1:34 PM Friday6 - March 2026
ಬ್ರೇಕಿಂಗ್ ನ್ಯೂಸ್
ರಾಜ್ಯ ಬಜೆಟ್ | ಮೈಸೂರು ರಾಜ್ಯದ 2ನೇ ಐಟಿ ಸಿಟಿಯಾಗಿ ರೂಪಿಸುವ ಯೋಜನೆ ರಾಜ್ಯದಲ್ಲಿ ‘ವಿದ್ಯಾರ್ಥಿ ಇಂದಿರಾ ಕ್ಯಾಂಟೀನ್’ ಆರಂಭ : ಬಜೆಟ್ ನಲ್ಲಿ ಘೋಷಣೆ ಜಿಎಸ್​ಟಿ ತರ್ಕಬದ್ಧಗೊಳಿಸಿದ್ದರಿಂದ ರಾಜ್ಯಕ್ಕೆ ರಾಜಸ್ವ ಸಂಗ್ರಹಣೆ ಕಡಿಮೆ: ಸಿಎಂ ಸಿದ್ದರಾಮಯ್ಯ ರಾಜ್ಯ ಬಜೆಟ್ | ದಕ್ಷಿಣ ಕನ್ನಡದ ಮಾಣಿ ಹಾಗೂ ಸಜಿಪನಡು ಸೇರಿದಂತೆ ರಾಜ್ಯದ… ರಾಜ್ಯ ಸರ್ಕಾರಿ ಉದ್ಯೋಗ ನೇಮಕಾತಿಗೆ 5 ವರ್ಷಗಳ ಸಡಿಲಿಕೆ : ಸಿಎಂ ಸಿದ್ದರಾಮಯ್ಯ… ರಾಜ್ಯ ಬಜೆಟ್ 2026-27: ಸರ್ವರ ಸಬಲೀಕರಣ, ಅವಕಾಶಗಳ ಅನಾವರಣ, ನವ ಕರ್ನಾಟಕದ ನಿರ್ಮಾಣ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ನವೀಕೃತ, ವಿಸ್ತೃತ, ಹವಾನಿಯಂತ್ರಿತ ಬಿ.ಸಿ. ರೋಡ್ ಶಾಖೆ… ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಆರತಕ್ಷತೆ: ಶುಭ ಹಾರೈಸಿದ ಡಿಕೆಶಿ- ಪೊನ್ನಣ್ಣ ಬೇಡ್ತಿ ಸಮೀಪ ಕೆಎಸ್ಸಾರ್ಟಿಸಿ ಬಸ್ -ಕಾರು ಡಿಕ್ಕಿ,: ಮಂಗಳೂರಿನ ಉದ್ಯಮಿ ಸಾವು ದನದ ಅವಶೇಷ ಪತ್ತೆ: ಕೊಪ್ಪ-ತೀರ್ಥಹಳ್ಳಿ ರಾಷ್ಟಿಯ ಹೆದ್ದಾರಿ ತಡೆದು ಭಜರಂಗ ದಳ ಕಾರ್ಯಕರ್ತರ…

ಇತ್ತೀಚಿನ ಸುದ್ದಿ

ಗೋ ಕಳ್ಳತನ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಿ: ಸರಕಾರಕ್ಕೆ ಶಾಸಕ ಡಾ. ಭರತ್ ಶೆಟ್ಟಿ ಆಗ್ರಹ

26/06/2023, 19:08

ಸುರತ್ಕಲ್(reporterkarnataka.com): ಬಕ್ರಿದ್ ಹಬ್ಬದ ಸಂದರ್ಭದಲ್ಲಿ ಕೆಲವೊಂದು ಸಮಾಜ ಘಾತುಕ ಶಕ್ತಿಗಳಿಂದ ಗೋವುಗಳ ಕಳ್ಳತನ ,ಸಾಗಾಟ, ಗೋ ಹತ್ಯೆ ಮಾಡಿ ಹಣ ಗಳಿಸಲು ದಂಧೆಯಾಗಿ ಬದಲಾಗುವ ಸಾಧ್ಯತೆಯಿದೆ.
ಇದನ್ನು ತಡೆಯಲು ಬಿಜೆಪಿ ಸರಕಾರ ತಂದ ಆಸ್ತಿ ಮುಟ್ಟುಗೋಲು ಕಾನೂನು ಈಗಲೂ ಊರ್ಜಿತದಲ್ಲಿದ್ದು, ಈ ಕಾನೂನಿಂತೆ
ನಿಗಾ ವಹಿಸಬೇಕು ಎಂದು ಶಾಸಕ ಡಾ. ಭರತ್ ಶೆಟ್ಟಿ ಹೇಳಿದ್ದಾರೆ.
ಗೋಕಳ್ಳತನ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕು. ವಿಫಲವಾದರೆ ಜನರೇ ಕಾನೂನು ಕೈಗೆತ್ತಿಕೊಳ್ಳುವ ಪ್ರಮೇಯ ಎದುರಾಗಿ ಕಾನೂನು ಸುವ್ಯವಸ್ಥೆಗೆ ತೊಡಕಾಗಬಹುದು ಎಂದು ಶಾಸಕರು ಸರಕಾರ ಹಾಗೂ ಪೊಲೀಸ್ ಇಲಾಖೆಯನ್ನು ಎಚ್ಚರಿಸಿದ್ದಾರೆ.

ಗೋಕಳ್ಳತನ, ಅಕ್ರನ ಗೋಹತ್ಯೆಯ ಮೂಲಕ ಸಮಾಜದಲ್ಲಿ ಶಾಂತಿ ಕದಡುವವರ ವಿರುದ್ಧ ಕ್ರಮ ಜರಗಿಸಬೇಕು. ಸಚಿವ ಪ್ರಿಯಾಂಕ ಖರ್ಗೆ ಗೋ ಹತ್ಯೆಗೆ ಪ್ರೋತ್ಸಾಹ ಕೊಡುವಂತೆ ಹೇಳಿಕೆ ನೀಡುತ್ತಾ ಬರುತ್ತಿದ್ದು, ಗೋ ಕಳ್ಳತನ,ಅನಧಿಕೃತ ಗೋ ಹತ್ಯೆ ಹೆಚ್ಚಾದ ಪ್ರಕರಣ ಆದಲ್ಲಿ ಸಚಿವರದ್ದೇ ಕುಮ್ಮಕ್ಕು ಎಂದು ಎಂದು ಕಿಡಿಕಾರಿದ್ದಾರೆ.
ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಅಕ್ರಮಗಳ ವಿರುದ್ದ ನನ್ನ ಕ್ಷೇತ್ರದಲ್ಲಿ ಆಸ್ತಿ ಮುಟ್ಟುಗೋಲು ಪ್ರಕರಣ ದಾಖಲಿಸಿದ್ದರಿಂದ ಬಹುತೇಕ ಅಕ್ರಮ ನಿಲ್ಲಿಸಲಾಗಿತ್ತು.ಗೋವು ಹಿಂದು ಸಮಾಜ ಪೂಜನೀಯ ಭಾವನೆಯಿಂದ ನೋಡುತ್ತದೆ ಎಂಬ ಬಗ್ಗೆ ಕಾಂಗ್ರೆಸ್ ಅರ್ಥಮಾಡಿಕೊಳ್ಳಬೇಕು.ದ.ಕ. ಜಿಲ್ಲೆಯಲ್ಲಿ ಶಾಂತಿ ಕಾಪಾಡುವ‌ ದೃಷ್ಟಿಯಿಂದ ಅಕ್ರಮ ಗೋವಧೆ, ಅಕ್ರಮ ಗೋಹತ್ಯೆ ತಡೆಯಲು
ಬಿಜೆಪಿ ತಂದ ಕಾನೂನನ್ನು ಈಗಿನ ಸರಕಾರ ಮುಂದುವರಿಸಬೇಕೆಂದು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು