ಇತ್ತೀಚಿನ ಸುದ್ದಿ
ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯಕ್ಕೆ ಹಾಜರಾಗದ ಆರೋಪಿಯ ಬಂಧನ: ಕದ್ರಿ ಪೊಲೀಸರಿಂದ ದಸ್ತಗಿರಿ
22/07/2023, 15:15
ಮಂಗಳೂರು(reporterkarnataka.com): ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ.
ಬೇಂಗ್ರೆಪಣಂಬೂರು ನಿವಾಸಿಯಾದ ಮಹಮ್ಮದ್ ಆಸಿಫ್ ( 27) ತಲೆಮೆರೆಸಿಕೊಂಡಿದ್ದ ಆರೋಪಿಯಾಗಿದ್ದು,ಈತನನ್ನು ಕದ್ರಿ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈತನ ವಿರುದ್ಧ ಮಂಗಳೂರು ನಗರದ ಉತ್ತರ ಪೊಲೀಸ್ ಠಾಣೆ ಉಳ್ಳಾಲ ,ಪೊಲೀಸ್ ಠಾಣೆ ಉಪ್ಪಿನಂಗಡಿ, ಪಣಂಬೂರು, ಚಿಕ್ಕಮಂಗಳೂರು ನಗರ ಹಾಗೂ ಇತರ ಕಡೆಗಳಲ್ಲಿ ಪ್ರಕರಣಗಳು ದಾಖಲಾಗಿರುತ್ತದೆ.