ಇತ್ತೀಚಿನ ಸುದ್ದಿ
Good news: ಪೊಲೀಸ್ ಇಲಾಖೆಯ 3533 ಖಾಲಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
04/06/2021, 08:01
ಮಂಗಳೂರು (reporterkarnataka news): ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಕಾನ್ಸ್‍ಟೇಬಲ್ (ನಾಗರಿಕ) (ಪುರುಷ ಮತ್ತು ಮಹಿಳಾ) (ಮಿಕ್ಕುಳಿದ)ಮತ್ತು ಕಲ್ಯಾಣ ಕರ್ನಾಟಕ ಪ್ರದೇಶದ (ಸ್ಥಳೀಯ)ಹುದ್ದೆಗಳನ್ನು ಒಳಗೊಂಡಂತೆ 3533 ಖಾಲಿ ಹುದ್ದೆಗಳ ನೇಮಕಾತಿ ಸಲುವಾಗಿ ಅಧಿಸೂಚನೆಯನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಮೇ 21 ರಂದು ಪ್ರಕಟಿಸಿದೆ.
ಈ ಅಧಿಸೂಚನೆಯನ್ವಯ ಅರ್ಹ ಅಭ್ಯರ್ಥಿಗಳಿಂದ ಮೇ 25 ರಿಂದ ಜೂನ್ 25 ರವರೆಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಳಿಗಾಗಿ ಪೊಲೀಸ್ ಇಲಾಖೆಯ ಅಧಿಕೃತ ವೆಬ್ ಸೈಟ್ hಣಣಠಿs://ಡಿeಛಿಡಿuiಣmeಟಿಣ.ಞsಠಿ.gov.iಟಿ ನ್ನು ಸಂಪರ್ಕಿಸಬಹುದು ಎಂದು ಅಡಿಷನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್, ನೇಮಕಾತಿ ಬೆಂಗಳೂರು ಅಮ್ರಿತ್ ಪಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.