ಇತ್ತೀಚಿನ ಸುದ್ದಿ
ಫೆಬ್ರವರಿ 10ರಂದು ಸಂದೇಶ ಪ್ರಶಸ್ತಿ ಪ್ರದಾನ: ಪೂರ್ವಭಾವಿ ಸಭೆ
07/01/2025, 18:00
ಮಂಗಳೂರು(reporterkarnataka.com): ಕರ್ನಾಟಕ ಪ್ರಾಂತೀಯ ಕ್ಯಾಥೋಲಿಕ್ ಧರ್ಮಾಧ್ಯಕ್ಷರ ಮಂಡಳಿ ಆಶ್ರಯದಲ್ಲಿ ಮಂಗಳೂರಿನ ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನ ಕೊಡ ಮಾಡುವ ಸಂದೇಶ ಪ್ರಶಸ್ತಿ ಪ್ರದಾನ ಸಮಾರಂಭ 2025 ಫೆಬ್ರವರಿ 10 ರಂದು ಸಂದೇಶದಲ್ಲಿ ನಡೆಯಲಿದ್ದು, ಈ ಬಗ್ಗೆ ಪೂರ್ವಭಾವಿ ಸಭೆಯು ಸಂದೇಶದ ಸಭಾಂಗಣದಲ್ಲಿ ನಡೆಯಿತು.
ಪ್ರತಿಷ್ಠಾನದ ನಿರ್ದೇಶಕ ವಂದನೀಯ ಡಾ. ಸುದೀಪ್ ಪಾವ್ಲ್, ಟ್ರಸ್ಟಿ ರೋಯ್ ಕ್ಯಾಸ್ತಲಿನೊ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸ್ಟ್ಯಾನಿ ಅಲ್ವಾರಿಸ್, ಕ್ಯಾಥೊಲಿಕ್ ಸಭಾ ಮಾಜಿ ಅಧ್ಯಕ್ಷ ಸ್ಟ್ಯಾನಿ ಲೋಬೊ ಮತ್ತು ಕಾರ್ಯಕಾರಿ ಸಮಿತಿಯ ಇತರ ಸದಸ್ಯರು ಉಪಸ್ಥಿತರಿದ್ದು, ಮುಂದಿನ ಕಾರ್ಯಕ್ರಮದ ರೂಪು ರೇಷೆಗಳ ಬಗ್ಗೆ ವಿಚಾರ ವಿನಿಮಯ ನಡೆಸಿದರು.