ಇತ್ತೀಚಿನ ಸುದ್ದಿ
ಹಳ್ಳಿಗಳಲ್ಲಿ ಸೋಂಕಿತರನ್ನು ಬಿಡಬೇಡಿ, ಕೋವಿಡ್ ಕೇಂದ್ರಕ್ಕೆ ಕರೆದು ತನ್ನಿ: ಶಾಸಕ ಸುರೇಶ ಗೌಡ ಸೂಚನೆ
24/05/2021, 11:10
ನಾಗಮಂಗಲ(reporterkarnataka news): ನಾಗಮಂಗಲ ತಾಲೂಕಿನಾದ್ಯಂತ ಹಳ್ಳಿಗಳಲ್ಲಿರುವ ಸೋಂಕಿತರನ್ನು ಗ್ರಾಮದಲ್ಲಿ ಕೋವಿಡ್ ಕೇಂದ್ರಕ್ಕೆ ಕರೆತನ್ನಿ ಎಂದು ಶಾಸಕ ಸುರೇಶ್ ಗೌಡ ಸೂಚನೆ ಕೊಟ್ಟರು.
ನಾಗಮಂಗಲದ ಮಿನಿ ವಿಧಾನಸೌಧ ಆವರಣದಲ್ಲಿ ನೋಡಲ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆಯನ್ನು ವಹಿಸುತ್ತಾ, ಪ್ರತಿ ನೋಡಲ್ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ವಹಿಸಿ ಸೋಂಕಿತರನ್ನು ಗ್ರಾಮಗಳಲ್ಲಿ ಬಿಡದೆ, ಅವರನ್ನು ಮನವೊಲಿಸಿ ಕರತರಬೇಕು. ತಾಲೂಕಿನ ಆಡಳಿತವು ಪೊಲೀಸ್ ಸಿಬ್ಬಂದಿ ನೀಡಲಿದ್ದಾರೆಂದು ತಿಳಿಸಿದರು ತಾಲೂಕಿನಲ್ಲಿ ಸೋಂಕಿತರನ್ನು ಬಿಟ್ಟರೆ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು ಮುಂಜಾಗೃತಾ ಕ್ರಮವಾಗಿ ಕೈಗೊಳ್ಳ ಬೇಕೆಂದು ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದರು.
ತಾಲೂಕು ದಂಡಾಧಿಕಾರಿಗಳಾದ ಕುಂಞಿ ಅಹಮದ್ ನೋಡಲ್ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರವಿದೆ. ಗ್ರಾಮಗಳಲ್ಲಿನ ಸೋಂಕಿತರನ್ನು ಪ್ರಮಾಣ ತಗ್ಗಿಸಬೇಕು. ಇರುವುದರಿಂದ ತಾಲ್ಲೂಕು ಆಡಳಿತದ ನಿಬಂಧನೆಗಳಿಗೆ ಒಳಪಟ್ಟು ಕೆಲಸ ನಿರ್ವಹಿಸಬೇಕೆಂದು ತಿಳಿಸಿದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತೀಶ್ ಕುಮಾರ್, ತಾಲ್ಲೂಕು ಆರೋಗ್ಯಧಿಕಾರಿ ಡಾ. ಪ್ರಸನ್ನ, ಪೊಲೀಸ್ ಇಲಾಖೆ ಸಿಬ್ಬಂದಿಗಳು ಹಾಜರಿದ್ದರು