11:22 PM Wednesday24 - December 2025
ಬ್ರೇಕಿಂಗ್ ನ್ಯೂಸ್
ಜಿಲ್ಲಾ ಮತ್ತು ಕ್ಲಸ್ಟರ್ ಮಟ್ಟದಲ್ಲಿ ಡಿಜಿಟಲ್ ಆರ್ಥಿಕತೆಗೆ ಒತ್ತು: ಕೆಡಿಇಎಂ ಮತ್ತು ಎಫ್‌ಕೆಸಿಸಿಐ… ಪ್ರೀತಿಯ ಸಂಸ್ಕೃತಿ ಬೆಳೆಸಿ: ರೊಸಾರಿಯೋ ಕೆಥೆಡ್ರಲ್‌ನಲ್ಲಿ ಬಿಷಪ್ ಡಾ. ಸಲ್ಡಾನರಿಂದ ಕ್ರಿಸ್ಮಸ್ ಸಂದೇಶ ಕಲಬುರ್ಗಿಯಲ್ಲಿ ಟೆಕ್ಸ್ ಟೈಲ್ ಪಾರ್ಕ್ | ಮುಂದಿನ ತಿಂಗಳು ಉನ್ನತ ಮಟ್ಟದ ಸಭೆ:… ಮೂಡಿಗೆರೆ ತಾಪಂ ಇಒ ದರ್ಬಾರ್‌: ಸರ್ಕಾರಿ ಜೀಪ್‌ ಖಾಸಗಿಯಾಗಿ ದುರ್ಬಳಕೆ; ನಿತ್ಯ 60… ಸಂಸದ ಯದುವೀರ್‌ ಪ್ರಯತ್ನದ ಫಲಶ್ರುತಿ : ತಂಬಾಕು ಮಾರಾಟಕ್ಕೆ ಅನುಮತಿ ರಾಮೇಶ್ವರಂ ಕೆಫೆ ವಿರುದ್ಧದ ಪ್ರಕರಣದಲ್ಲಿ ಹೆಚ್ಚಿನ ತನಿಖೆಗೆ ಕರ್ನಾಟಕ ಹೈಕೋರ್ಟ್ ವತಿಯಿಂದ ತಡೆಯಾಜ್ಞೆ;… ಅಟಲ್ ಜೀ ವೃಕ್ಷ ಯೋಜನೆಯಡಿ 2240 ಸಸಿ ಸಂರಕ್ಷಣೆ: ವರ್ಷಪೂರ್ತಿ ಅಟಲ್ ಜನ್ಮ… ಗಾಂಧಿ ಭಾರತವನ್ನು ಗೋಡ್ಸೆ ಭಾರತವಾಗಿ ಮಾಡಲು ಬಿಡುವುದಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಟಿಪ್ಪರ್ -ಬೊಲೆರೋ ಜೀಪ್ ಡಿಕ್ಕಿ: ಕರ್ತವ್ಯದಲ್ಲಿ ತೆರಳುತ್ತಿದ್ದ ಬಿಎಸ್ಸೆನ್ನೆಲ್ ಸಿಬ್ಬಂದಿಗಳಿಗೆ ಗಾಯ ಹೌದು…ವೈದ್ಯೋ ನಾರಾಯಣೋ ಹರಿ; ಆದರೆ, ದಾದಿಯರು ಎಲೆ ಮರೆಯ ಕಾಯಿ!

ಇತ್ತೀಚಿನ ಸುದ್ದಿ

ಜಿಲ್ಲಾ ಮತ್ತು ಕ್ಲಸ್ಟರ್ ಮಟ್ಟದಲ್ಲಿ ಡಿಜಿಟಲ್ ಆರ್ಥಿಕತೆಗೆ ಒತ್ತು: ಕೆಡಿಇಎಂ ಮತ್ತು ಎಫ್‌ಕೆಸಿಸಿಐ ತಿಳುವಳಿಕೆ ಪತ್ರಕ್ಕೆ ಸಹಿ

24/12/2025, 23:22

ಮಂಗಳೂರು(reporterkarnataka.com): ಜಿಲ್ಲಾ ಮಟ್ಟದ ಮತ್ತು ಕ್ಲಸ್ಟರ್ ಮಟ್ಟದ ಅಭಿವೃದ್ಧಿಯ ಮೇಲೆ ಒತ್ತು ನೀಡಿ ಬೆಂಗಳೂರಿನಾಚೆಗೆ ಕರ್ನಾಟಕದ ಡಿಜಿಟಲ್ ಆರ್ಥಿಕತೆಯನ್ನು ವೇಗಗೊಳಿಸುವ ಉದ್ದೇಶದಿಂದ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಮತ್ತು ಫೆಡರೇಷನ್ ಆಫ್ ಕರ್ನಾಟಕ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (ಎಫ್‌ಕೆಸಿಸಿಐ) ಸಂಸ್ಥೆಗಳು ಇಂದು ಒಂದು ತಿಳುವಳಿಕೆ ಪತ್ರಕ್ಕೆ (ಎಂಒಯು) ಸಹಿಹಾಕಿ ತಮ್ಮ ಸಹಭಾಗಿತ್ವವನ್ನು ಔಪಚಾರಿಕಗೊಳಿಸಿವೆ.
ಈ ಸಹಯೋಗದ ಮೂಲಕ ಎಫ್‌ಕೆಸಿಸಿಐಯ 30ಕ್ಕೂ ಹೆಚ್ಚು ಜಿಲ್ಲಾ ಚೇಂಬರ್‌ಗಳ ಜಾಲ ಮತ್ತು ಕೆಡಿಇಎಂಯ ಕ್ಲಸ್ಟರ್ ಆಧರಿತ ವ್ಯವಸ್ಥೆಯನ್ನು ಬಳಸಿಕೊಂಡು ಮಹಾನಗರಗಳಲ್ಲದ ಪ್ರದೇಶಗಳಲ್ಲಿ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳ ಡಿಜಿಟಲೀಕರಣ, ಸ್ಟಾರ್ಟಪ್ ಬೆಳವಣಿಗೆ, ಹೂಡಿಕೆ ಸಿದ್ಧತೆ ಮತ್ತು ಉದ್ಯಮಶೀಲತೆಯನ್ನು ಹೆಚ್ಚಿಸಲು ಕಾರ್ಯನಿರ್ವಹಿಸಲಾಗುತ್ತದೆ. ಸಣ್ಣ ಉದ್ಯಮಗಳಿಗೆ ಹೆಚ್ಚಿನ ಅವಕಾಶ ಒದಗಿಸುವ ನಿಟ್ಟಿನಲ್ಲಿ ಮುಂದುವರಿಯಲಾಗುತ್ತದೆ.
ಈ ಸಂದರ್ಭದಲ್ಲಿ ಮಾತನಾಡಿರುವ ಕೆಡಿಇಎಂನ ಸಿಇಓ ಸಂಜೀವ್ ಕುಮಾರ್ ಗುಪ್ತಾ ಅವರು, “ಕರ್ನಾಟಕದ ಡಿಜಿಟಲ್ ಬೆಳವಣಿಗೆಯು ಕೇವಲ ಕೆಲವು ಕೇಂದ್ರಗಳಿಗೆ ಸೀಮಿತವಾಗಬಾರದು. ರಾಜ್ಯ ಮಟ್ಟದಲ್ಲಿ ಡಿಜಿಟಲ್ ಆರ್ಥಿಕತೆ ಬೆಳವಣಿಗೆ ಹೊಂದಬೇಕು. ಎಫ್‌ಕೆಸಿಸಿಐ ಜೊತೆಗಿನ ಈ ಪಾಲುದಾರಿಕೆಯು ನೀತಿ, ವ್ಯವಸ್ಥೆ ಅಭಿವೃದ್ಧಿ ಮತ್ತು ಉದ್ಯಮ ಭಾಗವಹಿಸುವಿಕೆಯನ್ನು ಜೋಡಿಸಿ ಈ ಉದ್ದೇಶ ಸಾಧನೆಗೆ ನಮಗೆ ಸಹಾಯ ಮಾಡಲಿದೆ. ಜಿಲ್ಲೆಗಳಲ್ಲಿ ಮತ್ತು ಕ್ಲಸ್ಟರ್‌ ಮಟ್ಟದಲ್ಲಿ ಕಾರ್ಯ ನಿರ್ವಹಿಸುವ ಮೂಲಕ ಹೊಸ ಹೂಡಿಕೆಗಳನ್ನು ಸಾಧ್ಯವಾಗಿಸುವುದು, ಉದ್ಯಮಶೀಲತೆಯನ್ನು ವೇಗಗೊಳಿಸುವುದು ಮತ್ತು ತಂತ್ರಜ್ಞಾನ ಆಧರಿತ ಬೆಳವಣಿಗೆ ಉಂಟಾಗುವಂತೆ ಮಾಡುವುದು ನಮ್ಮ ಗುರಿಯಾಗಿದೆ” ಎಂದರು.
ಎಫ್‌ಕೆಸಿಸಿಐಯ ಅಧ್ಯಕ್ಷರಾದ ಉಮಾ ರೆಡ್ಡಿ ಅವರು, “ಈ ಒಡಂಬಡಿಕೆಯು ಕರ್ನಾಟಕದ ಡಿಜಿಟಲ್ ಆರ್ಥಿಕತೆಯಲ್ಲಿ ಭಾಗವಹಿಸಲು ಉದ್ಯಮಗಳಿಗೆ ಸ್ಪಷ್ಟ ಮಾರ್ಗಸೂಚಿಯನ್ನು ನೀಡುತ್ತದೆ. ನಮ್ಮ ಜಿಲ್ಲಾ ಚೇಂಬರ್‌ಗಳು ಮತ್ತು ಸದಸ್ಯ ಜಾಲದ ಮೂಲಕ ಕೆಡಿಇಎಂನೊಂದಿಗೆ ಕೆಲಸ ಮಾಡಿ ಉದ್ಯಮಗಳು, ಸ್ಟಾರ್ಟಪ್‌ಗಳು ಮತ್ತು ಎಂಎಸ್‌ಎಂಇಗಳಿಗೆ ಹೂಡಿಕೆ, ಕೌಶಲ್ಯ ಮತ್ತು ಹೊಸ ಆವಿಷ್ಕಾರ ಅವಕಾಶಗಳನ್ನು ಹೊಂದುವ ಸಂಪರ್ಕ ಒದಗಿಸುತ್ತೇವೆ” ಎಂದರು.
ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಬಿಟಿ ಇಲಾಖೆಯ ಕಾರ್ಯದರ್ಶಿಗಳಾದ ಡಾ. ಮಂಜುಳಾ ಐಎಎಸ್ ಅವರು ಮಾತನಾಡಿ, “ರಾಜ್ಯಾದ್ಯಂತ ಸಮತೋಲಿತ ಡಿಜಿಟಲ್ ಬೆಳವಣಿಗೆಯನ್ನು ಆಗುಗೊಳಿಸುವ ಕರ್ನಾಟಕ ಸರ್ಕಾರದ ದೂರದೃಷ್ಟಿಗೆ ಪೂರಕವಾಗಿ ಈ ಸಹಭಾಗಿತ್ವ ಮೂಡಿಬಂದಿದೆ. ಜಿಲ್ಲಾ ಮಟ್ಟದ ವ್ಯವಸ್ಥೆಗಳನ್ನು ಬಲಪಡಿಸಿ ಮತ್ತು ಉದ್ಯಮ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುವ ಮೂಲಕ ಬೆಂಗಳೂರಿನಾಚೆಗೆ ಒಳಗೊಳ್ಳುವಿಕೆ, ಉದ್ಯೋಗ ಸೃಷ್ಟಿ ಮತ್ತು ನಿರಂತರ ಆರ್ಥಿಕ ಅಭಿವೃದ್ಧಿಗೆ ಅಡಿಗಲ್ಲು ಹಾಕುತ್ತಿದ್ದೇವೆ” ಎಂದರು.
ಉತ್ತಮ ಅಭಿವೃದ್ಧಿ ಪಥ ಸೃಷ್ಠಿ ಒಪ್ಪಂದದ ಭಾಗವಾಗಿ ಕೆಡಿಇಎಂ ಮತ್ತು ಎಫ್‌ಕೆಸಿಸಿಐ ಈ ಕೆಳಗಿನ ವಿಚಾರಗಳ ಕಡೆಗೆ ಗಮನ ಗರಿಸಲಿದೆ:
●ಹೂಡಿಕೆಗೆ ಉತ್ತೇಜನ ಮತ್ತು ಸುಗಮ ವ್ಯವಸ್ಥೆ- ದೇಶೀಯ ಮತ್ತು ವಿದೇಶಿ ಕಂಪನಿಗಳಿಗೆ ಹೂಡಿಕೆ ಮಾಡಲು ಅವಕಾಶ ಮತ್ತು ಸೂಕ್ತ ಮಾರ್ಗದರ್ಶನ.
●ಬೆಂಗಳೂರಿನಾಚೆಗೆ ವ್ಯವಸ್ಥೆ ಅಭಿವೃದ್ಧಿ – ಗುರುತಿಸಲಾದ ಜಿಲ್ಲೆಗಳು ಮತ್ತು ಕ್ಲಸ್ಟರ್‌ ಗಳಲ್ಲಿ ಉದ್ಯಮಶೀಲತೆ, ಸ್ಟಾರ್ಟಪ್ ಬೆಳವಣಿಗೆ, ಎಂಎಸ್‌ಎಂಇ ಡಿಜಿಟಲೀಕರಣ ಮತ್ತು ಹೂಡಿಕೆ ಸಿದ್ಧತೆಯನ್ನು ಬಲಪಡಿಸುವುದು.
●ಕ್ಲಸ್ಟರ್ ಕಾರ್ಯಕ್ರಮಗಳು – ಸ್ಟಾರ್ಟಪ್ ಪ್ರದರ್ಶನಗಳು, ಉದ್ಯಮ-ಸ್ಟಾರ್ಟಪ್ ಸಂಪರ್ಕ ಕಾರ್ಯಕ್ರಮಗಳು, ಜಾಗೃತಿ ಯೋಜನೆಗಳು ಮತ್ತು ಹೂಡಿಕೆ ಸುಗಮಗೊಳಿಸುವ ಚಟುವಟಿಕೆಗಳು.
●ಕೌಶಲ್ಯ ತರಬೇತಿ ಮತ್ತು ಸಾಮರ್ಥ್ಯ ಅಭಿವೃದ್ಧಿ- ಉದ್ಯಮಗಳ ಬೇಡಿಕೆ ಮತ್ತು ಭವಿಷ್ಯದ ಕೆಲಸದ ಅವಶ್ಯಕತೆಗಳಿಗೆ ಅನುಗುಣವಾಗಿ ಕಾರ್ಯಾಗಾರಗಳು, ಬೂಟ್‌ಕ್ಯಾಂಪ್‌ಗಳು, ಸಮ್ಮೇಳನಗಳು ಮತ್ತು ತರಬೇತಿ ಕಾರ್ಯಕ್ರಮಗಳ ಆಯೋಜನೆ.
●ಜಂಟಿ ಸಂಶೋಧನೆ, ಮಾರುಕಟ್ಟೆ ಅಧ್ಯಯನಗಳು ಮತ್ತು ಕ್ಷೇತ್ರ ವರದಿಗಳು – ಮಾಹಿತಿ ಆಧಾರಿತ ನೀತಿ ನಿರೂಪಣೆ ಮತ್ತು ವ್ಯವಸ್ಥೆ ರೂಪಿಸುವ ಯೋಜನೆಗೆ ಸಹಾಯ.
●ಸಾರ್ವಜನಿಕ-ಖಾಸಗಿ ಪಾಲುದಾರಿಕೆಗಳು- ಸ್ಟಾರ್ಟಪ್ ನೆರವು, ಪ್ರಮಾಣೀಕರಣ ಯೋಜನೆಗಳು, ಹೊಸ ಆವಿಷ್ಕಾರ ಯೋಜನೆಗಳು ಮತ್ತು ಉದ್ಯೋಗಾವಕಾಶ ಒದಗಿಸುವುದರ ಕಡೆಗೆ ಹೆಚ್ಚಿನ ಗಮನ.
●ಸ್ಪರ್ಧಾತ್ಮಕತೆ, ಆವಿಷ್ಕಾರ ಮತ್ತು ವ್ಯವಹಾರ ಸೌಲಭ್ಯವನ್ನು ಹೆಚ್ಚಿಸುವ ನೀತಿ ಶಿಫಾರಸುಗಳು ಮತ್ತು ಪಾಲುದಾರ ಸಮಾಲೋಚನೆಗಳ ಆಯೋಜನೆ.
ಸಹಭಾಗಿತ್ವದ ಭಾಗವಾಗಿ ಕೆಡಿಇಎಂನ ಡಿಜಿಟಲ್ ಆರ್ಥಿಕ ವ್ಯವಸ್ಥೆ ಹಾಗೂ ಎಫ್‌ಕೆಸಿಸಿಐಯ ವಿಸ್ತಾರವಾದ ಉದ್ಯಮ ಜಾಲ ಜೊತೆಯಾಗಿ ಕೆಲಸ ಮಾಡಲಿದೆ. ಎಫ್‌ಕೆಸಿಸಿಐಯ ಈ ಜಾಲದಲ್ಲಿ ಐಟಿ/ಐಟಿಇಎಸ್, ಗ್ಲೋಬಲ್ ಕೆಪಾಬಿಲಿಟಿ ಸೆಂಟರ್‌ಗಳು (ಜಿಸಿಸಿ), ಸ್ಟಾರ್ಟಪ್‌ಗಳು, ಇನ್‌ಕ್ಯುಬೇಟರ್‌ಗಳು, ಆಕ್ಸಿಲರೇಟರ್‌ಗಳು, ಕೌಶಲ್ಯ ಸಂಸ್ಥೆಗಳು, ಹೂಡಿಕೆದಾರರು ಮತ್ತು ಉದಯೋನ್ಮುಖ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹೂಡಿಕೆ ಸಿದ್ಧ ವ್ಯವಸ್ಥೆಗಳನ್ನು ನಿರ್ಮಿಸುವ ಉದ್ಯಮಗಳು, ಎಂಎಸ್‌ಎಂಇಗಳು, ಸ್ಟಾರ್ಟಪ್‌ಗಳು ಮತ್ತು ಜಿಲ್ಲಾ ಚೇಂಬರ್‌ಗಳು ಒಳಗೊಂಡಿವೆ.

ಇತ್ತೀಚಿನ ಸುದ್ದಿ

ಜಾಹೀರಾತು