ಇತ್ತೀಚಿನ ಸುದ್ದಿ
ಕೊಡಗಿನಲ್ಲಿ ಅರಣ್ಯ ರಕ್ಷಕರಿಂದಲೇ ಮರಗಳ ಲೂಟಿ: ಲೋಡರ್ ಬಂಧನ; ನಾಲ್ವರು ಪರಾರಿ
26/12/2025, 19:50
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಇದು ಬೇಲಿಯೇ ಎದ್ದು ಹೊಲ ಮೇಯ್ದoತೆ ಎನ್ನುವ ಗಾದೆ ಮಾತಿನಂತೆ ಕೊಡಗು ಜಿಲ್ಲೆಯಲ್ಲಿ ಅರಣ್ಯ ರಕ್ಷಣೆ ಮಾಡಬೇಕಾದವರು ಬೆಲೆ ಬಾಳುವ ಮರವನ್ನು ಕಳುವು ಮಾಡಿರುವ ಘಟನೆ ನಡೆದಿದೆ. ಈ ಹಿಂದೆ ಸೋಮವಾರಪೇಟೆ ತಾಲ್ಲೂಕಿನ ಕಾಜೂರು ಬಳಿ ಮೀಸಲು ಅರಣ್ಯದಲ್ಲಿ ಮರಗಳ ಕಳ್ಳತನ ಬಗ್ಗೆ ದೂರು ಹಿನ್ನಲೆಯಲ್ಲಿ ಕಾರ್ಯಾಚರಣೆ ನಡೆಸಿದ ಇಲಾಖೆಗೆ ಶಾಕ್ ಆಗಿದ್ದರೆ, ಕಳ್ಳರನ್ನು ಹಿಡಿಯುವ ವೇಳೆ ಸಂಘರ್ಷ ಉಂಟಾಗಿದ್ದು,ಈ ವೇಳೆ ಅಧಿಕಾರಿ ಚಂದ್ರಶೇಖರ್ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ದಾಳಿ ವೇಳೆ ಲೋಡರ್ ಸಂತೋಷ್ ನನ್ನು ಬಂಧಿಸಿದ್ದು ಉಳಿದ ನಾಲ್ವರು ತಲೆ ಮರೆಸಿಕೊಂಡಿದ್ದಾರೆ. ನಾಪತ್ತೆಯಾದ ಎಲ್ಲರೂ ಅರಣ್ಯ ಇಲಾಖೆಯಲ್ಲಿ ಹಂಗಾಮಿ ನೌಕರರು ಎಂದು ತಿಳಿದು ಬಂದಿದೆ. ಸದ್ಯ ಎಡವಾರೆ ಮೀಸಲು ಅರಣ್ಯದಲ್ಲಿ 25 ಮರಗಳು ಕಳುವಾಗಿದ್ದು ಈ ವರೆಗೆ 7 ಮರ ಹಾಗೂ ಪಿಕ್ ಅಪ್ ಅನ್ನು ವಶಕ್ಕೆ ಪಡೆಯಲಾಗಿದೆ.












