ಇತ್ತೀಚಿನ ಸುದ್ದಿ
ಈ ಬಾರಿ ಅವಧಿಗೆ ಮುನ್ನ ಮುಂಗಾರು ಆರಂಭ: ಮೇ 27ಕ್ಕೆ ಪೂರ್ವ ನೈಋತ್ಯ ಮಾನ್ಸೂನ್ ಕೇರಳಕ್ಕೆ ಎಂಟ್ರಿ?
14/05/2022, 00:06

ತಿರುವನಂತಪುರ(reporterkarnataka.com): ಕೇರಳಕ್ಕೆ ಅವಧಿ ಪೂರ್ವ ನೈಋತ್ಯ ಮುಂಗಾರು
ಪ್ರವೇಶಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಶುಕ್ರವಾರ ತಿಳಿಸಿದೆ.
ಮೇ 27ರ ವೇಳೆಗೆ ಕೇರಳಕ್ಕೆ ಸಾಮಾನ್ಯ ಆರಂಭದ ದಿನಾಂಕಕ್ಕಿಂತ ಮುಂಚಿತವಾಗಿ ಮೊದಲ ಮಳೆಯನ್ನು ತರುವ ಸಾಧ್ಯತೆಯಿದೆ . ಸಾಮಾನ್ಯ ಆರಂಭದ ದಿನಾಂಕ ಜೂನ್ 1 ಆಗಿದೆ. ಆದರೆ ಈ ವರ್ಷ ಕೇರಳದ ಮೇಲೆ ನೈಋತ್ಯ ಮಾನ್ಸೂನ್, ಸಾಮಾನ್ಯ ಆರಂಭದ ದಿನಾಂಕಕ್ಕಿಂತ 4 ದಿನ ಮುಂಚೆಯೇ ಬರುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಹೇಳಿದೆ.
ಮೇ 15 ರ ವೇಳೆಗೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಮಾನ್ಸೂನ್ ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇವಾಖೆ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.