭಕ್ತಿಯನ್ನು ಸಮರ್ಪಿಸಿದರು. ಮೊಹರಂ ಹಬ್ಬದ ಆಚರಣೆಯಲ್ಲಿ ಸಹಸ್ರಾರು ಭಕ್ತರು ಹಾಗೂ ಹಿಂದೂ – ಮುಸ್ಲಿಂ ಸಮಾಜದ ಪ್ರಮುಖರು ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು