ಇತ್ತೀಚಿನ ಸುದ್ದಿ
ಗ್ರಾಪಂ ಸದಸ್ಯೆ ಪತಿ ಕೊಲೆ ಪ್ರಕರಣ: ಮತ್ತಿಬ್ಬರು ಪ್ರಮುಖ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ
05/11/2024, 17:13
ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ನಂಜನಗೂಡು ತಾಲ್ಲೂಕಿನ ದೇವರಸನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆಯ ಪತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಿಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ತಾಲೂಕು ಉಪ್ಪಾರ ಸಂಘದ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು.
ನಂಜನಗೂಡು ತಾಲ್ಲೂಕಿನ ದೇವರಸನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನದ ವಿಚಾರವಾಗಿ ತಿಂಗಳ ಹಿಂದೆ ಕೆಬ್ಬೇಪುರ ಗ್ರಾಮದ ದೇವರಸನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆ ಸೌಭಾಗ್ಯ ಎಂಬವರ ಪತಿ ನಂಜುಂಡಸ್ವಾಮಿ ಎಂಬುವರನ್ನು ಅಧಿಕಾರದ ದುರಾಸೆಗೆ ಫ್ರೀ ಪ್ಲಾನ್ ಮಾಡಿ ಮರ್ಡರ್ ಮಾಡಲಾಗಿತ್ತು.
ಈಗಾಗಲೇ ಕೊಲೆಗೆ ಸಂಬಂಧಿಸಿದಂತೆ ಐದು ಜನ ಆರೋಪಿಗಳನ್ನು ಬಂಧಿಸಲಾಗಿದೆ. ಕೊಲೆ ಕೇಸಿಗೆ ಸಂಬಂಧಿಸಿದಂತೆ ಹಾಗೂ ಕೊಲೆ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಿದ ನಮ್ಮ ಸಮಾಜದವರೇ ಆದ ಮತ್ತಿಬ್ಬರು ಪ್ರಮುಖ ಆರೋಪಿಗಳಾದ ಬಾಲಚಂದ್ರ ಮತ್ತು ಗೋಳೂರು ಮಂಜು ಎಂಬವರನ್ನು ಬಂಧಿಸುವಂತೆ ಪ್ರತಿಭಟನಾಕಾರರು ಮತ್ತು ಕುಟುಂಬಸ್ಥರು ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆಗೆ ಒತ್ತಾಯಿಸಿದ್ದಾರೆ.
ನಂಜನಗೂಡು ನಗರದ ತಾಲ್ಲೂಕು ಆಡಳಿತ ಭವನದ ಮುಂಭಾಗದಲ್ಲಿ ಜಮಾಯಿಸಿದ ಉಪ್ಪಾರ ಸಂಘದ ಪದಾಧಿಕಾರಿಗಳು ಮತ್ತು ಮುಖಂಡರುಗಳು ದಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡರು ಹಾಗೂ ಮೃತನ ಪತ್ನಿ ಸೌಭಾಗ್ಯ ಮಾತನಾಡಿ ಕೂಡಲೇ ಮಂಜು ಮತ್ತು ಬಾಲು ಅವರನ್ನು ಬಂಧಿಸಬೇಕು. ಬಂಧಿತ ವ್ಯಕ್ತಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಮೃತನ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲೂ ಇನ್ನೂ ಹೆಚ್ಚಿನ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.
ತಹಶೀಲ್ದಾರ್ ಶಿವಕುಮಾರ್ ಕಾಸನೂರು ಹಾಗೂ ಡಿ ವೈ ಎಸ್ ಪಿ ರಘು ರವರಿಗೆ ಮನವಿಪತ್ರ ನೀಡುವುದರ ಮೂಲಕ ಉಳಿದ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಲು ಗಡುವು ನೀಡಿ ಎಚ್ಚರಿಸಿದರು. ಅಲ್ಲದೆ
ಸೌಭಾಗ್ಯ ಅವರಿಗೆ ಅಧ್ಯಕ್ಷ ಸ್ಥಾನ ಕಲ್ಪಿಸಿ ಕೊಡಬೇಕು ಎಂದು ಅಗ್ರಹಿಸಿದರು
ಪ್ರತಿಭಟನೆಯಲ್ಲಿ ತಾಲ್ಲೂಕು ಉಪಾರರ ಸಂಘದ ಮುಖಂಡರುಗಳಾದ ಮೂಗ ಶೆಟ್ಟಿ, ಸೋಮಣ್ಣ, ಕೆ ಬಿ
ಸ್ವಾಮಿ, ಕರಳಪುರ ನಾಗರಾಜ್, ಮಹದೇವ್, ಮುದ್ದು ಮಾದ ಶೆಟ್ಟಿ, ಲತಾ ಸಿದ್ದಶೆಟ್ಟಿ ಸಿದ್ದರಾಜು, ಶಿವಣ್ಣ, ಸೋಮು ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಉಪ್ಪಾರ ಸಮುದಾಯದ ನೂರಾರು ಮುಖಂಡರು ಭಾಗವಹಿಸಿದ್ದರು.