4:21 AM Thursday4 - September 2025
ಬ್ರೇಕಿಂಗ್ ನ್ಯೂಸ್
ಕೋಲಾರ ತಾಲೂಕಿನ 30 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ Mysore | ವಿಶ್ವ ವಿಖ್ಯಾತ ಮೈಸೂರು ದಸರಾ ಉದ್ಘಾಟನೆ: ಸಾಹಿತಿ ಬಾನು ಮಸ್ತಾಕ್… ಜಿಎಸ್ ಟಿ ಸರಳೀಕರಣ ಗ್ರಾಹಕ ಸ್ನೇಹಿ ತೀರ್ಮಾನ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮುಳ್ಳಯ್ಯನಗಿರಿ, ದತ್ತಪೀಠ ಮಾರ್ಗದಲ್ಲಿ ರಸ್ತೆ ಕುಸಿತದ ಭೀತಿ: ಸೆ. 14ವರೆಗೆ ಪ್ರವಾಸ ಮುಂದೂಡುವಂತೆ… ದಾವಣಗೆರೆಯಲ್ಲಿ ಎಸ್‌ಎಸ್ ಕೇರ್ ಟ್ರಸ್ಟ್ ವಿದ್ಯಾರ್ಥಿ ವಿಭಾಗದ “ಆರಂಭ”ಕ್ಕೆ ಚಾಲನೆ ಅಕ್ರಮ ಮಾದಕ ವಸ್ತು ಮಾರಾಟ: ಅಸ್ಸಾಂ ಮೂಲದ ಇಬ್ಬರು ಆರೋಪಿಗಳು ಅರೆಸ್ಟ್: 2… ಸೌಜನ್ಯ ಪ್ರಕರಣ | ಸುಪ್ರೀಂಕೋರ್ಟ್ ಮೊರೆ ಹೋದರೆ ಸಂಪೂರ್ಣ ಬೆಂಬಲ: ಬಿಜೆಪಿ ರಾಜ್ಯಾಧ್ಯಕ್ಷ… ಸರಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ವಿಶೇಷ ಪೌಷ್ಟಿಕ ಆಹಾರ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್… ಕೊಡಗಿನಾದ್ಯoತ ಕೈಲೂ ಮುಹೂರ್ತ ಹಬ್ಬ ಸಂಭ್ರಮ: ಮಾಂಸ ಖರೀದಿ ಜೋರು ಮಗು ಹೊಟ್ಟೆಯಲ್ಲಿರುವಾಗಲೇ ವಾಕ್ ಮತ್ತು ಶ್ರವಣ ಸಮಸ್ಯೆ ಪತ್ತೆ ಹಚ್ಚಲು ಸಾಧ್ಯವಾಗಿರುವುದು ನಿಜಕ್ಕೂ…

ಇತ್ತೀಚಿನ ಸುದ್ದಿ

ಗ್ರಾಪಂ ಸದಸ್ಯೆ ಪತಿ ಕೊಲೆ ಪ್ರಕರಣ: ಮತ್ತೋರ್ವ ಆರೋಪಿ ಬಂಧನ; ಬಿಜೆಪಿ ಮುಖಂಡ ಧನರಾಜ್ ಭೂಲಾ ಅಂದರ್

25/10/2024, 18:38

ಮೋಹನ್ ನಂಜನಗೂಡು ಮೈಸೂರು

info.reporterkarnataka@gmail.com

ನಂಜನಗೂಡು ತಾಲೂಕು ದೇವರಸನಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯೆ ಪತಿ ನಂಜುಂಡಸ್ವಾಮಿ ಕೊಲೆ ಪ್ರಕರಣಕ್ಕೆ ಸಂಭಂಧಿಸಿದಂತೆ ಮತ್ತೋರ್ವ ಆರೋಪಿಯನ್ನ ಹೆಡೆಮುರಿ ಕಟ್ಟಿ ಬಂಧಿಸಲಾಗಿದೆ.
ಈಗಾಗಲೇ ಬಿಜೆಪಿ ಮುಖಂಡ ಸೇರಿದಂತೆ ನಾಲ್ವರನ್ನ ಬಂಧಿಸಿದ ಪೊಲೀಸರು ನಿನ್ನೆ ರಾತ್ರಿ ಮತ್ತೋರ್ವ ಆರೋಪಿಯನ್ನ ಬಂಧಿಸಿದ್ದಾರೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರ ಸಂಖ್ಯೆ 5ಕ್ಕೆ ಏರಿದೆ.
ನಂಜನಗೂಡಿನ ರೌಡಿಶೀಟರ್ ಧನರಾಜ್ ಭೋಲಾ ಬಂಧಿತ ಅರೋಪಿ.ಈ ಹಿಂದೆ ಪಿಸ್ತೂಲ್ ಮಾರಾಟ ಪ್ರಕರಣದಲ್ಲಿ ಭಾಗಿಯಾಗಿದ್ದ ಧನರಾಜ್ ಭೋಲಾ ಜೈಲು ವಾಸ ಅನುಭವಿಸಿದ್ದ. ಇದೀಗ ನಂಜುಂಡಸ್ವಾಮಿ ಕೊಲೆ ಪ್ರಕರಣದಲ್ಲಿ ಇದೇ ಧನರಾಜ್ ಭೋಲಾ ಭಾಗಿಯಾಗಿ ಪೊಲೀಸರ ಅತಿಥಿಯಾಗಿದ್ದಾನೆ.
ದೇವರಸನ ಹಳ್ಳಿ ಗ್ರಾಮ ಪಂಚಾಯಿತಿ ಹಾಲಿ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದ ಸುಮತಿ ಅವಧಿ ಮುಗಿದಿದ್ದು ಒಪ್ಪಂದದ ಪ್ರಕಾರ ಸದಸ್ಯೆ ನಂಜುಂಡಸ್ವಾಮಿ ಪತ್ನಿ ಸೌಭಾಗ್ಯ ಅವರಿಗೆ ಅಧಿಕಾರ ನೀಡಬೇಕಿತ್ತು.


