ಇತ್ತೀಚಿನ ಸುದ್ದಿ
ಗಾಳಿ ಮಳೆಗೆ ಮರ ಬಿದ್ದು ತಂಡಾದ ಪವರ್ ಲೈನ್: ವಿದ್ಯುತ್ ಶಾಕ್ ಹೊಡೆದು ಹಸು ದಾರುಣ ಸಾವು
22/04/2024, 14:06
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ನಿನ್ನೆ ಸುರಿದ ಬಾರಿ ಗಾಳಿ ಮಳೆಗೆ ಪವರ್ ಲೈನ್ ಮೇಲೆ ಮರ ಬಿದ್ದು ಪವರ್ ಲೈನ್ ತುಳಿದು ಹಸುವೊಂದು ಸಾವಿಗೀಡಾದ ದಾರುಣ ಘಟನೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಬಿ ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ.
ಭಾನುವಾರ ಸಂಜೆ ಸುರಿದ ಭಾರಿ ಮಳೆಗೆ ಬಿ ಹೊಸಳ್ಳಿ ಗ್ರಾಮದಲ್ಲಿ ಬೃಹತಾಕಾರದ ಮರ ಒಂದು ಪವರ್ ಲೈನ್ ಮೇಲೆ ಬಿದ್ದು ವಿದ್ಯುತ್ ತಂತಿ ನೆಲಕ್ಕೆ ಬಿದ್ದಿದ್ದರಿಂದ ಅದನ್ನು ತುಳಿದ ಹದು ಸಾವನ್ನಪ್ಪಿದೆ. ಹಸು ಬಿ ಹೊಸಳ್ಳಿ ಗ್ರಾಮದ ಗಣಪ ಎಂಬುವರಿಗೆ ಸೇರಿದ್ದಾಗಿದ್ದು ಈ ಮಾರ್ಗದಲ್ಲಿ ಜನರು ಯಾರು ಹೋಗದಿರುವುದರಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ.