12:17 PM Saturday30 - November 2024
ಬ್ರೇಕಿಂಗ್ ನ್ಯೂಸ್
ಮೂಡಿಗೆರೆ: ಬಗ್ಗಸಗೋಡು ಗ್ರಾಮದಲ್ಲಿ ನಾಯಿ ದಾಳಿಯಿಂದ 5ರ ಹರೆಯದ ಬಾಲಕಿಗೆ ಗಾಯ ಹೆಚ್ಚುತ್ತಿರುವ ಗರ್ಭಿಣಿಯರ, ಬಾಣಂತಿಯರ ಸಾವು ಪ್ರಕರಣ: ಬಳ್ಳಾರಿ ವಿಮ್ಸ್‌ ಆಸ್ಪತ್ರೆಗೆ ಸರಕಾರದಿಂದ ಸರ್ಜರಿ!! ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ, ಗರ್ಭಿಣಿಯರ ಸಾವು: ತನಿಖೆಗೆ ಅಗ್ರಹಿಸಿ ಜನವಾದಿ ಮಹಿಳಾ ಸಂಘಟನೆ… ಲಂಡನ್ ವಾಲ್ವ್ಸ್ 2024 ರಲ್ಲಿ ಮಿಂಚಿದ ಭಾರತ: ಹೃದಯ ಕವಾಟ ಆವಿಷ್ಕಾರ ‘ಮೈವಾಲ್… ಹುಣಸಗಿ: ವಿದ್ಯಾರ್ಥಿಗಳಿಂದ ಕೆಎಸ್ಸಾರ್ಟಿಸಿ ಬಸ್ ತಡೆದು ಪ್ರತಿಭಟನೆ; ಸಾರ್ವಜನಿಕರ ಸಾಥ್ ಅಡಿಕೆ ಬೆಳೆಗಾರರ ಸಮಸ್ಯೆ: ಕರಾವಳಿ ಸಂಸದರಿಂದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್… ಡಿ.8ರಂದು ಉರ್ವ ಪೊಂಪೈ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕ ಹಬ್ಬ: ಬಿಷಪ್ ಡಾ. ಪೀಟರ್… ಕರ್ತವ್ಯಲೋಪ: ಚಿಕ್ಕಮಗಳೂರು ನಗರ ಠಾಣೆ ಇನ್ಸ್ ಪೆಕ್ಟರ್ ರೇಣುಕಾ ಪ್ರಸಾದ್ ಅಮಾನತು ರಾಜ್ಯ ಸರಕಾರದ ಜನಪರ ಕೆಲಸಕ್ಕೆ ಮತದಾರರ ಜೈ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್… ತೀರ್ಥಹಳ್ಳಿ ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ: ತನಿಖೆ ಆರಂಭ

ಇತ್ತೀಚಿನ ಸುದ್ದಿ

ಗಡಿಭಾಗದ ಗ್ರಾಮದಲ್ಲಿ ಅರಳಿದ ಭಗವಾನ್ ಬುದ್ಧ ಪ್ರತಿಮೆ: ಮೈಸೂರು ಜಿಲ್ಲೆಗೆ ಮಾದರಿಯದ ಯಶವಂತಪುರ ಗ್ರಾಮ