ಆದರೆ ಈ ವಿಚಾರದಲ್ಲಿ ಸುಮತಿ ಸಂಬಂಧಿ ಹಾಗೂ ಹಾಲಿ ಸದಸ್ಯ ಗೋವರ್ಧನ್ ಅಡ್ಡಗಾಲು ಹಾಕಿ ಅಧಿಕಾರ ನೀಡಲು ಕ್ಯಾತೆ ತೆಗೆದಿದ್ದ. ಅಕ್ಟೋಬರ್ 6 ರಂದು ಇದೇ ವಿಚಾರವಾಗಿ ಮಾತನಾಡಲು ನಂಜುಂಡಸ್ವಾಮಿ ಹಣದ ಸಮೇತ ತೆರಳಿದ್ದಾರೆ. ಗೋವರ್ಧನ್ ಹಾಗೂ ಇತರರನ್ನ ಭೇಟಿ ಮಾಡಿದ್ದಾರೆ. ಆ ದಿನ ರಾತ್ರಿ ನಂಜುಂಡಸ್ವಾಮಿ ಮನೆಗೆ ಹಿಂದಿರುಗಿಲ್ಲ. ಮರುದಿನ ದೇವರಸನಹಳ್ಳಿ ಮತ್ತು ಕೆಬ್ಬೆಪುರ ಮುಖ್ಯ ರಸ್ತೆಯ ಕೆಸರು ಗದ್ದೆಯೊಂದರಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿ ಕಂಡುಬಂದಿದ್ದಾರೆ. ಆಸ್ಪತ್ರೆಗೆ ಸಾಗಿಸುವ ವೇಳೆ ನಂಜುಂಡಸ್ವಾಮಿ ಮೃತಪಟ್ಟಿದ್ದಾರೆ.
ನಂಜುಂಡಸ್ವಾಮಿ ಸಾವು ಅನುಮಾನಾಸ್ಪದವಾಗಿದೆ ಎಂದು ಪತ್ನಿ ಸೌಭಾಗ್ಯ ಪೊಲೀಸ್ ಠಾಣೆಯಲ್ಲಿ ಗೋವರ್ಧನ್ ವಿರುದ್ದ ದೂರು ನೀಡಿ ಕೊಲೆ ಎಂದು ಆರೋಪಿಸಿದ್ದರು. ಮತ್ತೊಂದೆಡೆ ಆರೋಪ ಹೊತ್ತ ಗೋವರ್ಧನ್ ಇದು ಅಪಘಾತ ಎಂದು ಬಿಂಬಿಸಿ ಪೊಲೀಸರನ್ನೇ ದಿಕ್ಕಿ ತಪ್ಪಿಸುವಂತೆ ಮಾಡಿದ್ದ. ಆದ್ರೆ ಸಂಚಾರಿ ಠಾಣೆ ಪೊಲೀಸರು ಕೂಲಂಕಷವಾಗಿ ಪರಿಶೀಲನೆ ನಡೆಸಿದಾಗ ಅನುಮಾನದ ಹುತ್ತ ದಟ್ಟವಾಗಿ ಕಾಣಿಸಿತ್ತು. ಜೊತೆಗೆ ಉಪ್ಪಾರ ಜನಾಂಗದ ಮುಖಂಡರು ಕೊಲೆ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿ ನಂಜನಗೂಡು ಗ್ರಾಮಾಂತರ ಠಾಣೆಗೆ ಮುತ್ತಿಗೆ ಹಾಕಿದ್ದರು. ಪ್ರಕರಣ ದಾಖಲಿಸಿಕೊಂಡು ತೆನಿಖೆ ಆರಂಭಿಸಿದ ಪೊಲೀಸರಿಗೆ ಕೊಲೆ ಎಂದು ಖಚಿತವಾಗಿ ಗೋವರ್ಧನ್ ಮತ್ತು ಸಹಚಾರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಸತ್ಯತೆ ಹೊರಬಿದ್ದಿತು. ಕೂಡಲೇ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಜಾಹಿರ್, ಮಣಿಕಂಠ ಹಾಗೂ ಮಹೇಂದ್ರ ಸೇರಿದಂತೆ ನಾಲ್ವರನ್ನ ಬಂಧಿಸಿದ್ದರು. ಇದೀಗ 5 ನೇ ಆರೋಪಿ ಧನರಾಜ್ ಭೂಲಾನನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇನ್ನಷ್ಟು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡುವ ಸಾಧ್ಯತೆ ಹೆಚ್ಚಳವಾಗಿದೆ ಎನ್ನುತ್ತಾರೆ ನಂಜನಗೂಡು ಪೊಲೀಸರು. ಕೊನೆಗೆ ಪ್ರಮುಖ ರಾಜಕೀಯ ಮುಖಂಡರ ಪಾತ್ರವಿದೆ ಎಂದು ಆರೋಪಿಸಿ ಜನಾಂಗದ ಪ್ರಮುಖ ಮುಖಂಡರಿಂದ ನಂಜುಂಡೇಶ್ವರನ ದೇವಾಲಯದ ಸಮೀಪವಿರುವ ಉಪ್ಪಾರ ಸಮುದಾಯ ಭವನದಲ್ಲಿ ಪ್ರತಿಭಟನೆಗಾಗಿ ತಯಾರಿ ಕೂಡ ನಡೆಸಲಾಗುತ್ತಿದೆ .
ಮೃತರ ಪತ್ನಿ ಸೌಭಾಗ್ಯ ಮಾತನಾಡಿ ಇದೊಂದು ಸಂಚು ರೂಪಿಸಿ ಕೊಲೆ ಮಾಡಿರುವ ಘಟನೆಯಾಗಿದೆ ಇದರ ಹಿಂದೆ ಇನ್ನೂ ಹಲವಾರು ಮಂದಿ ಇದ್ದಾರೆ. ಪೊಲೀಸರು ಇದರ ವಿರುದ್ಧ ಪರಿಶೀಲನೆ ನಡೆಸಿ ತಪ್ಪಿತಸ್ಥರಿಗೆ ಸರಿಯಾದ ಕಾನೂನು ಶಿಕ್ಷೆ ನೀಡುವಂತೆ ಒತ್ತಾಯಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು