ಇತ್ತೀಚಿನ ಸುದ್ದಿ
ಫಲ್ಗುಣಿಯಲ್ಲಿ ರಾಟವಾಣ ಉತ್ಸವ: ಕೋಳೂರು ಸಾವಿರದ ಸಂಭ್ರಮದ ಸುಗ್ಗಿ ಆಚರಣೆ; 14 ಗ್ರಾಮದೇವತೆಗಳಿಗೆ ವಿಶೇಷ ಪೂಜೆ
07/05/2023, 00:10
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಕೊಟ್ಟಿಗೆಹಾರ ಸಮೀಪದ ಫಲ್ಗುಣಿಯ ಕೋಳೂರು ಸಾವಿರದ ರಾಟವಾಣ ಉತ್ಸವ ವಿಜೃಂಭಣೆಯಿಂದ ಜರುಗಿತು. ಸುತ್ತಮುತ್ತಲಿನ 14 ಗ್ರಾಮದ ಸಾವಿರಕ್ಕೂ ಅಧಿಕ ಭಕ್ತರು 14 ಗ್ರಾಮದ ದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಕೋಳೂರು ಸಾವಿರದ ಭಕ್ತರು ರಾಟವಾಣದ ಮೇಲೆ ಕುಳಿತು ಸುತ್ತುವ ಮೂಲಕ ಪ್ರಸಿದ್ಧವಾದ ರಾಟವಾಣ ಉತ್ಸವಕ್ಕೆ ಚಾಲನೆ ನೀಡಿದರು. ವಿವಿಧ ಗ್ರಾಮಗಳಿಂದ ಬಂದ ಗ್ರಾಮಸ್ಥರು ದೇವತೆಗಳಿಗೆ ಪೂಜೆ ಸಲ್ಲಿಸಿ, ಹರಕೆ ಒಪ್ಪಿಸಿದ ಬಳಿಕ ಆಯಾ ಗ್ರಾಮದ ದೇವತೆಗಳನ್ನು ಕರೆದೊಯ್ಯಲಾಯಿತು.
ರಾಟವಾಣ ಉತ್ಸವದಂದು ಕೋಳೂರು ಸಾವಿರದ ಗ್ರಾಮಗಳಿಗೆ ಮಳೆ ಬರುತ್ತದೆ ಎಂಬ ಆಗಾಧ ನಂಬಿಕೆ ಜನರಲ್ಲಿದೆ. ಇದೇ 11ರಂದು ಸುಗ್ಗಿ ಉತ್ಸವದ ಒಳ್ಳೆ ಮಾತಿನವರು ಎಂಬ ಸೇವಾಕರ್ತರು ದೇವರಮನೆ ಗ್ರಾಮದಲ್ಲಿರುವ ಶ್ರೀಕಾಲಭೈರವೇಶ್ವರ ಸ್ವಾಮಿಗೆ ಸೊಪ್ಪು ಒಪ್ಪಿಸುವುದರ ಮೂಲಕ 15 ದಿನಗಳ ಸುಗ್ಗಿ ಉತ್ಸವಕ್ಕೆ ತೆರೆ ಬೀಳುತ್ತದೆ.