ಇತ್ತೀಚಿನ ಸುದ್ದಿ
ಸಂಪಾಜೆ ಗೇಟ್ ಬಳಿ ಭೀಕರ ಅಪಘಾತ: ಆಟೋ ಚಾಲಕ ಸ್ಥಳದಲ್ಲೇ ಸಾವು; ಇನ್ನೋರ್ವ ಗಂಭೀರ
29/01/2026, 20:42
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಗಡಿ ಸಂಪಾಜೆ ಗೇಟ್ ಬಳಿ ಪ್ರವಾಸಿ ಕಾರವೊಂದು ಪ್ರಯಾಣಿಕರನ್ನು ಸಾಗುಸುತ್ತಿದ್ದ ಆಟೋಕ್ಕೆ ಡಿಕ್ಕಿ ಹೊಡೆದ ಪರಿಣಾಮ ಆಟೋ ಮಗುಚಿ ಬಿದ್ದು ಆಟೋ ಚಾಲಕ ಮೃತಪಟ್ಟ ಘಟನೆ ನಡೆದಿದೆ. ಇಲ್ಲಿನ ಚೆಕ್ ಪೋಸ್ಟ್ ಗೇಟ್ ಬಳಿ ಕಾರು ಆಟೋಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದು, ಗಂಭೀರ ಗಾಯಗೊಂಡಿದ್ದ ಚಾಲಕ ಸುಂದರ ಚಿನ್ನಕಾನ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮತ್ತೊರ್ವ ಕೂಡ ಗಂಭೀರ ಗಾಯಗೊಂಡಿದು, ಸುಳ್ಯ ಆಸ್ಪತ್ರೆಗೆ ಸಾಗಿಸಲಾಗಿದೆ. ಘಟನೆ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ. ಡಿಕ್ಕಿ ಹೊಡೆದ ಕಾರು ಪತ್ತೆ ಕಾರ್ಯ ನಡೆಸಲಾಗುತ್ತಿದೆ. ಈ ಸಂಪೂರ್ಣ ದೃಶ್ಯ ಸಿಸಿ ಟಿವಿ ನಲ್ಲಿ ಸೆರೆಯಾಗಿದೆ.