03/02/2024, 18:16

ಮೋಹನ್ ನಂಜನಗೂಡು ಮೈಸೂರು

info.reporterkarnataka@gmail.com

ಇತಿಹಾಸ ಪ್ರಸಿದ್ಧ ಪವಾಡಪುರುಷ ಶ್ರೀ ಬೇಲದ ಕುಪ್ಪೆ ಮಹದೇಶ್ವರ ಸ್ವಾಮಿ ದೇವಾಲಯದ ಸಮೀಪವಿರುವ ಸರಗೂರು ತಾಲೂಕಿನ ಯಶವಂತಪುರ ಗ್ರಾಮದಲ್ಲಿ ಗ್ರಾಮಸ್ಥರು ಸಾಮೂಹಿಕವಾಗಿ ಭಗವಾನ್ ಬುದ್ಧ ಮೂರ್ತಿ ಪ್ರತಿಷ್ಠಾಪನೆ ಮಾಡಿ ಮೈಸೂರು ಜಿಲ್ಲೆಗೆ ಮಾದರಿಯಾಗಿದ್ದಾರೆ.
ಸುಮಾರು 3 ಅಡಿ ಎತ್ತರವಿರುವ ಕಂಚಿನ ಭಗವಾನ್ ಬುದ್ಧ ಪ್ರತಿಮೆಯನ್ನು ಚಾಮರಾಜನಗರ ಜಿಲ್ಲೆಯ ಭೋದಿ ಬಂತೇಜಿ ಅವರು ಗೌತಮ ಬುದ್ಧರ ವಿಚಾರಗಳನ್ನು ಬೋಧಿಸುವ ಮೂಲಕ ಪ್ರತಿಷ್ಠಾಪಿಸಿದರು. ಭಾರತದಲ್ಲಿ ಜನ್ಮ ತಾಳಿದ ಭಗವಾನ್ ಬುದ್ಧ ಮಹಾರಾಜರಿಗೆ 34 ವರ್ಷಗಳ ಬಳಿಕ ಜ್ಞಾನೋದಯವಾಗಿ ಅವರು ನೀಡಿದ ಸಂದೇಶಗಳನ್ನು ಸಾಕಷ್ಟ ರಾಷ್ಟ್ರಗಳು ಅನುಸರಿಸುತ್ತ ಬಂದಿವೆ.
ಬುದ್ಧನ ನಾಡಿನಲ್ಲಿ ಹುಟ್ಟಿದ ನಾವೆಲ್ಲ ಧನ್ಯರು ಬುದ್ಧರ ಮಾರ್ಗದಲ್ಲಿ ನಡೆದು ದೇಶಕ್ಕೆ ಬೆಳಕಾಗಬೇಕು ಎಂದು ಬೋಧಿ ಬಂತೆಜಿ ತಿಳಿಸಿದರು ದರು.
ಹುಣಸೂರು ಮೂಲದ ಶೈಲಜಾ ಮಹದೇವಸ್ವಾಮಿ ಎಂಬ ದಾನಿಗಳು ಬೆಲೆಬಾಳುವ ಬುದ್ಧ ಮೂರ್ತಿಯನ್ನು ಕೊಡುಗೆಯಾಗಿ ನೀಡಿದ್ದಾರೆ ಯಶವಂತಪುರ ಗ್ರಾಮದ ದೊಡ್ಡ ಯಜಮಾನರಾದ ನಿವೃತ್ತ ಪೊಲೀಸ್ ಅಧಿಕಾರಿ ಶ್ರೀಯುತ ಮರಿಸ್ವಾಮಿ ಚಿಕ್ಕ ಯಜಮಾನ್ರು ಮಲ್ಲೇಶ್ ವುಮೇನ್ ರೈಟ್ಸ್ ತಾಲೂಕು ಅಧ್ಯಕ್ಷರಾದ ಯಶವಂತಪುರ ಶ್ರೀನಿವಾಸ್ ಗ್ರಾಪಂ ಸದಸ್ಯ ಶಿವಲಿಂಗಯ್ಯ ಸೇರಿದಂತೆ ಗ್ರಾಮದ ಮುಖಂಡರು ಒಮ್ಮತದಿಂದ ಗ್ರಾಮದ ಮುಖ್ಯ ರಸ್ತೆಯಲ್ಲಿರುವ ಸಮುದಾಯ ಭವನದಲ್ಲಿ ಬುದ್ಧ ಪ್ರತಿಮೆ ಸ್ಥಾಪಿಸಿ ಸಂಭ್ರಮಿಸಿದರು. ಯಶವಂತಪುರ ಗ್ರಾಮದ ಮುಂದಿನ ಪೀಳಿಗೆಗೆ ಅನುಕೂಲಕರವಾಗುವ ದೆಸೆಯಿಂದ ಪ್ರೀತಿ ಸಹನೆ ಸಹಬಾಳ್ವೆಯಿಂದ ಬದುಕು ರೂಪಿಸಿಕೊಂಡು ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬದುಕಲು ಉತ್ತಮ ಸಂದೇಶ ನೀಡುವ ಸಲುವಾಗಿ ಬುದ್ಧ ಪ್ರತಿಮೆ ಸ್ಥಾಪಿಸಲಾಗಿದೆ. ಮುಂಬರುವ ದಿನಗಳಲ್ಲಿ ಉತ್ತಮವಾದ ಹೈಟೆಕ್ ಗ್ರಂಥಾಲಯವನ್ನು ಕೂಡ ತೆರೆದು ಮಕ್ಕಳ ಭವಿಷ್ಯಕ್ಕೆ ದಾರಿಯಾಗುವುದರ ಜೊತೆಗೆ ಗ್ರಾಮದಲ್ಲಿ ಭಗವಾನ್ ಬುದ್ಧರ ಬೆಳಕನ್ನು ಸದಾ ಕಾಣುವ ದೃಷ್ಟಿಯಿಂದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಬುದ್ಧ ಪ್ರತಿಮೆ ಸ್ಥಾಪಿಸಲಾಗಿದೆ ಎಂದು ಶ್ರೀನಿವಾಸ್ ಸಂದರ್ಭದಲ್ಲಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಚಾಮರಾಜನಗರ ಮೂಲದ ಭೋದಿ ಬಂತೆಜೀಗಳು ಬುದ್ಧರ ಹಿತವಚನಗಳನ್ನು ಸಾರ್ವಜನಿಕರಿಗೆ ತಿಳಿಸಿದರು ಕಾರ್ಯಕ್ರಮದಲ್ಲಿ ಎಚ್. ಡಿ. ಕೋಟೆ, ನಂಜನಗೂಡು ಮತ್ತು ಸರಗೂರು ತಾಲೂಕಿನ ದಲಿತ ಪರ ಸಂಘಟನೆಗಳ ಮುಖಂಡರು ವಿಚಾರವಾದಿಗಳು ಕಾರ್ಯಕ್ರಮದಲ್ಲಿ ಮಾತನಾಡಿದರು.


ಯಶವಂತಪುರ ಗ್ರಾಮದ ಮಹಿಳೆಯರು ಗ್ರಾಮಸ್ಥರು ಹಾಜರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು