8:21 PM Tuesday13 - January 2026
ಬ್ರೇಕಿಂಗ್ ನ್ಯೂಸ್
ಮನರೇಗಾ ಬಚಾವ್ ಸಂಗ್ರಾಮ: ಸ್ಥಳೀಯ ಸಂಸ್ಥೆಗಳ ಚುನಾವಣೆ ಪೂರ್ವಸಿದ್ದತಾ ಸಭೆ ಜಿ ರಾಮ್ ಜಿ ಬಗ್ಗೆ ಕಾಂಗ್ರೆಸ್ ಸುಳ್ಳು ಸಂಕಥನ: ಕೇಂದ್ರ ಸಚಿವ ಎಚ್.ಡಿ.… ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಿದಾಗ ಮಾತ್ರ ಸುಖಿ ರಾಜ್ಯ ಸ್ಥಾಪನೆ… ಕಿಂಗ್ ಸಿಗರೇಟ್: ಎಂಆರ್‌ಪಿ ₹170 ಇದ್ದರೂ ₹250ಕ್ಕೆ ಮಾರಾಟ; ನಿಯಂತ್ರಣವಿಲ್ಲದ ದರ; ಗ್ರಾಹಕರ… ಒಣಗಿದ್ದ ಸಿಪ್ಪೆ ಸಾಗಿಸುತ್ತಿದ್ದ ಲಾರಿ ಬೆಂಕಿಗಾಹುತಿ: ಮೈಸೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ವಾಹನ ಕೇರಳ ಸರ್ಕಾರದಿಂದ ಭಾಷಾ ಸ್ವಾತಂತ್ರ್ಯದ ಉಲ್ಲಂಘನೆ: ಸಚಿವ ಶಿವರಾಜ್ ‌ತಂಗಡಗಿ ಪ್ರಹ್ಲಾದ್ ಜೋಶಿ ಅವರಿಗೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಇತಿಹಾಸ ಗೊತ್ತಿಲ್ಲ: ಡಿಸಿಎಂ ಡಿ.ಕೆ.… ನಿಷ್ಕ್ರಿಯ ಪತ್ರಿಕೆಗಾಗಿ ರಾಜ್ಯದ ಖಜಾನೆ ಲೂಟಿ ಮಾಡಿದ ಕಾಂಗ್ರೆಸ್ ಸರ್ಕಾರ: ಕೇಂದ್ರ ಸಚಿವ… ವಿಮಾನದಲ್ಲಿ ಶೈಕ್ಷಣಿಕ ಪ್ರವಾಸ: ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದು ನಿಂತ ಮುತ್ತಿಗೆಪುರ ಸರಕಾರಿ… ಅಕ್ರಮ ಗಾಂಜಾ ಮಾರಾಟ: ಅಸ್ಸಾಂ ಮೂಲದ ಇಬ್ಬರು ಆರೋಪಿಗಳ ಬಂಧನ

