ಇತ್ತೀಚಿನ ಸುದ್ದಿ
ಕೆಲಸದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ ತಡೆಗೆ ಆಂತರಿಕ ದೂರು ನಿವಾರಣಾ ಸಮಿತಿ ರಚನೆ ಕಡ್ಡಾಯ
02/01/2026, 21:38
ಮಂಗಳೂರು(reporterkarnataka.com): ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ಕಾಯ್ದೆಯನ್ವಯ 10 ಮತ್ತು ಅದಕ್ಕಿಂತ ಹೆಚ್ಚಿನ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿರುವ ಸರಕಾರಿ ಮತ್ತು ಖಾಸಗಿ ಕಚೇರಿಗಳು ಕಾರ್ಖಾನೆಗಳು/ ಗಾಮೆರ್ಂಟ್ಸ್ ಫ್ಯಾಕ್ಟರಿಗಳು, ವಿಶ್ವವಿದ್ಯಾಲಯಗಳು ಸಂಘ ಸಂಸ್ಥೆಗಳು ಹಾಗೂ ಜಿಲ್ಲೆ, ತಾಲೂಕು ಮತ್ತು ಗ್ರಾಮ ಪಂಚಾಯತ್ ಮಟ್ಟದಲ್ಲಿ ಬರುವ ಸರ್ಕಾರಿ/ಖಾಸಗಿ ಸಂಸ್ಥೆಗಳಲ್ಲಿ ಉನ್ನತ ಮಟ್ಟದ ವೃತ್ತಿಪರರ ಶಾಸನಬದ್ದ ಸಂಸ್ಥೆಗಳು ಮತ್ತು ನಿಯಂತ್ರಿಸುವವರನ್ನು ಒಳಗೊಂಡಂತೆ (ವೈದ್ಯರು, ವಕೀಲರು, ವಾಸ್ತುಶಿಲ್ಪಿಗಳು ಲೆಕ್ಕ ಪರೀಶೋಧಕರು, ಇಂಜಿನಿಯರ್ ಗಳು, ಬ್ಯಾಂಕರ್ಸ್ ಮತ್ತು ಇತರೇ ವೃತ್ತಿಪರರು) ಕಚೇರಿಗಳಲ್ಲಿ ಆಂತರಿಕ ದೂರು ನಿವಾರಣಾ ಸಮಿತಿಯನ್ನು ರಚಿಸುವುದು ಕಡ್ಡಾಯವಾಗಿರುತ್ತದೆ.
ಆಂತರಿಕ ದೂರು ನಿವಾರಣಾ ಸಮಿತಿ:- ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ತಡೆಗಟ್ಟುವ ಸಲುವಾಗಿ ಉದ್ಯೋಗದಾತರು ಹತ್ತು ಮತ್ತು ಹತ್ತಕ್ಕಿಂತ ಹೆಚ್ಚು ಕೆಲಸಗಾರರಿರುವ ಪ್ರತೀ ಸಂಸ್ಥೆಯಲ್ಲಿ ‘ಆಂತರಿಕ ದೂರು ನಿವಾರಣಾ ಸಮಿತಿ’ಯನ್ನು ರಚಿಸಬೇಕು. ಒಂದು ಸಂಸ್ಥೆಯಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ಘಟಕಗಳಿದ್ದರೂ (ವಿಭಾಗಗಳು) ಸಹ ಎಲ್ಲಾ ಸ್ಥಳಗಳಲ್ಲೂ ‘ಆಂತರಿಕ ದೂರು ಸಮಿತಿ’ಯನ್ನು ರಚಿಸಬೇಕು. ಪ್ರತಿಯೊಂದು ಆಂತರಿಕ ಸಮಿತಿಯಲ್ಲಿ ಆ ಸಂಸ್ಥೆಯಲ್ಲಿ ಕೆಲಸ ಮಾಡುವ ಹಿರಿಯ ಮಹಿಳಾ ಉದ್ಯೋಗಿಯೊಬ್ಬರನ್ನು ಅಧ್ಯಕ್ಷೆಯನ್ನಾಗಿ ನೇಮಿಸಬೇಕು. ಮಹಿಳಾ ಅಭಿವೃದ್ಧಿ ಮತ್ತು ಸಾಮಾಜಿಕ ವಿಷಯಗಳ ಮೇಲೆ ಕಾಳಜಿ ಇರುವ ಹಾಗೂ ಕಾನೂನಿನ ಜ್ಞಾನ ಇರುವ ಇಬ್ಬರು ಉದ್ಯೋಗಿಗಳನ್ನು ಸದಸ್ಯರನ್ನಾಗಿ ನೇಮಿಸಬೇಕು. ಸಮಿತಿಯ ಕನಿಷ್ಠ ಅರ್ಧದಷ್ಟು ಸದಸ್ಯರು ಮಹಿಳೆಯರಿರಬೇಕು. ಕೆಲಸದ ಸ್ಥಳಗಳಲ್ಲಿ ‘ದೂರು ಪೆಟ್ಟಿಗೆಯನ್ನು ಕಡ್ಡಾಯವಾಗಿ ಅಳವಡಿಸಬೇಕು. ಆಂತರಿಕ ದೂರು ನಿವಾರಣಾ ಸಮಿತಿಯ ಸದಸ್ಯರ ವಿವರವನ್ನು ಸೂಚನಾ ಫಲಕದಲ್ಲಿ ಸಿಬ್ಬಂದಿಗಳಿಗೆ ಹಾಗೂ ಸಾರ್ವಜನಿಕರಿಗೆ ಕಾಣಿಸುವಂತೆ ಪ್ರದರ್ಶಿಸಬೇಕು.
ಸರಕಾರಿ ಮತ್ತು ಖಾಸಗಿ ಸಂಸ್ಥೆಯವರು ಆಂತರಿಕ ದೂರು ನಿವಾರಣಾ ಸಮಿತಿ ರಚನೆ ಮಾಡಿ ಸಮಿತಿಯ ಸದಸ್ಯರ ಮಾಹಿತಿಯನ್ನು She box ಠಿoಡಿಣಚಿಟ ನಲ್ಲಿ ಅಪೆÇ್ಲೀಡ್ ಮಾಡಬೇಕು. ಈ ಪೆÇೀರ್ಟಲ್‍ನಲ್ಲಿ ಆನ್‍ಲೈನ್ ಮೂಲಕ ದೂರುದಾರರು ದೂರುಗಳನ್ನು ನೋಂದಾಯಿಸಿಕೊಳ್ಳಬಹುದು
ಸ್ಥಳೀಯ ದೂರು ನಿವಾರಣಾ ಸಮಿತಿ: ಸರಕಾರವು ಜಿಲ್ಲಾಧಿಕಾರಿಯವರನ್ನು ಪ್ರತೀ ಜಿಲ್ಲೆಗೆ ಜಿಲ್ಲಾ ಅಧಿಕಾರಿಯನ್ನಾಗಿ ನೇಮಿಸಿದೆ. ಹತ್ತಕ್ಕಿಂತ ಕಡಿಮೆ ಕೆಲಸಗಾರರಿರುವ ಸಂಸ್ಥೆಯಲ್ಲಿ ಆಂತರಿಕ ದೂರು ನಿವಾರಣಾ ಸಮಿತಿಯನ್ನು ರಚಿಸಲು ಸಾಧ್ಯವಾಗದ ಸಂದರ್ಭದಲ್ಲಿ ಅಥವಾ ಉದ್ಯೋಗದಾತನ ಮೇಲೆಯೇ ದೂರು ಇರುವ ಪಕ್ಷದಲ್ಲಿ ಸ್ಥಳೀಯ ದೂರು ನಿವಾರಣಾ ಸಮಿತಿಯನ್ನು ರಚಿಸಲಾಗಿದ್ದು, ಇಲ್ಲಿ ದೂರು ನೀಡಬಹುದಾಗಿರುತ್ತದೆ. ಅಲ್ಲದೆ ತಾಲೂಕುಗಳಲ್ಲಿ ಅರ್ಜಿಗಳನ್ನು ಸ್ವೀಕರಿಸಲು ನೋಡಲ್ ಅಧಿಕಾರಿಗಳಾಗಿ ಆಯಾ ತಾಲೂಕಿನ ತಹಶೀಲ್ದಾರರನ್ನು ನೇಮಿಸಲಾಗಿದೆ. ಈ ಅಧಿಕಾರಿಗಳು ದೂರು ಸ್ವೀಕರಿಸಿದ 7 ದಿನಗಳೊಳಗೆ ದೂರು ಅರ್ಜಿಯನ್ನು ಸ್ಥಳೀಯ ದೂರು ನಿವಾರಣಾ ಸಮಿತಿಗೆ ವರ್ಗಾಯಿಸಬೇಕು. ಸ್ಥಳೀಯ ದೂರು ನಿವಾರಣಾ ಸಮಿತಿಯ ಸದಸ್ಯರ ವಿವರವನ್ನು ಸೂಚನಾ ಫಲಕದಲ್ಲಿ ಸಿಬ್ಬಂದಿಗಳಿಗೆ ಹಾಗೂ ಸಾರ್ವಜನಿಕರಿಗೆ ಕಾಣಿಸುವಂತೆ ಪ್ರದರ್ಶಿಸಬೇಕು.
ಸರ್ಕಾರಿ ಮತ್ತು ಖಾಸಗಿ ಕಛೇರಿಗಳಲ್ಲಿ ಮಾಲಕರು ಅಥವಾ ಉದ್ಯೋಗದಾತರು ಈ ಕರ್ತವ್ಯಗಳನ್ನು ನಿರ್ವಹಿಸಲು ತಪ್ಪಿದ್ದಲ್ಲಿ ರೂ.50 ಸಾವಿರ ದಂಡ ವಿಧಿಸಲಾಗುತದೆ. ಹಾಗೂ ವ್ಯಾಪಾರ ನಂತರವೂ ಸಮಿತಿ ರಚನೆ ಮಾಡದಿದ್ದರೆ ಲೈಸನ್ಸ್ ಮತ್ತು ನೋಂದಣಿಗಳನ್ನು ರದ್ದುಗೊಳಿಸಿ ಶಿಕ್ಷೆ ವಿಧಿಸಲಾಗುತ್ತದೆ. ಇದಕ್ಕೆ ಸಂಬಂಧಿಸಿದ ಆದೇಶವನ್ನು ಕರ್ನಾಟಕ ರಾಜ್ಯ ಮಹಿಳಾ ಆಯೋಗ ವೆಬ್‍ಸೈಟ್ ಞsಛಿತಿ.ಞಚಿಡಿ.ಟಿiಛಿ.iಟಿ ಮೂಲಕ ಡೌನ್‍ಲೋಡ್ ಮಾಡಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗೆ ನಗರದ ಬಿಜೈ ಜಿಲ್ಲಾ ಸ್ತ್ರೀ ಶಕ್ತಿ ಭವನದ ಎರಡನೇ ಮಹಡಿಯಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರ ಕಚೇರಿ, (ದೂರವಾಣಿ ಸಂಖ್ಯೆ 0824-2001154) ಸಂಪರ್ಕಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













