4:04 PM Saturday20 - December 2025
ಬ್ರೇಕಿಂಗ್ ನ್ಯೂಸ್
ಟಿಪ್ಪರ್ -ಬೊಲೆರೋ ಜೀಪ್ ಡಿಕ್ಕಿ: ಕರ್ತವ್ಯದಲ್ಲಿ ತೆರಳುತ್ತಿದ್ದ ಬಿಎಸ್ಸೆನ್ನೆಲ್ ಸಿಬ್ಬಂದಿಗಳಿಗೆ ಗಾಯ ಹೌದು…ವೈದ್ಯೋ ನಾರಾಯಣೋ ಹರಿ; ಆದರೆ, ದಾದಿಯರು ಎಲೆ ಮರೆಯ ಕಾಯಿ! ಪೌರ ಕಾರ್ಮಿಕರು ಸೇರಿ ಎಲ್ಲ ಕಾರ್ಮಿಕರಿಗೆ ಪಾಲಿಕೆಯಿಂದಲೇ ನೇರ ವೇತನ ಪಾವತಿಗೆ ಕ್ರಮ:… ಕ್ರೆಡಲ್‌ನಿಂದ ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನಾಚರಣೆ: ಚಿತ್ರ ಬಿಡಿಸಿದ ಪ್ರೌಢಶಾಲೆ ಮಕ್ಕಳು ಮಡಿಕೇರಿ ಹನಿಟ್ರ್ಯಾಪ್ ಪ್ರಕರಣ: ನಾಪತ್ತೆಯಾಗಿದ್ದ ಮತ್ತಿಬ್ಬರು ಆರೋಪಗಳ ಬಂಧನ Belagavi | ಆರೋಗ್ಯ ಸೇತು-ಸಂಚಾರಿ ಆರೋಗ್ಯ ಘಟಕಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ವಲಸಿಗರಿಂದ ಅಕ್ರಮ ಚಟುವಟಿಕೆ: ಗಡಿಪಾರಿಗೆ ಸದನದಲ್ಲಿ ಶಾಸಕ ಡಾ. ಮಂತರ್ ಗೌಡ ಆಗ್ರಹ ಉರುಳಿಗೆ ಸಿಲುಕಿ ಹುಲಿ ಸಾವಿನ ಪ್ರಕರಣ: ಆರೋಪಿಗಳ ಪತ್ತೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ನಕಲಿ‌ ದಾಖಲೆ ಸೃಷ್ಟಿಸಿ 512 ಎಕರೆ ಅರಣ್ಯ-ಕಂದಾಯ ಭೂಮಿ ಕಬಳಿಕೆ ಯತ್ನ: ಆರೋಪಿ… ಇಂಜಿನಿಯರಿಂಗ್ ಸೀಟುಗಳನ್ನು ನುಂಗುತ್ತಿರುವ ಖಾಸಗಿ ವಿಶ್ವವಿದ್ಯಾಲಯಗಳು: ಸದನದ ಗಮನ ಸೆಳೆದ ಶಾಸಕ ಡಾ.…

ಇತ್ತೀಚಿನ ಸುದ್ದಿ

ಫಾದರ್ ಮಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ವಿನೂತನ ಶೈಲಿಯ ಹೃದ್ರೋಗ ಶಸ್ತ್ರ ಚಿಕಿತ್ಸೆ: ವಯಸ್ಸಾದ ರೋಗಿಗೆ ಜೀವದಾನ

