ಇತ್ತೀಚಿನ ಸುದ್ದಿ
ಬೆಂಗಳೂರು: ಉತ್ತಮ ಆರೋಗ್ಯಕ್ಕಾಗಿ ವಾಕ್ 2 ಹೀಲ್ ವಾಕಥಾನ್; 1500 ಮಂದಿ ಭಾಗಿ
07/01/2025, 13:02

ಬೆಂಗಳೂರು(reporterkarnataka.com): ಜನರಲ್ಲಿ ಆರೋಗ್ಯ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಗೋಪಾಲ್ಸ್ ಸಂಸ್ಥೆಯಿಂದ ನಗರದ ಕಬ್ಬನ್ ಪಾರ್ಕ್ ನಲ್ಲಿ ನಡೆದ ವಾಕ್ 2 ಹೀಲ್ ವಾಕಥಾನ್ ಗೆ ಕೃಷಿ ಸಚಿವ ಚೆಲುವರಾಯ ಸ್ವಾಮಿ ಚಾಲನೆ ನೀಡಿದರು.
ಗುಣಮುಖ( H E A L) ಇದರ 4 ಆಧಾರಸ್ತಂಭಗಳಾದ ಆರೋಗ್ಯ(Health),
ಪರಿಸರ(Environment), ಕೃಷಿ(Agriculture) ಮತ್ತು ಜೀವನಶೈಲಿ(Lifestyle) ಕುರಿತು ನಾಗರಿಕರಲ್ಲಿ ಅರಿವು ಮೂಡಿಸುವುದು ಈ ವಾಕಥಾನ್ ನ ಮುಖ್ಯ ಉದ್ದೇಶವಾಗಿದೆ.
ಆರೋಗ್ಯ ಸುಧಾರಣೆ ಮಾಡಿಕೊಳ್ಳಲು ಮಾಲಿನ್ಯಮುಕ್ತ ಪರಿಸರ, ರಾಸಾಯನಿಕ ಮುಕ್ತ ದೇಶಿಯ ಹಟ್ಟಿಗೊಬ್ಬರದ ಕೃಷಿಗೆ ಉತ್ತೇಜನ ಮತ್ತು ಸುಸ್ಥಿರ ಜೀವನಕ್ಕೆ ಉತ್ತೇಜನ ನೀಡುವುದು ಇದರ ಉದ್ದೇಶವಾಗಿದೆ. ವಿಭಿನ್ನ ಸಮುದಾಯಕ್ಕೆ ಸೇರಿದ ಸುಮಾರು 1500 ಮಂದಿ ವಾಕಥಾನ್ ನಲ್ಲಿ ಪಾಲ್ಗೊಂಡಿದ್ದರು. ಇದರಲ್ಲಿ 200 ಮಂದಿ ವಿದ್ಯಾರ್ಥಿಗಳಿದ್ದರು.