1:33 AM Tuesday16 - September 2025
ಬ್ರೇಕಿಂಗ್ ನ್ಯೂಸ್
Belagavi | ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗೆ ಬಡ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೂ ಸ್ವಾಧೀನ ಪ್ರಕ್ರಿಯೆ ಅಕ್ರಮ ಕೂಡಲೇ ಕೈಬಿಡಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಗ್ರಹ ಪಾಲಿಕೆಯೇ ಪಾಪರ್‌ ಆಗಿರುವಾಗ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ: ಪ್ರತಿಪಕ್ಷದ ನಾಯಕ ಆರ್.… ಮತಗಳ್ಳತನಕ್ಕೆ ಅವಕಾಶ ನೀಡಬೇಡಿ: ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಪರಿಹಾರದಾಸೆಗೆ ಪತಿಯ ಕೊಲೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಸಿಕ್ಕಿಬಿದ್ದ ಪತ್ನಿ;… Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ 2026ರ ಮಾರ್ಚ್‌ಗೆ PM KUSUM 2ನೇ ಹಂತ ಅನುಷ್ಠಾನ: ಕೇಂದ್ರ ಸಚಿವ ಪ್ರಹ್ಲಾದ್… ವಿಧಾನ ಪರಿಷತ್ ಸದಸ್ಯರಾಗಿ ಡಾ. ಆರತಿಕೃಷ್ಣ, ರಮೇಶ್ ಬಾಬು ಸಹಿತ ನಾಲ್ವರು ಪ್ರಮಾಣ… ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು… Kodagu | ಕಾಲೇಜಿನಲ್ಲಿ ಮಚ್ಚು ಹಿಡಿದು ರೀಲ್ಸ್: ವಿದ್ಯಾರ್ಥಿ ವಿರುದ್ದ ಪ್ರಕರಣ ದಾಖಲು;…

ಇತ್ತೀಚಿನ ಸುದ್ದಿ

ಗುರುಪುರ ಕೈಕಂಬ: ಬ್ಯಾರಿ ಸಾಹಿತ್ಯ ಅಕಾಡೆಮಿಯಿಂದ ಆಕರ್ಷಕ ಬ್ಯಾರಿ ತಾಲೀಮು ಜಲ್ಸ್, ಸಂಗೀತ ರಸಮಂಜರಿ

15/03/2022, 20:24

ಮಂಗಳೂರು( reporterkarnataka.com): ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ 
ಗುರುಪುರದ ಎಮ್.ಜಿ.ಎಮ್ ತಾಲೀಮು ಸ್ಫೋಟ್ಸ್ ಸಹಕಾರದಲ್ಲಿ “ಬ್ಯಾರಿ ತಾಲೀಮು ಜಲ್ಸ್ -2022 “ಕಾರ್ಯಕ್ರಮ ಗುರುಪುರ ಕೈಕಂಬದಲ್ಲಿ ನಡೆಯಿತು. 


ಅಧ್ಯಕ್ಷತೆಯನ್ನು ವಹಿಸಿದ್ದ ಬ್ಯಾರಿ ಅಕಾಡೆಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ಮಾತನಾಡಿ, ಸರ್ಕಾರ ಬದಲಾದಾಗ ಅಕಾಡೆಮಿ ಅಧ್ಯಕ್ಷರು ಬದಲಾಗ್ತಾರೆ. ಆದರೆ ಅಕಾಡೆಮಿ ಪಕ್ಷದ್ದಾಗಿರುವುದಿಲ್ಲ. ಸರ್ಕಾರದ ಅಕಾಡೆಮಿ ಆಗಿರುತ್ತದೆ. ನಾನು ಈವರೆಗೂ ಅಕಾಡೆಮಿಯಲ್ಲಿ ರಾಜಕೀಯ ಮಾಡಿಲ್ಲ. ಕೋರೊನದಂತಹ ಸಂದಿಗ್ದ ಪರಿಸ್ಥಿಯಲ್ಲಿ 140 ಮಂದಿ  ಸಾಹಿತಿಗಳಿಗೆ ಆಹಾರದ ಕಿಟನ್ನು , 350 ಮಂದಿಗೆ ಧನಸಹಾಯ ಮಾಡಿದ್ದೀವಿ. ಅಕಾಡೆಮಿ ಭಾಷೆ, ಸಂಸ್ಕೃತಿ, ಕಲೆ, ಸಾಹಿತ್ಯದ ಬೆಳವಣಿಗೆಗೆ ಇರುವುದು ಎಂದರು.  


