4:04 AM Sunday5 - April 2026
ಬ್ರೇಕಿಂಗ್ ನ್ಯೂಸ್
ಕೇರಳ ಚುನಾವಣೆಗೆ ಕರ್ನಾಟಕದ ಹಣ?: ತಿರುವನಂತಪುರದಲ್ಲಿ ಕಂತೆ ಕಂತೆ ನೋಟು ಸಮೇತ ಸಿಕ್ಕಿಬಿದ್ದ… ಚಾರಣಕ್ಕೆ ತೆರಳಿ 4 ದಿನಗಳಿಂದ ನಾಪತ್ತೆಯಾಗಿದ್ದ ಕೇರಳದ ಟೆಕ್ಕಿ ಶರಣ್ಯ ಪತ್ತೆ ಸಿದ್ದರಾಮಯ್ಯ ಬಗ್ಗೆ ಪ್ರತಾಪ್ ಸಿಂಹ ನೀಡಿರುವ ಹೀನಾಯ ಹೇಳಿಕೆ ಬಿಜೆಪಿಯ ನೀಚ ರಾಜಕಾರಣ… ಎಸ್ಸೆಸ್ಸೆಲ್ಸಿ ಗ್ರೇಡಿಂಗ್ ಪದ್ಧತಿಗೆ ರಾಜ್ಯಪಾಲರು ವಿರೋಧ: ನಾಳೆ ರಾಜಭವನಕ್ಕೆ ಕರವೇ ಮುತ್ತಿಗೆ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ’: ರಾಜ್ಯಪಾಲರಿಗೆ ಕರವೇ ನಾರಾಯಣ ಗೌಡ ಖಡಕ್… ದೇಶದಲ್ಲೇ ಅತಿ ಹೆಚ್ಚು | ಬೆಂಗಳೂರಿಂದ 272 ಅಕ್ರಮ ಬಂಗ್ಲಾ ವಲಸಿಗರು ಗಡಿಪಾರು Kodagu | ಕುಶಾಲನಗರ: ಹರದೂರು – ಕಾಜೂರು ಮಕಾಂ ಉರೂಸ್ ಗೆ ಚಾಲನೆ ತ.ನಾ. ಚುನಾವಣೆ | ಚಾಮರಾಜನಗರ ಸಮೀಪದ ಮೆಟ್ಟೂರು ಕ್ಷೇತ್ರದಿಂದ ವೀರಪ್ಪನ್‌ ಪುತ್ರಿ ವಿದ್ಯಾರಾಣಿ… ಅಡಿಕೆಯೊಳಗಿದ್ದ ಸ್ಫೋಟಕ ಸಿಡಿದು ಮಹಿಳೆಗೆ ಗಾಯ: ಅಡಿಕೆಯಲ್ಲಿ ಇದ್ದಿದ್ದಾದರೂ ಏನು..? ಪ್ರಕರಣದ ಸತ್ಯಾಂಶ… ನಂಜನಗೂಡು: ಶ್ರದ್ಧಾ ಭಕ್ತಿಯಿಂದ ನಡೆದ ಪುರಾಣ ಪ್ರಸಿದ್ಧ ಕಳಲೆ ಶ್ರೀ ಲಕ್ಷ್ಮಿಕಾಂತ ಸ್ವಾಮಿ…

ಇತ್ತೀಚಿನ ಸುದ್ದಿ

ಗೋಹಂತಕರ ಆಸ್ತಿ ಮುಟ್ಟುಗೋಲಿಗೆ ಶಾಸಕ ವೇದವ್ಯಾಸ ಕಾಮತ್ ಖಡಕ್ ಸೂಚನೆ

21/07/2022, 22:07

ಮಂಗಳೂರು(reporterkarnataka.com): ನಗರದ ಬಜಾಲ್ ಪರಿಸರದಲ್ಲಿ ಗೋಕಳ್ಳತನ ಪ್ರಕರಣ ಬೆಳಕಿಗೆ ಬಂದಿದ್ದು, ಗೋಕಳ್ಳರ ಬಂಧನಕ್ಕೆ ಶಾಸಕ ವೇದವ್ಯಾಸ್ ಕಾಮತ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 

ಪೊಲೀಸ್ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅಕ್ರಮವಾಗಿ ಗೋಹತ್ಯೆ, ಗೋಕಳ್ಳತನ ಪ್ರಕರಣಗಳನ್ನು ತಡೆಯಲು ಗೋಕಳ್ಳರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಸೂಚನೆ ನೀಡಿರುವ ಶಾಸಕ ಕಾಮತ್ ಗೋಕಳ್ಳರಿಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ. ಬಜಾಲ್ ಕಾನಕರಿಯ ನಿವಾಸಿ ಅಶ್ವಿನ್ ಎಂಬವರ ಮನೆಯ ಹಟ್ಟಿಯಿಂದ ಗೋಕಳ್ಳತನವಾಗಿದ್ದು ಕಂಕನಾಡಿ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಪ್ರಾರಂಭಿಸಿದ್ದು ಶಾಸಕ ಕಾಮತ್ ಸೂಚನೆಯಿಂದ ತನಿಖೆಗೆ ಮತ್ತಷ್ಟು ಚುರುಕು ದೊರೆತಿದೆ. 

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಶಾಸಕ ವೇದವ್ಯಾಸ್ ಕಾಮತ್, ಹಿಂದೂ ಧರ್ಮದಲ್ಲಿ ಗೋವಿಗೆ ಮಹತ್ತರವಾದ ಸ್ಥಾನವಿದೆ. ಗೋವಿನಿಂದಲೇ ಬದುಕು ಸಾಗಿಸುವ ಅನೇಕ ಕುಟುಂಬಗಳಿವೆ. ಆ ನಿಟ್ಟಿನಲ್ಲಿ ಈಗಾಗಲೇ ರಾಜ್ಯ ಸರಕಾರವು ಗೋಹತ್ಯೆ ಪ್ರತಿಬಂಧಕವನ್ನು ಜಾರಿಗೊಳಿಸಿದ್ದು ಗೋಕಳ್ಳರ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ ನೀಡಿದ್ದೇನೆ. ಗೋಕಳ್ಳತನ, ಗೋಹತ್ಯೆಯ ಅಪರಾಧ ರುಜುವಾತಾದರೆ ಆಸ್ತಿಮುಟ್ಟುಗೋಲು ಹಾಕಲು ಸೂಚನೆ ನೀಡಿದ್ದು ಇದು ಗೋಕಳ್ಳರಿಗೆ ಎಚ್ಚರಿಕೆಯ ಸಂದೇಶವಾಗಿದೆ. ಮುಂದೆಯೂ ಇಂತಹ ಕೃತ್ಯಗಳಲ್ಲಿ ಭಾಗಿಯಾದರೆ ಮತ್ತಷ್ಟು ಕಠಿಣ ಶಿಕ್ಷೆ ಅನುಭವಿಸಲು ಸಿದ್ಧರಿರಬೇಕೆಂದು ಗೋಕಳ್ಳರಿಗೆ ಎಚ್ಚರಿಕೆ ನೀಡಿದ್ದಾರೆ. 

ಈ ಸಂದರ್ಭದಲ್ಲಿ ಕಂಕನಾಡಿ ಠಾಣಾಧಿಕಾರಿ ಸಿದ್ದಣ್ಣ ಗೌಡ ಭಜಂತ್ರಿ, ಹಿಂದೂ ಸಂಘಟನೆಯ ಮುಖಂಡರಾದ ಕಿರಣ್ ರೈ ಬಜಾಲ್, ಉಮೇಶ್ ಜಪ್ಪಿನಮೊಗರು, ಪ್ರದೀಪ್ ಪಂಪ್ವೆಲ್, ಪದ್ಮನಾಭ ನಾವೂರು ಸಭೆಯಲ್ಲಿ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು