ಇತ್ತೀಚಿನ ಸುದ್ದಿ
Eliphent Attack | 3 ದಿನಗಳಿಂದ ಬೀಡುಬಿಟ್ಟ ಕಾಡಾನೆ: ಸಲಗನ ದಾಳಿಗೆ ಬೆಳೆ ಹಾನಿ; ಗ್ರಾಮಸ್ಥರಲ್ಲಿ ಆತಂಕ
05/03/2025, 11:54

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರದ ತರುವೆ ಗ್ರಾಮದಲ್ಲಿ ಕಳೆದ ಎರಡು ಮೂರು ದಿನಗಳಿಂದ ಕಾಡಾನೆ ಬೀಡುಬಿಟ್ಟಿದ್ದು, ಗ್ರಾಮಸ್ಥರಲ್ಲಿ ಭಯ ಮೂಡಿಸಿದೆ.
ತರುವೆ ಚೌಡೇಶ್ವರಿ ದೇವಸ್ಥಾನ ಸುತ್ತಮುತ್ತ ಇರುವ ತೋಟಗಳಿಗೆ ನುಗ್ಗಿದ ಆನೆ, ಅಲ್ಲಿನ ಬೆಳೆಗಳಿಗೆ ಹಾನಿ ಮಾಡಿದ್ದು, ರೈತರು ನಷ್ಟ ಅನುಭವಿಸಿದ್ದಾರೆ. ವಿಶೇಷವಾಗಿ, ತರುವೆ ಪಾರ್ವತಿ ಅಶೋಕ ಅವರ ಮನೆಯ ಸಮೀಪವಿರುವ ತೋಟಕ್ಕೆ ನುಗ್ಗಿ, ಬಾಳೆ ಹಾಗೂ ಕಾಫಿ ಗಿಡಗಳನ್ನು ಹಾನಿಗೊಳಿಸಿದೆ.
ಈ ಕಾಡಾನೆ ತರುವೆ ಭಾಗದಲ್ಲಿ ಅಲೆದಾಡುತ್ತಿದ್ದು, ಜನರಲ್ಲಿ ಆತಂಕ ಉಂಟಾಗಿದೆ. ಅರಣ್ಯ ಇಲಾಖೆ ತ್ವರಿತವಾಗಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.