ಇತ್ತೀಚಿನ ಸುದ್ದಿ
ಗಾಂಜಾ ಸೇವನೆ: ತ್ರಾಸಿ ಬೀಚ್ ನಲ್ಲಿ 6 ಯುವಕರು ಪೊಲೀಸ್ ವಶಕ್ಕೆ; ವೈದ್ಯಕೀಯ ಪರೀಕ್ಷೆಯಲ್ಲಿ ದೃಢ
21/08/2022, 17:27
ಕುಂದಾಪುರ(reporterkarnataka.com) ಗಾಂಜಾ ಸೇವನೆ ಸಂಬಂಧಿಸಿದಂತೆ 6 ಮಂದಿ ಯುವಕರನ್ನು ಗಂಗೊಳ್ಳಿ ಪೊಲೀಸರು ವಶಕ್ಕೆ ಪಡೆದ ಘಟನೆ ತ್ರಾಸಿ ಪ್ರವಾಸಿ ಮಂದಿರದ ಬಳಿ ಬೀಚ್ ನಲ್ಲಿ ಆ.20ರಂದು ನಡೆದಿದೆ.
ಆಶಿಶ್, ಅಕ್ಷಿತ್, ನಿಯಾಝ್, ಹರ್ಷವರ್ಧನ್, ವಿಶಾಲ್ ಹಾಗೂ ಆದಿತ್ಯ ಬರಂಬೆ ಪೊಲೀಸರು ವಶಕ್ಕೆ ಪಡೆದ ಆರೋಪಿಗಳು. ಇವರು ಬೀಚ್ ನಲ್ಲಿ ಅಮಲು ಪದಾರ್ಥ ಸೇವಿಸಿದಂತೆ ಕಂಡುಬಂದಿದ್ದು, ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ವೈದ್ಯಕೀಯ ವರದಿಯಲ್ಲಿ 6 ಮಂದಿ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.