3:58 PM Friday29 - August 2025
ಬ್ರೇಕಿಂಗ್ ನ್ಯೂಸ್
Kodagu | ಗೋಣಿಕೊಪ್ಪದಲ್ಲಿ ಅಸ್ಸಾಂ ವ್ಯಕ್ತಿಯಿಂದ ಅಂಗಡಿ ಶಟರ್ ಮುರಿದು 32 ಹೊಸ… ಮಡಿಕೇರಿ – ವಿರಾಜಪೇಟೆ ಮುಖ್ಯರಸ್ತೆಯ ಮೇಕೇರಿ ಬಳಿ ಮಣ್ಣು ಕುಸಿತ: ವಾಹನ ಸಂಚಾರ… ಅ. 9ರಿಂದ 23ರವರೆಗೆ ಹಾಸನಾಂಬೆ ಉತ್ಸವ; ಈ ಬಾರಿ ದೇವಿ ದರ್ಶನ ನಿಯಮ… ಜಾತ್ಯತೀತತೆಯ ಸಂಕೇತವಾಗಿರುವ ನಾಡ ಹಬ್ಬ, ಧಾರ್ಮಿಕವಲ್ಲ: ಡಾ. ಪುರುಷೋತ್ತಮ ಬಿಳಿಮಲೆ Bangalore | ಪರಿಶಿಷ್ಟ ಜಾತಿ/ ಪಂಗಡ ದೌರ್ಜನ್ಯ ತಡೆ ಕಾಯ್ದೆ ಕಟ್ಟುನಿಟ್ಟಿನಲ್ಲಿ ಜಾರಿಗೊಳಿಸಿ:… Kodagu | ಸಿದ್ದಾಪುರ: ಕರಡಿಗೋಡು ವಂದನಾಪುರ ಎಸ್ಟೇಟ್ ಮನೆ ಆವರಣದಲ್ಲಿ ಕಾಡಾನೆಗಳ ದಾoಧಲೆ ಡಿಸ್ಕಸ್ ಥ್ರೋ ವೇಳೆ ಅವಘಡ: ವಿದ್ಯಾರ್ಥಿ ಗಂಭೀರ: ಮಂಗಳೂರು ಆಸ್ಪತ್ರೆಗೆ ದಾಖಲು ಬ್ರ್ಯಾಂಡ್ ಕರಾವಳಿ ಹೆಸರಲ್ಲಿ ಅಭಿವೃದ್ಧಿಗೆ ಒತ್ತು ನೀಡಬೇಕು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ನೇಹಿತನ ಆಟೋ ತರಲು ಹೋಗಿದ್ದ ಚಾಲಕ ಅಪಘಾತದಲ್ಲಿ ದುರ್ಮರಣ: ಕಾರು ಡಿಕ್ಕಿ ಹೊಡೆದು… ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ನಾಪತ್ತೆ ಪ್ರಕರಣ: ಸುಜಾತ ಭಟ್ ದೂರು ಎಸ್ಐಟಿಗೆ…

ಇತ್ತೀಚಿನ ಸುದ್ದಿ

ಹಲವು ಕೌಶಲ್ಯಗಳ ಹೊಂದಿದ್ದರೆ ಮಾತ್ರ ಉತ್ತಮ ಪತ್ರಕರ್ತನಾಗಲು ಸಾಧ್ಯ: ಹಿರಿಯ ಪತ್ರಕರ್ತ ಬಾಳೆಪುಣಿ

23/07/2022, 21:27

ಮಂಗಳೂರು(reporterkarnataka.com): ಈಗಿನ ತಂತ್ರಜ್ಞಾನಕ್ಕೆ ಹೊಂದಿಕೊಂಡು ಕೇವಲ ಒಂದು ಕ್ಷೇತ್ರದಲ್ಲಿ ಅಲ್ಲದೇ ಎಲ್ಲಾ ಕ್ಷೇತ್ರಗಳಲ್ಲಿನ ಜ್ಞಾನವನ್ನು ಹೊಂದಿರುವವನು ಉತ್ತಮ ಪತ್ರಕರ್ತನಾಗಲು ಸಾಧ್ಯ ಎಂದು ಹೊಸದಿಗಂತ ಪತ್ರಿಕೆಯ ವಿಶೇಷ ವರದಿಗಾರ ಎನ್.ಟಿ. ಗುರುವಪ್ಪ ಬಾಳೆಪುಣಿ ಹೇಳಿದರು.