ಇನ್ನು 6ನೇ ತರಗತಿಯಿಂದ ತೃತೀಯ ಐಚ್ಚಿಕ ಭಾಷೆಯಾಗಿ ಪರಿಗಣಿಸಲು ಸರ್ಕಾರಕ್ಕೆ ಮನವಿ ಮಾಡಿದ್ದು  ಇದರ ಕೆಲಸ ನಡೆಯುತ್ತಿದೆ. ಅಲ್ಲದೇ ಬ್ಯಾರಿ ಜಾನಪದ ಕಲೆಗಳ ಡಿಫ್ಲೋಮಾ ಕೋರ್ಸ್ ಆರಂಭ ಮಾಡಿದ್ದೇವೆ ಎಂದರು. 

ಎಸ್.ವೈ.ಎಸ್ ಯುನಿಟ್, ಗುರುಪುರ ಕೈಕಂಬದ ಅಧ್ಯಕ್ಷ ಎಮ್.ಹೆಚ್. ಮೊಹಿಯುದ್ದೀನ್ ಹಾಜಿ ಅಡ್ಡೂರ್ ಕಾರ್ಯಕ್ರಮ ಉದ್ಘಾಟಿಸಿದರು. ಗುರುಪುರ ಗ್ರಾಮ ಪಂಚಾಯತ್ ನ ಅಧ್ಯಕ್ಷ ಯಶವಂತ ಶೆಟ್ಟಿ , ಬಹುಭಾಷಾ ಕವಿ ಮಹಮ್ಮದ್ ಬಡ್ಡೂರು,  ಗಂಜಿಮಠ ಗ್ರಾಮ ಪಂಚಾಯತ್ ನ ಅಧ್ಯಕ್ಷ ನೋಣಯ್ಯ ಕೋಟ್ಯಾನ್ , ಗುರುಪುರ ಗ್ರಾಮ ಪಂಚಾಯತ್ ಸದಸ್ಯರಾಜೇಶ್ ಕುಮಾರ್ , ಗ್ರಾಮ ಪಂಚಾಯತ್ ಸದಸ್ಯ ಎ.ಕೆ. ರಿಯಾಜ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತ ಲಯನ್ ಇ.ಕೆ.ಎ .ಸಿದ್ದೀಕ್ ಅಡ್ಡೂರು, ಇಬ್ರಾಹಿಂ ಸಮಾಜ ಸೇವಕ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಯು.ಪಿ.ಇಬ್ರಾಹಿಂ ಬಜ್ಪೆ, ಅಖಿಲ ಭಾರತ ಬ್ಯಾರಿ ಪರಿಷತ್ ನ ಅಧ್ಯಕ್ಷ ಜಿ.ಎಮ್ .ಶಾಹುಲ್ ಹಮೀದ್ ಹಾಜಿ ಮೆಟ್ರೋ, ಸಮಾಜ ಸೇವಕರು ಹಾಗೂ ಉದ್ಯಮಿ ಗುರುಪುರ ಅಬ್ದುಲ್ ಲತೀಫ್,  ಮದರಸ ಮ್ಯಾನೇಜ್ ಮೆಂಟ್ ಗುರುಪುರ ರೇಂಜ್ ನ ಅಧ್ಯಕ್ಷ ಹಾಗೂ ಸಮಾಜ ಸೇವಕ ನೌಶಾದ್ ಹಾಜಿ, ಆದರ್ಶ್ ಗ್ರೂಪ್ ಆಫ್ ಇನ್ಸಿಟ್ಯೂಷನ್ ನಿರ್ದೇಶಕ ಹಾಗೂ ಸಮಾಜ ಸೇವಕ ಆಸಿಫ್ ಸೂರಲ್ಪಾಡಿ , ಉಮ್ಮಗ್ ಒರು ಅಗ ಸಂಸ್ಥೆಯ ಅಧ್ಯಕ್ಷ ಮುಸ್ತಫ ಇಂಜಿನಿಯರ್ ದೆಮ್ಮಲೆ ಅಡ್ಡೂರು, ತಕ್ವಿಯತುಲ್ ಇಸ್ಲಾಂ ಮದರಸದ ಅಧ್ಯಕ್ಷ  ಅನ್ಸಾರ್ ಇಂಜಿನಿಯರ್ ಅದ್ಯಪಾಡಿ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವಿಶೇಷ ಆಹ್ವಾನಿತರಾಗಿ ಚಲನಚಿತ್ರ ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ, ಸಂತ ಅಲೋಶಿಯಸ್ ಕಾಲೇಜಿನ ಉಪನ್ಯಾಸಕಿ ಫ್ಲೋರಾ ಕ್ಯಾಸ್ಟಲಿನೋ, ಸಮಾಜ ಸೇವಕ, ಉದ್ಯಮಿ ಎಮ್. ಎಸ್ ಶೇಖ್ ಮೋನು ಅಡ್ಡೂರು, ಎದುರು ಪದವು ಜುಮ್ಮಾ ಮಸೀದಿಯ ಅಧ್ಯಕ್ಷ ಹನೀಫ್, ಉದ್ಯಮಿ ಎಮ್ ಜಿ ಅಬ್ದುಲ್ ಬಶೀರ್ ಗುರುಪುರ, ಫ್ರೆಂಡ್ಸ್ ಸರ್ಕಲ್ ಕೆ ಗುರುಪುರ ಕೈಕಂಬ ಇದರ ಅಧ್ಯಕ್ಷ ಅಬ್ದುಲ್ಲಾ ಮೇಫಾ, ಐಡಿಯಲ್ ಮರ್ಕಜ್ ಕೈಕಂಬ ಇಸ್ಮಾಯಿಲ್ ಬಶೀರ್, ಸಮಾಜ ಸೇವಕ, ಉದ್ಯಮಿ ಎ.ಕೆ. ಹಾರೀಸ್ ಅಡ್ಡೂರು, ಸಮಾಜ ಸೇವಕ ಅಡ್ಡೂರು ಡಿ.ಎಸ್.ರಫೀಕ್, ಮೋದಿ ಪರಿವಾರ್ ರಿಕ್ಷಾ ಚಾಲಕರು ಕೈಕಂಬ ಇದರ ಅಧ್ಯಕ್ಷ ಸತೀಶ್ ಜೋಗಿ ಮಟ್ಟಿ, ಅಬ್ದುಲ್ ಕಾದರ್ ಎನ್ ಕೆ ನಡುಗುಡ್ಡೆ, ಬಾಮಿ ಆಂಗ್ಲಮಾಧ್ಯಮ ಶಾಲೆ ತೆಂಕುಳಿಪಾಡಿಯ ಗುರುಪುರದ ನಿಕಟಪೂರ್ವ ಪ್ರಾಂಶುಪಾಲ ಹೆಚ್ ನಾಸಿರ್ ಮಾಸ್ಟರ್ ಹಿರೇಬಂಡಾಡಿ, ಎಸ್.ವೈ.ಎಸ್ ಯುನಿಟ್ ಗುರುಪುರ ಕೈಕಂಬದ ನಿರ್ದೇಶಕ ಹಂಝ ಕೈಕಂಬ, ಎಮ್.ಜೆ. ಎಮ್ . ತಾಲೀಮು ಸ್ಫೋಟ್ಸ್ (ರಿ) ಗುರುಪುರದ ಕಾರ್ಯದರ್ಶಿ ಎಂ.ಜಿ ಅಬ್ದುಲ್ ಸಲಾಂ ಗುರುಪುರ, ಅನ್ಸಾರ್, ಇನ್ ಬಾಕ್ಸ್ ಮೂಡಬಿದಿರೆ, ಬದ್ರುದ್ದೀನ್ ,ಇನ್ ಬಾಕ್ಸ್ ಮೂಡಬಿದಿರೆ  ಅವರುಗಳು ಭಾಗವಹಿಸಿದರು.  ಬಳಿಕ ಅಕಾಡೆಮಿ ವತಿಯಿಂದ  ವಿಕಾಯ ಕೈಕಂಬ ಎಸ್ ಕೆಎಸ್ ಎಸ್ ಎಫ್ ಗುರುಪುರ ಕೈಕಂಬ (ಸಮಾಜ ಸೇವೆ), ಸಹಾಯ್ ಎಸ್ ಎಸ್ ಎಫ್ ಗುರುಪುರ ಕೈಕಂಬ (ಸಮಾಜ ಸೇವೆ), ಮಹಮ್ಮದ್ ಕುಂಞ (ಗುರುಕುಲ ಪ್ರಶಸ್ತಿ ವಿಜೇತರು), ಮುಝಮ್ಮಿಲ್ ನೂಯಿ (ಸಮಾಜಸೇವೆ), ಎ.ಕೆ.ಇಮ್ರಾನ್ ಅಡ್ಡೂರು (ಸಮಾಜ ಸೇವೆ), ಅಬ್ದುಲ್ ಜಲೀಲ್ ಅಡ್ಡೂರು (ಸಮಾಜ ಸೇವೆ), ಕಲಂದರ್ ಬಜ್ಪೆ  (ಸಾಹಿತಿ ಕವಿ ಚಿಂತಕರು), ತಾಜುದ್ದೀನ್ ಅಮ್ಮುಂಜೆ (ಸಾಹಿತಿ ಗಾಯಕರು), ಝಕರೀಯ ಅಡ್ಡೂರು (ಸೌಹಾರ್ದತೆ), ಅರ್ಫರಾಝ್ ಉಳ್ಳಾಲ (ಗಾಯಕರು), ಇಸ್ಮಾಯಿಲ್ ಮೂಡುಶೆಡ್ಡೆ (ಚಲನಚಿತ್ರ ನಿರ್ದೇಶಕರು), ಫ್ರೆಂಡ್ಸ್ ಸರ್ಕಲ್ ಕೈಕಂಬ (ಸಮಾಜ ಸೇವೆ), ಎಮ್ ಎಚ್ ಮುಹಿಯ್ಯದ್ದೀನ್ ಅಡ್ಡೂರು (ಸಮಾಜ ಸೇವೆ), ಅಝೀಝ್ ಕಂದಾವರ (ಸಮಾಜ ಸೇವೆ ), ಮಯ್ಯದ್ದೀ ಉಳಾಯಿಬೆಟ್ಟು (ಧಾರ್ಮಿಕ ) ಅವರನ್ನು ಸನ್ಮಾನಿಸಲಾಯಿತು. 


ನಂತರ ಎಮ್.ಜಿ.ಎಮ್ ತಾಲೀಮು ಸ್ಫೋರ್ಟ್ಸ್ ಕ್ಲಬ್ ನಿಂದ ತಾಲೀಮು ಪ್ರದರ್ಶನ ಯಶಸ್ವಿಯಾಗಿ ನಡೆಯಿತು.  ಹಸನಬ್ಬ ಮೂಡಬಿದಿರೆ  ಅವರಿಂದ ಬ್ಯಾರಿ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು. 

ಮಹಮ್ಮದ್ ಕುಂಞ ಸ್ವಾಗತಿಸಿದರು. ಕಾರ್ಯಕ್ರಮದ ಸದಸ್ಯ ಸಂಚಾಲಕ ಅಕಾಡೆಮಿಯ ಸದಸ್ಯರಾದ ಶಂಶೀರ್ ಬುಡೋಳಿ ಕಾರ್ಯಕ್ರಮ ನಿರೂಪಿಸಿ ಧನ್ಯವಾದಗೈದರು.

ಇತ್ತೀಚಿನ ಸುದ್ದಿ

ಜಾಹೀರಾತು