ಇತ್ತೀಚಿನ ಸುದ್ದಿ

ಇವಿ ಮೂಲಸೌಕರ್ಯ: ಬೆಸ್ಕಾಂನಿಂದ ದೇಶದ ಮೊದಲ ಲ್ಯಾಂಡ್ ಅಗ್ರಿಗೇಟರ್ ಪೋರ್ಟಲ್‌ ಬಿಡುಗಡೆ

13/01/2026, 20:21

ಬೆಂಗಳೂರು(reporterkarnataka.com): ರಾಜ್ಯದಲ್ಲಿ ಹಸಿರು ಚಲನಶೀಲತೆ ಉಪಕ್ರಮಗಳನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ, ಬೆಸ್ಕಾಂ ದೇಶದಲ್ಲೇ ಮೊದಲ ಬಾರಿಗೆ ಇವಿ ಚಾರ್ಜಿಂಗ್ ಹಾಗೂ ಬ್ಯಾಟರಿ ವಿನಿಮಯ ಕೇಂದ್ರಗಳ ಸ್ಥಾಪನೆ ಹಾಗೂ ತ್ವರಿತ ವಿದ್ಯುತ್‌ ಸಂಪರ್ಕಕ್ಕೆ ಏಕ ಗವಾಕ್ಷಿ ವ್ಯವಸ್ಥೆಯನ್ನು ಹೊಂದಿರುವ ಲ್ಯಾಂಡ್ ಅಗ್ರಿಗೇಟರ್ ಪೋರ್ಟಲ್ ಅನ್ನು ಬಿಡುಗಡೆಮಾಡಿದೆ.
ಈ ಡಿಜಿಟಲ್ ವೇದಿಕೆ ರಾಜ್ಯಾದ್ಯಂತ ಇವಿ ಮೂಲಸೌಕರ್ಯದ ಅಭಿವೃದ್ಧಿಗೆ ವೇಗ ನೀಡುವ ಜೊತೆಗೆ ಸ್ವಚ್ಛ ಚಲನಶೀಲತೆಯನ್ನು ಉತ್ತೇಜಿಸುವ ಗುರಿ ಹೊಂದಿದೆ.
ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಬೆಸ್ಕಾಂ ನಿಗಮ ಕಚೇರಿಯಲ್ಲಿ ಈ ವಿಶಿಷ್ಟ ಪೋರ್ಟಲ್‌ಗೆ ಚಾಲನೆ ನೀಡಿದರು. ಖಾಸಗಿ ಭೂಮಾಲೀಕರು, ಸರ್ಕಾರಿ ಇಲಾಖೆಗಳು, ಖಾಸಗಿ ಸಂಸ್ಥೆಗಳು ಹಾಗೂ ಚಾರ್ಜ್ ಸ್ಟೇಷನ್‌ ಆಪರೇಟರ್‌ಗಳು ರಾಜ್ಯಾದ್ಯಂತ ಇವಿ ಚಾರ್ಜಿಂಗ್ ಹಾಗೂ ಬ್ಯಾಟರಿ ವಿನಿಮಯ ಕೇಂದ್ರಗಳನ್ನು ಸ್ಥಾಪಿಸಲು ಹಾಗೂ ಬೆಸ್ಕಾಂನಿಂದ ವಿದ್ಯುತ್‌ ಸಂಪರ್ಕವನ್ನು ತ್ವರಿತವಾಗಿ ಪಡೆಯಲು ಏಕ ಗವಾಕ್ಷಿ ವ್ಯವಸ್ಥೆಯನ್ನು ಪೋರ್ಟಲ್‌ ನಲ್ಲಿ ಕಲ್ಪಿಸಲಾಗಿದೆ.
ನಗರ ಹಾಗೂ ಹೆದ್ದಾರಿ ಪ್ರದೇಶಗಳಲ್ಲಿ ಸಾರ್ವಜನಿಕ ಇವಿ ಮೂಲಸೌಕರ್ಯಗಳನ್ನು ಅತ್ಯಂತ ತ್ವರಿತಗತಿಯಲ್ಲಿ ಸ್ಥಾಪಿಸಲು ಭೂಮಾಲೀಕರು ಮತ್ತು ಚಾರ್ಜಿಂಗ್ ಆಪರೇಟರ್‌ಗಳಿಗೆ ಲ್ಯಾಂಡ್ ಅಗ್ರಿಗೇಟರ್ ಪೋರ್ಟಲ್‌ ನೆರವಾಗಲಿದೆ. ಇವಿ ಹಬ್‌ಗಳ ನಿರ್ಮಾಣವನ್ನು ಉತ್ತೇಜಿಸುವ ಸಲುವಾಗಿ ರಾಷ್ಟ್ರೀಯ ಹೆದ್ದಾರಿ, ಇವಿ ವಿಭಾಗ (NHEV) ಈ ಉಪಕ್ರಮದಲ್ಲಿ ಬೆಸ್ಕಾಂ ಜೊತೆ ಕೈಜೋಡಿಸಿದೆ. ಸ್ವಚ್ಛ ಚಲನಶೀಲತೆ, ಸಾರ್ವಜನಿಕ–ಖಾಸಗಿ ಸಹಭಾಗಿತ್ವ ಮತ್ತು ವಿಸ್ತರಣೆಗೆ ಅನುಕೂಲಕರವಾದ ಇವಿ ಮೂಲಸೌಕರ್ಯವನ್ನು ಉತ್ತೇಜಿಸುವ ಉದ್ದೇಶದಿಂದ ಲ್ಯಾಂಡ್ ಅಗ್ರಿಗೇಟರ್ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಲಾಗಿದೆ.
ಈ ಪೋರ್ಟಲ್‌ ಮೂಲಕ ಭೂಮಾಲೀಕರು ತಮ್ಮ ಭೂಮಿಯನ್ನು ಇವಿ ಚಾರ್ಜಿಂಗ್ ಹಾಗೂ ಬ್ಯಾಟರಿ ವಿನಿಮಯ ಕೇಂದ್ರಗಳ ಸ್ಥಾಪನೆಗೆ ಆದಾಯ ಹಂಚಿಕೆ ಆಧಾರದ ಮೇಲೆ ಬಾಡಿಗೆಗೆ ಅಥವಾ ಭೋಗ್ಯಕ್ಕೆ ನೀಡಲು ಅವಕಾಶ ಇದೆ. ಅದೇ ರೀತಿ ವಿತರಕರು ಮತ್ತು ಚಾರ್ಜ್ ಪಾಯಿಂಟ್ ಆಪರೇಟರ್‌ಗಳು ಇವಿ ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆ, ಕಾರ್ಯಾಚರಣೆ ಹಾಗೂ ನಿರ್ವಹಣೆಯನ್ನು ವಹಿಸಿಕೊಳ್ಳಬಹುದು. ಏಕ-ಗವಾಕ್ಷಿ ಡಿಜಿಟಲ್ ಡ್ಯಾಶ್‌ಬೋರ್ಡ್ ಮೂಲಕ ವಿದ್ಯುತ್ ಸಂಪರ್ಕವನ್ನು ಸಮಯಕ್ಕೆ ಸರಿಯಾಗಿ ಒದಗಿಸಿ, ವಿಳಂಬವನ್ನು ಕಡಿಮೆ ಮಾಡುವುದರ ಜೊತೆಗೆ ಎಲ್ಲಾ ಹಿತಾಸಕ್ತಿದಾರರ ನಡುವೆ ಸಮನ್ವಯ ಸಾಧಿಸಲು ನೆರವಾಗಲಿದೆ.


