ಇತ್ತೀಚಿನ ಸುದ್ದಿ
ಗಡಿನಾಡಿನಲ್ಲಿ ಅಲ್ಲಮಪ್ರಭು ಸಿದ್ಧಸಂಸ್ಥಾನ ಮಠದ ಕನ್ನಡ ಸೇವೆ ಅನನ್ಯವಾದುದು: ಟಿ. ಎಸ್. ನಾಗಾಭರಣ ಅಭಿಮತ
27/10/2021, 17:43
ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ
ರಾಯಚೂರು
info.reporterkarnataka@gmail.com
ಕನ್ನಡದ ಇತಿಹಾಸ, ಮಹತ್ವ, ಹೋರಾಟಗಳ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ಹಾಗೂ ಕರ್ನಾಟಕದ ಏಕೀಕರಣಕ್ಕೆ ಹೋರಾಡಿದ ಮಹನೀಯರನ್ನು ಸ್ಮರಿಸುವ ಉದ್ದೇಶದಿಂದ ಕನ್ನಡ ರಾಜ್ಯೋತ್ಸವ ಅತ್ಯಂತ ಮಹತ್ವವನ್ನು ಪಡೆದುಕೊಂಡಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅದ್ಯಕ್ಷ ಟಿ. ಎಸ್. ನಾಗಾಭರಣ ಹೇಳಿದರು.
ಬೆಂಗಳೂರಿನ ಸ್ವಗೃಹದಲ್ಲಿ ಚಿಂಚಣಿ ಗಡಿ ಕನ್ನಡಿಗರ ಬಳಗ ಅಲ್ಲಮಪ್ರಭು ಸಿದ್ಧಸಂಸ್ಥಾನಮಠವು ನವೆಂಬರ್ 2 ರಂದು ಆಯೋಜಿಸಿರುವ ಕನ್ನಡ ರಾಜ್ಯೋತ್ಸವ -2021ರ ಆಹ್ವಾನ ಸ್ವೀಕರಿಸಿ ಪ್ರತಿ ಕನ್ನಡಿಗನ, ಕರುನಾಡಿದ ಹೆಮ್ಮೆಯ ದಿನ ಕನ್ನಡ ರಾಜ್ಯೋತ್ಸವ. ಕರ್ನಾಟಕ ನಾಡು ಏಕೀಕರಣವಾಗಲು ನಾಡಿನ ಹಲವು ಕವಿಗಳು, ಸಾಹಿತಿಗಳು, ನಟರು, ವಿಚಾರವಂತರು ಸೇರಿದಂತೆ ಹಲವು ಮಹನೀಯರ ಕೊಡುಗೆ ಅಪಾರ. ಅಂತಹ ಮಹನೀಯರನ್ನು ಸ್ಮರಿಸುವಂತಹ ಗಳಿಗೆಯನ್ನು ಚಿಂಚಣಿ ಶ್ರೀಮಠಾದ್ಯಕ್ಷರಾದ ಪರಮಪೂಜ್ಯ ಶ್ರೀ ಅಲ್ಲಮಪ್ರಭು ಮಹಾಸ್ವಾಮಿಗಳು ಮಾಡುತ್ತಿದ್ದಾರೆ. ಶ್ರೀಮಠವು ಗಡಿಭಾಗದಲ್ಲಿ ಕನ್ನಡ ಜಾಗೃತಿ ಮಠವೆಂದೇ ಪ್ರಚಲಿತದಲ್ಲಿ ಇರುವುದು ನಮಗಂತು ತುಂಬಾ ಸಂತೋಷವನ್ನು ತಂದಿದೆ. ಆ ನಿಟ್ಟಿನಲ್ಲಿ ಶ್ರೀಮಠದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮಹಾದೇವ ಬಿರಾದಾರ, ಡಾ. ಮಾರುತಿ ಭಂಡಾರಿ, ಶ್ರೀಮತಿ ಚನ್ನಮ್ಮ ಉಪಸ್ಥಿತರಿದ್ದರು.