ಇತ್ತೀಚಿನ ಸುದ್ದಿ
ಗಾಂಜಾ ಸೇವನೆ: ಯಡ್ತರೆಯಲ್ಲಿ ಯುವಕ ಪೊಲೀಸರ ವಶಕ್ಕೆ; ವೈದ್ಯಕೀಯ ಪರೀಕ್ಷೆಯಲ್ಲಿ ದೃಢ
13/02/2023, 14:05
ಕುಂದಾಪುರ(reporterkarnataka.com): ಗಾಂಜಾ ಸೇವನೆ ಸಂಬಂಧಿಸಿ ಯುವಕನೋರ್ವನನ್ನು ಬೈಂದೂರು ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಘಟನೆ ಯಡ್ತರೆ ಗ್ರಾಮದ ಬೈಂದೂರು ಸರಕಾರಿ ಬಸ್ ನಿಲ್ದಾಣದಲ್ಲಿ ಫೆ.11ರಂದು ನಡೆದಿದೆ.
ಸ್ಥಳೀಯ ನಿವಾಸಿ ವಿಶಾಲ್(22) ಎಂಬಾತನು ಬಸ್ ನಿಲ್ದಾಣದ ಬಳಿ ಮಾದಕವಸ್ತು ಸೇವಿಸಿದಂತೆ ಕಂಡುಬಂದಿದ್ದು, ವಶಕ್ಕೆ ಪಡೆದುಕೊಂಡ ಪೊಲೀಸರು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದಾರೆ. ವೈದ್ಯಕೀಯ ವರದಿಯಲ್ಲಿ ಆರೋಪಿ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