ಲ್ಯಾಂಡ್ ಅಗ್ರಿಗೇಟರ್ ಪೋರ್ಟಲ್, ಕರ್ನಾಟಕದಲ್ಲಿ ಬಲಿಷ್ಠ ಮತ್ತು ಭವಿಷ್ಯದ ಇವಿ ಪರಿಸರ ವ್ಯವಸ್ಥೆ ನಿರ್ಮಾಣದತ್ತ ಮಹತ್ವದ ಹೆಜ್ಜೆಯಾಗಿದೆ. ಭೂ ಸಂಗ್ರಾಹಕ ಹಾಗೂ ವಿದ್ಯುತ್ ಪೂರೈಕೆ ಪ್ರಕ್ರಿಯೆಯನ್ನು ಸರಳಗೊಳಿಸುವ ಮೂಲಕ ಈ ಉಪಕ್ರಮವು ರಾಜ್ಯದ ಬದಲಾವಣೆಗೆ ಸಹಕಾರಿಯಾಗಿರುವ ಕಡಿಮೆ ಕಾರ್ಬನ್ ಆರ್ಥಿಕತೆಯತೆಯನ್ನು ಸಾಧಿಸಲಿದೆ ಹಾಗೂ ಸ್ಥಳೀಯ ಆರ್ಥಿಕ ಅವಕಾಶಗಳನ್ನು ಸೃಷ್ಟಿಸಿ, ಗ್ರಾಹಕರಿಗೆ ಇವಿ ಬಳಕೆಯನ್ನು ಉತ್ತೇಜಿಸಲಿದೆ.
ಲ್ಯಾಂಡ್ ಅಗ್ರಿಗೇಟರ್ ಪೋರ್ಟಲ್ ಬಿಡುಗಡೆಯು ಭವಿಷ್ಯದ ಇವಿ ಮೂಲಸೌಕರ್ಯ ನಿರ್ಮಾಣದತ್ತ ಮಹತ್ವದ ಮೈಲಿಗಲ್ಲಾಗಿದೆ. ಇದು ಸ್ವಚ್ಛ ಚಲನಶೀಲತೆಯನ್ನು ಉತ್ತೇಜಿಸುವುದರ ಜೊತೆಗೆ ಸಾರ್ವಜನಿಕ–ಖಾಸಗಿ ಸಹಭಾಗಿತ್ವವನ್ನು ಬಲಪಡಿಸಿ, ಸ್ಥಳೀಯ ಸಮುದಾಯಗಳಿಗೆ ಆರ್ಥಿಕ ಅವಕಾಶಗಳನ್ನು ಸೃಷ್ಟಿಸುತ್ತದೆ. ಇವಿ ಚಾರ್ಜಿಂಗ್ ಮತ್ತು ಬ್ಯಾಟರಿ ವಿನಿಮಯ ಕೇಂದ್ರಗಳ ಸ್ಥಾಪನೆಯನ್ನು ಸುಲಭಗೊಳಿಸುವ ಮೂಲಕ, ಈ ಉಪಕ್ರಮವು ಕರ್ನಾಟಕವನ್ನು ಕಡಿಮೆ ಕಾರ್ಬನ್ ಆರ್ಥಿಕತೆಯತ್ತ ಮುನ್ನಡೆಸಲು ಸಹಕಾರಿಯಾಗಿದೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ. ಎನ್. ಶಿವಶಂಕರ ತಿಳಿಸಿದರು.

*ಪೋರ್ಟಲ್‌ನ ಪ್ರಮುಖ ಉದ್ದೇಶಗಳು*
ಇವಿ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಬ್ಯಾಟರಿ ವಿನಿಮಯ ಕೇಂದ್ರಗಳ ಸ್ಥಾಪನೆಗೆ ಭೂಮಿಯನ್ನು ಬಾಡಿಗೆಗೆ ನೀಡುವ ಅವಕಾಶಗಳಿಗೆ ಉತ್ತೇಜನ.
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಹಾಗೂ ಅನುಮೋದನಾ ಪ್ರಕ್ರಿಯೆ ಪ್ರಗತಿ ಪರಿಶೀಲನೆ
ಭೂಮಾಲೀಕರು ಸುಲಭವಾಗಿ ನೋಂದಣಿ ಮಾಡಿಕೊಂಡು ತಮ್ಮ ಭೂಮಿಯನ್ನು ಇವಿ ಚಾರ್ಜಿಂಗ್ ಮತ್ತು ಬ್ಯಾಟರಿ ವಿನಿಮಯ ಕೇಂದ್ರಗಳಿಗೆ ನೀಡುವ ವ್ಯವಸ್ಥೆ
ವೆಂಡರ್ಸ್‌ ಹಾಗೂ ಚಾರ್ಜ್ ಸ್ಟೇಷನ್‌ ಆಪರೇಟರ್‌ಗಳು ಚಾರ್ಜಿಂಗ್ ಮತ್ತು ಬ್ಯಾಟರಿ ವಿನಿಮಯ ಕೇಂದ್ರಗಳನ್ನು ಸ್ಥಾಪಿಸಿ ಹಾಗೂ ಅದರ ಕಾರ್ಯಾಚರಣೆಯನ್ನು ನಿರ್ವಹಿಸಬಹುದು
ಪೋರ್ಟಲ್ ಮೂಲಕ ಬೆಸ್ಕಾಂ, ಚಾರ್ಜ್ ಸ್ಟೇಷನ್‌ ಆಪರೇಟರ್‌ಗಳೊಂದಿಗೆ ಸಂಪರ್ಕಿಸಿ ಇವಿ ಚಾರ್ಜಿಂಗ್ ಅಥವಾ ಬ್ಯಾಟರಿ ವಿನಿಮಯ ಕೇಂದ್ರಗಳ ಸ್ಥಾಪನೆಗೆ ಸಹಕಾರ ನೀಡಲಿದೆ
ಭೂ ಮಾಲೀಕರು ಹಾಗೂ ಚಾರ್ಜ್ ಸ್ಟೇಷನ್‌ ಆಪರೇಟರ್‌ ಗಳು ಸ್ಥಳವನ್ನು ಅಂತಿಮಗೊಳಿಸಿ ಕಾರ್ಯಸಾಧನಾ ವರದಿಯನ್ನು ಪಡೆದ ನಂತರ, ಚಾರ್ಜಿಂಗ್‌ ಸ್ಟೇಷನ್‌ ಆಪರೇಟರ್‌ ಗಳು ಪೋರ್ಟ್‌ಲ್‌ ನ ಏಕ ಗವಾಕ್ಷಿ ಡ್ಯಾಶ್‌ ಬೋರ್ಡ್‌ ಮೂಲಕ ವಿದ್ಯುತ್‌ ಸಂಪರ್ಕಕ್ಕೆ ಅರ್ಜಿ ಸಲ್ಲಿಸಬಹುದು. ಯಾವುದೇ ವಿಳಂಬವಿಲ್ಲದೆ, ವಿದ್ಯುತ್‌ ಸಂಪರ್ಕ ದೊರೆಯಲಿದೆ. ಅರ್ಜಿದಾರರು ಪೋರ್ಟಲ್‌ ಮೂಲಕ ತಮ್ಮ ಅರ್ಜಿಯ ಸ್ಥಿತಿಗತಿಯನ್ನು ಪರಿಶೀಲಿಸಬಹುದು.

ಲ್ಯಾಂಡ್ ಅಗ್ರಿಗೇಟರ್ ಪೋರ್ಟಲ್‌, ಖಾಸಗಿ ಭೂಮಾಲಿಕರು, ಸರ್ಕಾರಿ ಇಲಾಖೆಗಳು ಹಾಗೂ ಖಾಸಗಿ ಸಂಸ್ಥೆಗಳು ತಮ್ಮ ಭೂಮಿಯನ್ನು ನೀಡಲು ಹಾಗೂ ಚಾರ್ಜಿಂಗ್ ಸ್ಟೇಷನ್‌ ಆಪರೇಟರ್‌ಗಳು ರಾಜ್ಯಾದ್ಯಂತ ಇವಿ ಚಾರ್ಜಿಂಗ್ ಮತ್ತು ಬ್ಯಾಟರಿ ವಿನಿಮಯ ಕೇಂದ್ರಗಳನ್ನು ಸ್ಥಾಪಿಸಲು ಒಂದೇ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಆದಾಯ ಹಂಚಿಕೆ ಮಾದರಿಯಲ್ಲಿ ಭೂಮಿಯನ್ನು ಬಾಡಿಗೆಗೆ ನೀಡಲು ಇದು ಅವಕಾಶ ಕಲ್ಪಿಸುತ್ತದೆ.
-ಕೆ.ಜೆ. ಜಾರ್ಜ್ , ಇಂಧನ ಸಚಿವ

ಇತ್ತೀಚಿನ ಸುದ್ದಿ

ಜಾಹೀರಾತು