ಇತ್ತೀಚಿನ ಸುದ್ದಿ
ಗಂಗಾವತಿ: ಹಿರೇಜಂತಕಲ್ ನಲ್ಲಿ ಅಂತಾರಾಷ್ಟ್ರೀಯ ಬಾಲೆಯರ ದಿನಾಚರಣೆ
15/10/2022, 10:20
ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ
info.reporterkarnataka gmail.com
ಗಂಗಾವತಿ ತಾಲೂಕು ಹಿರೇಜಂತಕಲ್ಲು ಗ್ರಾಮದ ಕೂಡ್ಲಿಗಿ ಸ್ಫೂರ್ತಿ ಮಹಿಳಾ ಸೇವಾ ಟ್ರಸ್ಟ,ಇವರಿಂದ ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆಯನ್ನು ಆಚರಿಸಲಾಯಿತು.
ಪ್ರಯುಕ್ತ ಗ್ರಾಮದ ಶ್ರೀ ದ್ಯಾವಮ್ಮನ ದೇವಸ್ಥಾನದಲ್ಲಿ, ವಿವಿದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೂಡ್ಲಿಗಿ ಸ್ಫೂರ್ತಿ ಮಹಿಳಾ ಸೇವಾ ಟ್ರಸ್ಟ್ ಅಧ್ಯಕ್ಷೆ ಡಾ.ಆರ್.ಈರಮ್ಮ ವಹಿಸಿಕೊಂಡಿದ್ದರು.
ಪುಟ್ಟ ಪುಟ್ಟ ಬಾಲಕಿಯರು ನಮ್ಮ ದೇಶದ ನಮ್ಮ ಕರ್ನಾಟಕದ ಕ್ರಾಂತಿಕಾರಿ ಹೋರಾಟಗಾರರ ಹಾಗೂ ಗಣ್ಯಮಾನ್ಯರ ಮತ್ತು ಸಮಾಜ ಸುಧಾರಕರ ವೇಷದಲ್ಲಿ ಕಾಣಿಸಿಕೊಂಡು. ಕಾರ್ಯಕ್ರಮನ್ನು ಪುಟ್ಟ ಹೆಣ್ಣು ಮಕ್ಕಳಾದ ಸಾನ್ವಿ, ಆದ್ಯ, ಸನ್ನಿಧಿ, ಸಿಂಚನಾ,ಶಿವಾನಿ, ಪ್ರಿಯದರ್ಶಿನಿ, ಯಣ್ ಆದಿತ್ಯ ಮುಂತಾದ ಬಾಲಕಿಯರು ಕೇಕ್ ಕತ್ತರಿಸುವುದರ ಮೂಲಕ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ಈರಮ್ಮ ಮಾತನಾಡಿ, ಹೆಣ್ಣು ದೇಶದ ಕಣ್ಣು ಈ ದೇಶದ ಆಸ್ತಿಯಾಗಿದ್ದರು. ಪ್ರತಿಯೊಬ್ಬರೂ ಹೆಣ್ಣು ಮಕ್ಕಳನ್ನು ಗೌರವಿಸಿ, ಹೆಣ್ಣು ಮಕ್ಕಳಿಗೆ ಉತ್ತಮ
ಶಿಕ್ಷಣ ನೀಡಬೇಕಿದೆ. ಹೆಣ್ಣು ಮಕ್ಕಳು ಯಾವುದರಲ್ಲೂ ಕಡಿಮೆಯಿಲ್ಲ, ಎಲ್ಲಾ ಕ್ಷೇತ್ರದಲ್ಲಿ ಹೆಣ್ಣು ಮಕ್ಕಳು ಬೆಳೆಯಬೇಕು ಬೆಳೆಸಬೇಕು ಎಂದು ಈರಮ್ಮ ಕೋರಿದರು.
ಈ ಮೂಲಕ ಅವರು ಮಹಿಳೆಯರಲ್ಲಿ ಜಾಗೃತಿ ಮೂಡಿಸಿದರು,ಹಾಗೆ ಪುಟ್ಟ ಮಕ್ಕಳಿಗೆ ಪುಸ್ತಕ,ಪೆನ್ನು,ಜಾಮಿಟ್ರಿ ಬಾಕ್ಸ್ ವಿತರಿಸಿದರು. ಮಹಿಳಾ ಮಹಿಳಾ ಸಂಘದವರಾದ ಈರಮ್ಮ, ಗಂಗಾವತಿ ಮಲ್ಲಮ್ಮ, ಲಕ್ಷ್ಮಿದೇವಿ, ಸುನೀತಾ,ಈರಮ್ಮ, ರತ್ನ,ಸುನೀತಾ, ಗಂಗಮ್ಮ, ರೇಖಾ, ಶಾರದಾ, ಶಕುಂತಲಾ, ರತ್ನಮ್ಮ, ಜಯಮ್ಮ, ಮರಿಯಮ್ಮ, ತಾಯಮ್ಮ, ಗೌರಮ್ಮ, ಉಮಾದೇವಿ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು. ಗಂಗಾವತಿ ಈರಮ್ಮ ಸ್ವಾಗತಿಸಿ ನಿರ್ವಹಿಸಿದರು,ಮಲ್ಲಮ್ಮ ವಂದಿಸಿದರು.