ಇತ್ತೀಚಿನ ಸುದ್ದಿ
ಈ ವಾರ ಕಡಿಮೆ ಕೆಲಸ ಹೆಚ್ಚು ರಜೆ!: ಸಾಲು ಸಾಲು ಹಾಲಿಡೇ!!; ಯಾವಾಗೆಲ್ಲ ರಜೆ..? ಮುಂದಕ್ಕೆ ಓದಿ
09/08/2022, 15:50
ಬೆಂಗಳೂರು(reporterkarnataka.com): ಹಬ್ಬ ಬಂತೆಂದರೆ ಸರಕಾರಿ ನೌಕರರಿಗೆ ಮಜಾವೇ ಮಜಾ. ಯಾಕೆಂದರೆ ಸಾಲು ಸಾಲು ರಜೆಗಳು ಧುತ್ತೆಂದು ಎದುರು ಬಂದು ನಿಲ್ಲುತ್ತವೆ.
ಅಂದ ಹಾಗೆ ಈ ವಾರ ಪೂರ್ತಿ ರಜಾದಿನಗಳೇ ತುಂಬಿದ್ದು, ಇಂದು (ಆಗಸ್ಟ್ 9) ಮೊಹರಂ ಹಬ್ಬದ ಕಾರಣದಿಂದ ಶಾಲಾ ಕಾಲೇಜುಗಳಿಗೆ ಹಾಗೂ ಸರ್ಕಾರಿ ಕಚೇರಿಗಳಿಗೆ ರಜೆ ಇದೆ. ಆಗಸ್ಟ್ 11 ಮತ್ತು 12 ರಕ್ಷಾ ಬಂಧನದ ಹಬ್ಬವಾಗಿದ್ದು, ಈ ದಿನಗಳಲ್ಲಿ ಒಂದು ದಿನ ಕೆಲ ಶಾಲೆಗಳಿಗೆ ರಜೆ ಇರುತ್ತದೆ.
ಇನ್ನು, ಆಗಸ್ಟ್ 13 ರಂದು ಎರಡನೇ ಶನಿವಾರದ ರಜೆ ಮತ್ತು ಆಗಸ್ಟ್ 14 ರಂದು ಭಾನುವಾರದ ರಜೆಯಿದ್ದು, ಆಗಸ್ಟ್ 15 ರ ಸೋಮವಾರ ಸ್ವಾತಂತ್ರ್ಯ ದಿನವಾಗಿರುವುದರಿಂದ ಅಂದು ಕೂಡ ಹಾಲಿಡೇ ಫಿಕ್ಸ್. ಹೀಗಾಗಿ ಈ ವಾರ ಕಡಿಮೆ ಕೆಲಸ ಹೆಚ್ಚು ರಜಾ ಗ್ಯಾರೆಂಟಿ.