29/03/2024, 22:49

ಮಂಗಳೂರು(reporterkarnataka.com) :ನಗರದ ಫಾದರ್ ಮಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಹೃದ್ರೋಗ ಚಿಕಿತ್ಸೆ ಶಾಸ್ತ್ರ ವಿಭಾಗದ ಹೃದ್ರೋಗ ತಜ್ಞರು ಹಾಸನ ಮೂಲದ 61 ವರ್ಷ ಪ್ರಾಯದ ರೋಗಿಗೆ ಯಶಸ್ವಿಯಾಗಿ
ಆಧುನಿಕ, ವಿನೂತನ ಶೈಲಿಯ ಇಂಟರ್‌ವೆಂಶನಲ್ ಕಾರ್ಯ ವಿಧಾನ ಚಿಕಿತ್ಸೆಯ ಮೂಲಕ ಜೀವದಾನ ನೀಡಿದ್ದಾರೆ.
ಕಠಿಣ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ, ಯಾವುದೇ ತೆರನಾದ ಕಾರ್ಯನಿರ್ವಹಿಸಲು ಅಶಕ್ತರಾಗಿದ್ದ ಹಾಸನ ನಗರ ಮೂಲದ ರೋಗಿಯು ಫಾದರ್ ಮಲ್ಲರ್ ಆಸ್ಪತ್ರೆಯ ಹೃದ್ರೋಗ ಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ. ಎಚ್. ಪ್ರಭಾಕರ್‌ ಅವರನ್ನು ಸಂಪರ್ಕಿಸಿ ತಮ್ಮ ಉಸಿರಾಟ ಸಮಸ್ಯೆಯನ್ನು ತಿಳಿಸಿದ್ದರು.
ರೋಗಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ವೈದ್ಯರು ರೋಗಿಯು ತೀವ್ರ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ನವೆಂಬರ್ 2023ರಂದು ಹೃದಯ ಮಹಾ ಅಪಧಮನಿ ಕವಟ ಬದಲಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಇತ್ತೀಚೆಗೆ ಕಠಿಣ ಉಸಿರಾಟದ ಸಮಸ್ಯೆಗೊಳಗಾಗಿ ಡಾ. ಪ್ರಭಾಕರ್ ಅವರ ಸಲಹೆ ಮತ್ತು
ಚಿಕಿತ್ಸೆಗೆ ಆಗಮಿಸಿದ್ದರು. ವೈದ್ಯರು ರೋಗಿಯ ಸೂಕ್ಷ್ಮ ತಪಾಸಣೆ ಮೂಲಕ ಹೃದಯ ಕವಾಟವು ಹಾನಿಯಾಗಿದ್ದು, ಗಂಭೀರ ಸಮಸ್ಯೆ ಮತ್ತು ಜೀವಕ್ಕೆ ಅಪಾಯಕಾರಿಯಾಗಿದ್ದು, ತಕ್ಷಣ ಡಾ. ಪ್ರಭಾಕರ್ ಅವರು ಡಾ. ಪ್ರದೀಪ್ ಪಿರೇರಾ, ಡಾ. ಕೆ. ಟಿ. ಆನಂದ್ ವೈದ್ಯರ ತಂಡ, ರೋಗಿಯ ಗಂಭೀರ ಪರಿಸ್ಥಿತಿಯನ್ನು ಮನಗಂಡು, 4 ಗಂಟೆ ಅವಧಿಯ ವಿನೂತನ ಶೈಲಿಯ ಇಂಟರ್‌ವೆಂಶನಲ್ ಕಾರ್ಯ ವಿಧಾನದ ಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಿ, ರೋಗಿಯು ಸಾಮಾನ್ಯ ಉಸಿರಾಟ ನಡೆಸುವಂತೆ ಮಾಡಿದರು.
ರೋಗಿಯು ಒಂದು ವಾರದ ಬಳಿಕ ಆಸ್ಪತ್ರೆಯಿಂದ ಬಿಡುಗಡೆಗೊಂಡು, ತಮ್ಮ ಊರಾದ ಹಾಸನ ನಗರದಲ್ಲಿ ಸಾಮಾನ್ಯ ಆರಾಮದಾಯಕ ಜೀವನವನ್ನು ನಡೆಸುತ್ತಿದ್ದಾರೆ. ಇಂತಹ ಹೃದ್ರೋಗ ಚಿಕಿತ್ಸೆಯು ದೇಶದ ಕೇವಲ ಐದಾರು ಆಸ್ಪತ್ರೆಗಳಲ್ಲಿ ಮಾತ್ರ ನಿರ್ವಹಿಸುತ್ತಾರೆ ಎಂದು ಡಾ. ಪ್ರಭಾಕರ್ ಮಾಹಿತಿ ನೀಡಿದ್ದಾರೆ.
ಈ ಅಪಾಯಕಾರಿ ಕಠಿಣ ಶಸ್ತ್ರ ಚಿಕಿತ್ಸಯನ್ನು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ನಿರ್ವಹಿಸಿದ್ದೇವೆ ಎಂದು ಡಾ. ಪ್ರದೀಪ್ ಪಿರೇರಾ ಮಾಹಿತಿ ನೀಡಿದ್ದಾರೆ. ಫಾದರ್ ಮುಲ್ಲರ್ ಸಂಸ್ಥೆ ಗಳ ನಿರ್ದಶರಾದ ರೆ| ಫಾ| ರಿಚಾರ್ಡ್ ಕೊವೆಲ್ಲೊರವರು ಈ ವೈದ್ಯರ ತಂಡದ ಗಮನಾರ್ಹ ಸಾಧನೆಯನ್ನು ಪ್ರಶಂಶಿಸಿ ಅಭಿನಂದಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು