ಇತ್ತೀಚಿನ ಸುದ್ದಿ
ಕನ್ನಡ ಪಯಸ್ವಿನಿ ಅಚೀವರ್ಸ್ ಪ್ರಶಸ್ತಿ 2026ಕ್ಕೆ ಚಿತ್ರ ಕಲಾವಿದ ಆಶಿಶ್ ಎಂ. ರಾವ್ ಆಯ್ಕೆ: ಜನವರಿ 18ಕ್ಕೆ ಪ್ರಶಸ್ತಿ ಪ್ರದಾನ
05/01/2026, 17:55
ಕಾಸರಗೋಡು(reporterkarnataka.com): ಚಿತ್ರ ಕಲಾವಿದ ಆಶಿಶ್ ಎಂ.ರಾವ್ ಕನ್ನಡ ಭವನದ ಕನ್ನಡ ಪಯಸ್ವಿನಿ ಅಚೀವರ್ಸ್ ಅವಾರ್ಡ್ 2026 ಕ್ಕೆ ಆಯ್ಕೆಯಾಗಿದ್ದಾರೆ.

ಎ.ಜೆ. ಕಾಲೇಜಿನ ದ್ವಿತೀಯ ವರ್ಷದ ಕಂಪ್ಯೂಟರ್ ಇಂಜಿನಿಯರ್ ವಿದ್ಯಾರ್ಥಿಯಾದ ಅವರು ಅದ್ಭುತ ಚಿತ್ರ ಕಲಾವಿದನು ಹೌದು. ಈಗಾಗಲೇ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಅವರ ಕಲಾ ಸಾಧನೆಯನ್ನು ಗುರುತಿಸಿ ಕಾಸರಗೋಡಿನ
ನುಳ್ಳಿಪಾಡಿಯ ಕನ್ನಡ ಭವನದಲ್ಲಿ ಜನವರಿ 18ಕ್ಕೆ ನಡೆಯಲಿರುವ ರಜತ ಸಂಭ್ರಮ ನಾಡು ನುಡಿ ಹಬ್ಬ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ಕನ್ನಡ ಭವನದ ಸ್ಥಾಪಕ ಅಧ್ಯಕ್ಷ ಡಾ.ವಾಮನ್ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ ವಸಂತ ಕೆರೆಮನೆ ತಿಳಿಸಿದ್ದಾರೆ














