6:18 AM Sunday6 - October 2024
ಬ್ರೇಕಿಂಗ್ ನ್ಯೂಸ್
ಮಂಗಳೂರು-ಪೊಳಲಿಗೆ ಬೆಂಜನಪದವು- ಕಲ್ಪನೆ ಮಾರ್ಗವಾಗಿ ಕೆಎಸ್‌ಆರ್‌ಟಿಸಿ ಬಸ್ ಆರಂಭ ಕೋಲಾರ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅಕ್ಟೋಬರ್ 7 ರಿಂದ ಇ-ಖಾತಾ ಲಭ್ಯ ಬೆಂಗಳೂರು: ಹೃದಯವಾಹಿನಿ ರಜತ ಮಹೋತ್ಸವ, ಪ್ರಥಮ ಅನಿವಾಸಿ ಕನ್ನಡಿಗರ ಸಮ್ಮೇಳನ ವಿಧಾನ ಸಭೆ ಸ್ಪೀಕರ್ ಯು.ಟಿ.ಖಾದರ್ ಕೊಟ್ಟಿಗೆಹಾರ ಭೇಟಿ: ಬಣಕಲ್ ಪ್ರಾಥಮಿಕ ಆರೋಗ್ಯ ಕೇಂದ್ರ… ಕೊಟ್ಟಿಗೆಹಾರ: ಗಾಂಧಿ ಜಯಂತಿಯಂದು ಮಾಂಸ ಮಾರಾಟ; ನಿಯಮ ಉಲ್ಲಂಘಿಸಿದ ಮಾರಾಟಗಾರರು ಗಾಂಧೀಜಿ ಚಿಂತನೆಗಳು ಎಲ್ಲಾ ಪತ್ರಕರ್ತರಿಗೆ ಎಂದೆಂದಿಗೂ ಮಾರ್ಗದರ್ಶಿ: ಮಂಗಳೂರು ಬಿಷಪ್ ಡಾ. ಪೀಟರ್… ಸಾಲ ಕೇಳ್ತಾ ಇಲ್ಲ, ಕೆಲಸ ಮಾಡಿದ್ದಕ್ಕೆ ನ್ಯಾಯ ಕೊಡಿ: ಪ್ರತಿಭಟನಾ ಸಭೆಯಲ್ಲಿ ರಾಜ್ಯ… ಈಚರ್ ಲಾರಿ – ಬೈಕ್ ಮಧ್ಯೆ ಭೀಕರ ಅಪಘಾತ: ಮೂವರು ಮಕ್ಕಳು ಸಹಿತ… ಬೈಕ್ ಗೆ ಗುದ್ದಿದ ಕಾಡುಕೋಣ: ರಸ್ತೆಗೆ ಬಿದ್ದು ಸವಾರನಿಗೆ ಗಾಯ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ: ಪೋಕ್ಸೋ ನ್ಯಾಯಾಲಯದಲ್ಲಿ ಆರೋಪಿಯ ಖುಲಾಸೆ

ಇತ್ತೀಚಿನ ಸುದ್ದಿ

ಮಾಜಿ ಯೋಧನಿಗೆ ಕೊಟ್ಟ ಜಾಗದಲ್ಲಿ ಮೋಸ; ಸೈನಿಕ ಭವನದ ಕೊರತೆ, ಸೌಲಭ್ಯ ವಂಚನೆ: ಮಾಜಿ ಸೈನಿಕರ ಸಂಘದ ಯಾದಗಿರಿ ಜಿಲ್ಲಾಧ್ಯಕ್ಷರ ಅಳಲು

