ಇತ್ತೀಚಿನ ಸುದ್ದಿ
ಹಗಲಿನಲ್ಲೇ ಕಾಡು ಕೋಣಗಳ ದರ್ಶನ: ಮಲೆನಾಡಿನಲ್ಲಿ ಹೆದ್ದಾರಿಯಲ್ಲೇ ಸಾಲು ಸಾಲು ಮೆರವಣಿಗೆ
20/09/2022, 09:52

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಮಲೆನಾಡಿನದ್ಯಂತ ಕಾಡು ಪ್ರಾಣಿಗಳ ಉಪಟಳ ಮಿತಿಮೀರಿದ್ದು ಹಾಡು ಹಗಲೇ ಕಾಡು ಪ್ರಾಣಿಗಳು ಎಲ್ಲೆಂದರಲ್ಲಿ ವಾಹನಗಳಿಗೆ ಅಡ್ಡ ಬರುತ್ತಿದ್ದು ಸಾರ್ವಜನಿಕರು ಭಯಭೀತರಾಗಿದ್ದಾರೆ.
ಇಂದು ಬೆಳಿಗ್ಗೆ ಮೂಡಿಗೆರೆ ತಾಲೂಕಿನ ಜಾವಳಿ ಸಮೀಪ ಕಾಡುಕೋಣಗಳ ಹಿಂದು ಹೆದ್ದಾರಿಗೆ ಅಡ್ಡ ಬಂದಿದ್ದು ಇದನ್ನು ಆಟೋ ಚಾಲಕ ಶಶಿಯವರು ತಮ್ಮ ಮೊಬೈಲ್ ಕ್ಯಾಮರದಲ್ಲಿ ವಿಡಿಯೋ ಸೆರೆ ಹಿಡಿದಿದ್ದಾರೆ.
ಹೆದ್ದಾರಿಯೂ ಹೊರನಾಡು ಹೋಗುವ ಮುಖ್ಯ ರಸ್ತೆಯಾಗಿದ್ದು ಸಾವಿರಾರು ವಾಹನಗಳು ದಿನಂಪ್ರತಿ ಸಂಚರಿಸುತ್ತೇವೆ ಇತ್ತೀಚೆಗೆ ಕಾಡುಕೋಣ ಒಂದು ಆಟೋರಿಕ್ಷವನ್ನು ಪಲ್ಟಿ ಮಾಡಿದ ದೃಶ್ಯ ಎಲ್ಲೆಡೆ ವೈರಲ್ ಆಗಿತ್ತು ಇಂದು ಕಾಡುಕೋಣಗಳ ಗುಂಪು ಆಟೋರಿಕ್ಷಕ್ಕೆ ಅಡ್ಡ ಬಂದಿರುವುದರಿಂದ ಜನರು ಭಯಭೀತರಾಗಿದ್ದಾರೆ.