ಇತ್ತೀಚಿನ ಸುದ್ದಿ
ಫಾಝಿಲ್ ಹತ್ಯೆ; ಹಂತಕರು ಬಳಸಿದ ಕಾರಿನ ಮಾಲೀಕನ ಪತ್ತೆ ಕಾರ್ಯ ನಡೆಯುತ್ತಿದೆ: ಮಂಗಳಪೇಟೆಯಲ್ಲಿ ಎಡಿಜಿಪಿ ಅಲೋಕ್ ಕುಮಾರ್
29/07/2022, 20:17
ಮಂಗಳೂರು(reporterkarnataka.com): ಸುರತ್ಕಲ್ ನಲ್ಲಿ ನಡೆದ ಮಹಮ್ಮದ್ ಫಾಝಿಲ್ ಹತ್ಯೆ ಪ್ರಕರಣದ ಕುರಿತು ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ. ಹಂತಕರು ಬಳಸಿದ ಕಾರಿನ ಮಾಲೀಕನ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.
ಫಾಝಿಲ್ ಅಂತ್ಯಸಂಸ್ಕಾರದ ಬಳಿಕ ಮಂಗಳಪೇಟೆಯಲ್ಲಿ ಮಾಧ್ಯಮ ಜತೆ ಮಾತನಾಡಿದ ಅವರು, ಯಾವ ಕಾರಣಕ್ಕಾಗಿ ಹತ್ಯೆ ಮಾಡಲಾಗಿದೆ ಎಂದು ಎಲ್ಲ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಹೇಳಿದರು.
ನಮಗೆ ದೊರೆತ ಮಾಹಿತಿ ಆಧಾರಲ್ಲಿ ತನಿಖೆ ಮುಂದುವರಿಯುತ್ತದೆ. ನಗರದಲ್ಲಿರುವ ಎಲ್ಲ ಸಿಸಿ ಟಿವಿ ಫೂಟೇಜ್ ಕಲೆ ಹಾಕಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಯಾರೂ ಗಾಳಿ ಸುದ್ದಿ ಹಬ್ಬಿಸಬಾರದು ಎಂದು ಅವರು ಮನವಿ ಮಾಡಿದರು.