ಶನಿವಾರ ನಗರದ ರಥಬೀದಿಯ ಡಾ.ಪಿ.ದಯಾನಂದ ಪೈ-ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಆಂತರಿಕ ಗುಣಮಟ್ಟ ಭರವಸಾ ಕೋಶ ಮತ್ತು ಪತ್ರಿಕೋದ್ಯಮ ವಿಭಾಗ ಸಹಯೋಗದಲ್ಲಿ ನಡೆದ ಇನ್ ಡಿಸೈನ್ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. 

ಪತ್ರಕರ್ತರು ಮುಖ್ಯವಾಗಿ ಸಂವಹನ ಕಲೆಯನ್ನು ಹೊಂದಿರಬೇಕು. ಪತ್ರಕರ್ತನಾದವನಿಗೆ ಕೇವಲ ಒಂದು ಕೌಶಲ್ಯ ಮಾತ್ರವಲ್ಲ ಹಲವು ಕೌಶಲ್ಯಗಳನ್ನು ಹೊಂದಿದ್ದರೆ ಮಾತ್ರ ಉತ್ತಮ ಪತ್ರಕರ್ತನಾಗಲು ಸಾಧ್ಯ ಎಂದರು.

ಪತ್ರಕರ್ತನಾದವನು ದೊಡ್ಡ ವ್ಯಕ್ತಿಗಳ ಬಗ್ಗೆ ಬರೆಯುವುದು ಮಾತ್ರವಲ್ಲದೇ, ಸಣ್ಣ ಮಟ್ಟದ ಪ್ರತಿಭೆಗಳನ್ನು ಗುರುತಿಸಿ ಬರೆಯುವುದರಿಂದ ಅವರೊಂದಿಗೆ ಪತ್ರಕರ್ತನ ಬೆಳವಣಿಗೆಯೂ ಸಾಧ್ಯ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಜಯಕರ ಭಂಡಾರಿ ಎಂ. ಮಾತನಾಡಿ ಪಠ್ಯದೊಂದಿಗೆ ಕೌಶಲ್ಯವು ಅಗತ್ಯವಿದ್ದು, ಒಬ್ಬ ವ್ಯಕ್ತಿಯನ್ನು ತಿದ್ದಿತೀಡಿದಾಗ ಉತ್ತಮ ಪತ್ರಕರ್ತನಾಗಲು ಸಾಧ್ಯ ಎಂದ ಅವರು ತರಬೇತಿಯ ಪ್ರಯೋಜನವನ್ನು ಪ್ರತಿಯೊಬ್ಬ ವಿದ್ಯಾರ್ಥಿಯು ಪಡೆಯಬೇಕು ಎಂದರು.

ವಿಜಯ ಕರ್ನಾಟಕ ಪತ್ರಿಕೆಯ ಉಪಸಂಪಾದಕ ಧರಣೇಶ್ ಕೆ.ಬಿ. ಅವರು ವಿದ್ಯಾರ್ಥಿಗಳಿಗೆ ಇನ್ ಡಿಸೈನ್ ಕಾರ್ಯಾಗಾರವನ್ನು ನಡೆಸಿಕೊಟ್ಟರು.


ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಪ್ರೊ. ಶಾಂತಿ ಉಪಸ್ಥಿತರಿದ್ದರು. ಚೇತನಾ ನಾಯಕ್ ಹಾಗೂ ಅಭಿಷೇಕ್ ಹೆಚ್.ಎಸ್. ಸಂಯೋಜಿಸಿದರು. ವಿದ್ಯಾರ್ಥಿಗಳಾದ ರಕ್ಷಿತಾ ನಿರೂಪಿಸಿದರು. ಶುಭಶ್ರೀ ಸ್ವಾಗತಿಸಿ, ಕಾವ್ಯ ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು