ಇತ್ತೀಚಿನ ಸುದ್ದಿ
ಗುಂಡ್ಯ ಹೊಳೆ ಬದಿ ಮರಿಯಾನೆ ಶವ ಪತ್ತೆ: ಆಹಾರ ಹುಡುಕಿಕೊಂಡು ಬಂದು ಪ್ರವಾಹಕ್ಕೆ ಕೊಚ್ಚಿ ಹೋಯಿತೇ ಪಾಪಚ್ಚಿ.?
09/07/2022, 12:54

ಸಾಂದರ್ಭಿಕ ಚಿತ್ರ
ಗುಂಡ್ಯ(reporterkarnataka.com): ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಗೆ ಸೇರಿದ ಶಿರಾಡಿ ಗ್ರಾಮದ ಗುಂಡ್ಯ ಸಮೀಪ ಮರಿಯಾನೆಯೊಂದರ ಶವ ಪತ್ತೆಯಾಗಿದೆ. ಸುಮಾರು 5 ತಿಂಗಳ ಆನೆ ಮರಿಯ ಶವ ಇದಾಗಿದೆ ಎಂದು ತಿಳಿದು ಬಂದಿದೆ.
ಶಿರಾಡಿ ಗಡಿ ಚೌಡೇಶ್ವರಿ ದೇವಸ್ಥಾನದ ಪಕ್ಕದ ಗುಂಡ್ಯ ಹೊಳೆ ಬದಿ ಈ ಗಂಡು ಆನೆ ಮರಿಯ ಶವ ಪತ್ತೆಯಾಗಿದ್ದು, ಘಟ್ಟ ಪ್ರದೇಶದಲ್ಲಿ ಆಹಾರ ಹುಡುಕುವ ವೇಳೆ ಕಾಲು ಜಾರಿ ನೀರಿಗೆ ಬಿದ್ದು, ಕೊಚ್ಚಿಕೊಂಡು ಬಂದಿರಬೇಕು ಎಂದು ಶಂಕಿಸಲಾಗಿದೆ.
ಇದು ಸಕಲೇಶಪುರ ವಲಯ ಅರಣ್ಯ ವ್ಯಾಪ್ತಿಯ ಮಾರನಹಳ್ಳಿ ಶಾಖೆ ಕೆಂಪುಹೊಳೆ ಮೀಸಲು ಅರಣ್ಯ ಪ್ರದೇಶವಾಗಿದ್ದು, ಘಟನೆಯ ಮಾಹಿತಿ ಪಡೆದು ಅರಣ್ಯಾಧಿಕಾರಿಗಳು ಸ್ಥಳಕ್ಕೆ ತೆರಳಿದ್ದಾರೆ.