06/07/2024, 17:22

ಶಿವು ರಾಠೋಡ ಹುಣಸಗಿ ಯಾದಗಿರಿ

info.reporterkarnataka@gmail.com

ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ವತಿಯಿಂದ ಸೈನಿಕರಿಗೆ ಸಿಗಬೇಕಾದ ಸೌಲಭ್ಯಗಳು ದೊರಕದೇ ಇರುವುದು ಮತ್ತು ದೇಶಕ್ಕಾಗಿ ಒಬ್ಬ ಯೋಧ ಹುತಾತ್ಮನಾದಾಗ ಪಾರ್ಥಿವ ಶರೀರ ಬಂದಾಗ ಅಂತಿಮ ನಮನ ಸಲ್ಲಿಸಲು ಒಂದು ಸ್ಥಳವೂ ಇಲ್ಲದಿರುವುದು. ಹಾಗೆ ಒಂದು ಭವನವು ಇಲ್ಲದಂತಾಗಿದೆ ಇದೆಂಥ ವಿಪರ್ಯಾಸ..
ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷರು ಲಿಂಗನಗೌಡ ಎಸ್ ಪಾಟೀಲ್ ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ತಮ್ಮ ಅಳಲು ವ್ಯಕ್ತಪಡಿಸಿದರು.
ಮಾಜಿ ಸೈನಿಕರು 27- 28 ವರ್ಷ ದುಡಿದು ಬಂದ ಹಣದಲ್ಲಿ ಒಂದು ಜಮೀನು ಖರೀದಿಸಿದರು. ಸರ್ವೇ ನಂಬರ್ 216/ ಪೋವ 1/1ನಲ್ಲಿ 3 ಎಕರೆ N.A. ನಿವೇಶನದ ಮಾಲೀಕರಾದ ವೆಂಕಟೇಶ್ ಸುರೇಂದ್ರ ರಾವ್ ದೇಶಪಾಂಡೆ, ಉಪ್ಪಣ್ಣ ಸುರೇಂದ್ರ ರಾವ್ ದೇಶಪಾಂಡೆ, ಶಾಮ್ ಸುಂದರ್ ಸುರೇಂದ್ರ ರಾವ್ ದೇಶಪಾಂಡೆ ಕುಟುಂಬಸ್ಥರು. ನಿಂಗನಗೌಡ ಎಸ್ ಪಾಟೀಲ್ ಅವರು. ತಮ್ಮ ತಾಯಿ ಹಾಗೂ ಅಕ್ಕನ ಹೆಸರಿನಲ್ಲಿ ಖರೀದಿಸಿದ ಜಾಗವನ್ನು ಮಾಲೀಕರು ತಮಗೆ ನೀಡಿರುವ ಪತ್ರದಲ್ಲಿ ಕೊಟ್ಟಿರುವ ಜಾಗದಲ್ಲಿ ಅಳತೆಯಲ್ಲೂ ಮೋಸ ಮಾಡುತ್ತಿದ್ದಾರೆ. ಅದನ್ನು ಜಿಲ್ಲಾಧಿಕಾರಿಗಳಿಗೆ, ಹುಣಸಗಿ ಪಟ್ಟಣ ಪಂಚಾಯತಿ ಅಧಿಕಾರಿಗಳಿಗೂ ತಿಳಿಸಿದರೂ ಅದರ ಬಗ್ಗೆ ಯಾವುದೇ ಕಾನೂನು ಕ್ರಮ ಕೈಗೊಳ್ಳಲಿ ಇರುವುದು ಖಂಡನೆ ಅಪರಾಧ ಎಂದು ತಮ್ಮ ನೋವನ್ನು ತೋರಿಕೊಂಡರು.
ಯಾದಗಿರಿ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ ಸಹ ನಿರ್ದೇಶಕರು ಕೂಡ ಸೈನಿಕರ ಕುಟುಂಬಕ್ಕೆ ಅನ್ಯಾಯವಾಗುತ್ತಿದೆ ಎಂದು ಗಮನ ಹರಿಸದೇ ಇರುವುದು ನೋವಿನ ಸಂಗತಿ ಎಂದು ಅವರು ನುಡಿದರು.
ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಯಾದಗಿರಿ ಜಿಲ್ಲಾಧ್ಯಕ್ಷರು ಲಿಂಗನಗೌಡ ಎಸ್. ಪಾಟೀಲ್,
ಯಾದಗಿರಿ ಪ್ರಧಾನ ಕಾರ್ಯದರ್ಶಿ ಮಡಿವಾಳಪ್ಪ ಎಸ್ ಕಟ್ಟಿಮನಿ ಹುಣಸಗಿ, ಅಧ್ಯಕ್ಷರು ವೀರೇಶ್ ಪ್ರಭುಗೌಡ ಗೋಳೇಬಾಳ್, ಸುರಪುರ ತಾಲೂಕ ಅಧ್ಯಕ್ಷ ಭೀಮ ನಾಯಕ್ ಲಕ್ಷ್ಮಿಪುರ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು