8:50 PM Monday12 - May 2025
ಬ್ರೇಕಿಂಗ್ ನ್ಯೂಸ್
Bangalore | ಕ್ಯಾನ್ಸರ್ ತಡೆಗೆ ಪರಿಣಾಮಕಾರಿ ಕಾರ್ಯಕ್ರಮ ಅವಶ್ಯ: ಮಾಜಿ ಡಿಸಿಎಂ ಡಾ.… ಶ್ರೀನಗರದಲ್ಲಿ ಸಿಲುಕಿದ್ದ ರಾಜ್ಯದ 13 ಕೃಷಿ ವಿದ್ಯಾರ್ಥಿಗಳು ಸುರಕ್ಷಿತ ವಾಪಸ್: ಪ್ರಧಾನಿ ಸೂಚನೆ… Bangalore | ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಎನ್ಐಎ ತನಿಖೆಗೆ ಹಸ್ತಾಂತರ: ರಾಜ್ಯಪಾಲರ… Vatican City | ನೂತನ ಪೋಪ್‌ ಆಗಿ ಅಮೆರಿಕದ ರಾಬರ್ಟ್ ಫ್ರಾನ್ಸಿಸ್‌ ಪ್ರಿವೊಸ್ಟ್‌… Indo- Pak | ಯುದ್ಧ ಕಾರ್ಮೋಡ: ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದಿಂದ ಭಾರತೀಯ ಸೇನೆಗೆ… ಮಾರಣಾಂತಿಕ ಹೀಮೋಫೀಲಿಯಾ ಬಾಧಿತ ಗರ್ಭಿಣಿ ಮಹಿಳೆಗೆ ಯಶಸ್ವೀ ಶಸ್ತ್ರಚಿಕಿತ್ಸೆ: ತಾಯಿ – ಮಗುವಿಗೆ… Airport | ಕಲಬುರಗಿ ವಿಮಾನ ನಿಲ್ದಾಣ: ಭದ್ರತಾ ತಪಾಸಣೆ; ನಿಗದಿತ ಸಮಯಕ್ಕೆ ಪ್ರಯಾಣಿಕರು… J&K | ಆಪರೇಶನ್ ಸಿಂಧೂರ್: ಕರ್ನಲ್ ಸೋಫಿಯಾ ಖುರೇಷಿ: ಕರ್ನಾಟಕದ ಸೊಸೆ ರೀ..!! Karnataka CM | ಮೈಶುಗರ್ ಕಾರ್ಖಾನೆಗೆ 50 ಕೋಟಿ ಕೊಟ್ಟಿದ್ದಷ್ಟೆ ಅಲ್ಲ, ವಿದ್ಯುತ್… ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಸ್ವಾಗತಿಸಿದ ಮಾಜಿ…

ಇತ್ತೀಚಿನ ಸುದ್ದಿ

Dubai | ಯುಎಇ ಯಕ್ಷಗಾನ ಕಲಿಕಾ ಕೇಂದ್ರಕ್ಕೆ ದಶಮಾನೋತ್ಸವ ಸಂಭ್ರಮ: ‘ಯಕ್ಷ ಗಾಯನ ಸೌರಭ’ ಅಮಂತ್ರಣ ಬಿಡುಗಡೆ

12/05/2025, 20:32

ದುಬೈ(reporterkarnataka.com): ಮಧ್ಯಪ್ರಾಚ್ಯದ ಹೆಮ್ಮೆಯ ಸಂಸ್ಥೆಯಾದ
ಯುಎಇಯ ಯಕ್ಷಗಾನ ಅಭ್ಯಾಸ ಕೇಂದ್ರದ ದಶಮಾನೋತ್ಸವ ಸಂಭ್ರಮ ಮತ್ತು ದುಬಾಯಿ ಯಕ್ಷೋತ್ಸವ 2025ರ ಅಂಗವಾಗಿ ನಡೆಯಲಿರುವ ಅದ್ದೂರಿಯ ಯಕ್ಷಗಾನ ಸಂಬಂಧಿ ಕಾರ್ಯಕ್ರಮ, ಗಲ್ಫ್ ರಾಷ್ಟ್ರದಲ್ಲಿಯೇ ಪ್ರಥಮ ಬಾರಿಗೆ ನಡೆಯಲಿರುವ “ ಯಕ್ಷಗಾಯನ ಸೌರಭ ಮತ್ತು ಶಿವಾನಿ ಸಿಂಹವಾಹಿನಿ ಇದರ ಆಮಂತ್ರಣ ಪತ್ರ ಮತ್ತು ಪ್ರವೇಶಪತ್ರದ ಬಿಡುಗಡೆ ಸಮಾರಂಭ ಭಾನುವಾರ ಹೋಟೇಲ್ ಫಾರ್ಚೂನ್ ಪ್ಲಾಝದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆಯಿತು.
ಅದ್ದೂರಿಯ ಆಯೋಜನೆಯ ಈ ಕಾರ್ಯಕ್ರಮ ಜೂನ್
29ರಂದು ದುಬಾಯಿ ಕರಮದ ಶೇಖ್ ರಶೀದ್ ಅಡಿಟೋರಿಯಂನಲ್ಲಿ (ಇಂಡಿಯನ್ ಸ್ಕೂಲ್ ಕರಮ- near ವೂದ್ ಮೆತಾ ಮೆಟ್ರೋ ಸ್ಟೇಶನ್ ) ನಡೆಯಲಿರುವ ಬಹು ನಿರೀಕ್ಷಿತ ಸಮಾರಂಭದ ಆಮಂತ್ರಣ ಪತ್ರ ಬಿಡುಗಡೆ ಮತ್ತು ಪ್ರವೇಶ ಪತ್ರ ಬಿಡುಗಡೆ ಕಾರ್ಯಕ್ರಮ ಪ್ರಾರ್ಥನೆ-ದೀಪಪ್ರಜ್ವಲನೆಯೊಂದಿಗೆ ಪ್ರಾರಂಭವಾಯಿತು.
ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಸ್ವಾಗತಿಸಿದ ಯಕ್ಷಗಾನ ಅಭ್ಯಾಸ ಕೇಂದ್ರದ ಸಂಚಾಲಕರಾದ ದಿನೇಶ ಶೆಟ್ಟಿಯವರು ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ಯಕ್ಷ್ಗಗಾನ ಅಭ್ಯಾಸ ಕೇಂದ್ರ ನಡೆದು ಬಂದ ದಾರಿ, ಉದ್ದೇಶ, ಸಾಫಲ್ಯ ಕುರಿತು ಮಾತನಾಡಿ, ಪ್ರಸ್ತುತ ವರ್ಷದ ಅದ್ದೂರಿಯ ದಶಮಾನೋತ್ಸವ ಕಾರ್ಯಕ್ರಮ ಮತ್ತು ಯಕ್ಷಗಾನ ಶಿವಾನಿ ಸಿಂಹವಾಹಿನಿ ಯಶಸ್ಸಿಗೆ ಸರ್ವರ ಸಹಕಾರವನ್ನು ಬಯಸಿದರು. ಯಕ್ಷಧ್ರುವ ಪಟ್ಲ ಘಟಕ ಯುಎಇ ಇದರ ಸಹಭಾಗಿತ್ವದೊಂದಿಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಪಟ್ಲ ಟ್ರಸ್ಟ್ ಸ್ಥಾಪಕರಾದ ಸತೀಶ ಶೆಟ್ಟಿಯವರು ಸ್ವತಃ ತಮ್ಮ ಗಾನ ಸಾರಥ್ಯದ ಮೂಲಕ ಕಲೆಯೇರಿಸಲಿದ್ದಾರೆ ಎಂದು ತಿಳಿಸಿದರು.
ಶಿವಾನಿ ಸಿಂಹವಾಹಿನಿ ಯಕ್ಷಗಾನ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಅತಿಥಿ ಕಲಾವಿದರಾದ, ಗಾನ ಪ್ರತಿಭೆ
ದೇವಿಪ್ರಸಾದ ಆಳ್ವ, ತಲಪಾಡಿ;
ಕಾವ್ಯ ನಾಯಕ್ ಅಜೇರು; ಚೆಂಡೆ-ಮದ್ದಳೆ ವಾದಕರಾದ
ಚಂದ್ರಶೇಖರ ಸರಪಾಡಿ; ಪ್ರಮುಖ ವೇಷಧಾರಿಗಳಾಗಿ ಭಾಗವಹಿಸಲಿರುವ ಸುಬ್ರಾಯ ಹೊಳ್ಳ ಕಾಸರಗೋಡು ಮತ್ತು ಅರಣ್ ಕೋಟ್ಯಾನ್ ಹಾಗೂ ವರ್ಣವಸ್ತ್ರಾಲಂಕಾರ ತಜ್ಜ್ಙರಾದ ಗಂಗಾಧರ ಡಿ. ಶೆಟ್ಟಿಗಾರ್, ಕಿನ್ನಿಗೋಳಿ, ನಿತಿನ್ ಕುಂಪಲ ಮತ್ತು ಮನೋಜ್ ಶೆಟ್ಟಿಗಾರ್ ಹಳೆಯಂಗಡಿಯವರ ವಿವರಗಳನ್ನು ಸಭೆಗೆ ನೀಡಿದರು. ಕಾರ್ಯಕ್ರಮ ನಿರೂಪಕರಾಗಿ ಚೇತನ್ ಶೆಟ್ಟಿಯವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಯುಎಇ ಯಕ್ಷಗಾನ ಅಭ್ಯಾಸ ಕೇಂದ್ರದ ಗುರುಗಳೂ ಪ್ರಸಂಗ ನಿರ್ದೇಶಕರೂ ಆದ ಶೇಖರ್ ಡಿ. ಶೆಟ್ಟಿಗಾರ್ ಕಿನ್ನಿಗೋಳಿಯವರು, ಸಭೆಗೆ ಕಾರ್ಯಕ್ರಮದ ಮಾಹಿತಿ ನೀಡುತ್ತಾ, ಕೀರ್ತಿಶೇಷ ಯಕ್ಷಬ್ರಹ್ಮ ಅಗರಿ ಶ್ರೀನಿವಾಸ ಭಾಗವತ ವಿರಚಿತ, ಈಗಾಗಲೇ ಲಕ್ಷಕ್ಕೂ ಮಿಕ್ಕಿದ ಪ್ರದರ್ಶನ ಕಂಡ – “ಶಿವಾನಿ ಸಿಂಹವಾಹಿನಿ” – ಪ್ರಸಂಗ- ಪ್ರದರ್ಶನ ಕುರಿತಾಗಿ ವಿವರವನ್ನು ಸಭೆಗೆ ನೀಡಿದರು. ಅಲ್ಲದೆ ಯು ಎ ಇ., ಯಲ್ಲಿಯೇ ಪ್ರಥಮ ಬಾರಿಗೆ, ಪ್ರಖ್ಯಾತ ಭಾಗವತ ತ್ರಯರಿಂದ ನಡೆಯಲಿರುವ “ಯಕ್ಷ ಗಾಯನ ಸೌರಭ” ಅಲ್ಲದೆ ಕಾರ್ಯಕ್ರಮ ಆರಂಭದಲ್ಲಿ ಅಬ್ಬರಿಸಲಿರುವ, “ಅಬ್ಬರ ತಾಳ”, ವೈಭವದ ಶೋಭಾಯಾತ್ರೆ, ಪುಟಾಣಿ ಮಕ್ಕಳು ಮತ್ತು ಕೇಂದ್ರದ ಭಾಗವತಿಗೆ ಮತ್ತು ಚೆಂಡೆ-ಮದ್ದಳೆ ಅಭ್ಯಾಸಿಗಳ ಹಿಮ್ಮೇಳದೊಂದಿಗೆ ನಡೆಯಲಿರುವ ಸೊಗಸಾದ ಪೂರ್ವರಂಗ ದ ಮೂಲಕ ಪರಂಪರೆಯ ನಾಟ್ಯ ವೈಭವ ಕಾಣಿಸಿಕೊಡಲಿದ್ದಾರೆ ಎಂಬಿತ್ಯಾದಿಗಳ ವಿವರಗಳನ್ನೂ ಸಭೆಗೆ ನೀಡಿದರು.
ಗೌರವಾನ್ವಿತ ಅತಿಥಿಗಳಾದ, ಶ್ರೀ ಸರ್ವೋತ್ತಮ ಶೆಟ್ಟಿ,ಅಧ್ಯಕ್ಷರು, ಅಬುಧಾಬಿ ಕರ್ನಾಟಕ ಸಂಘ, ಶ್ರೀ ಪ್ರವೀಣ್ ಕುಮಾರ್ ಶೆಟ್ಟಿ, ವಕ್ವಾಡಿ, ಉದ್ಯಮಿ, ಅಧ್ಯಕ್ಷರು, UAE ಬಂಟ್ಸ್ ಮತ್ತು ಕರ್ನಾಟಕ NRI ವೇದಿಕೆ; ಮೊದಲಾದವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ, ಯಕ್ಷೋತ್ಸವದ ಆಮಂತ್ರಣ ಪತ್ರ ಮತ್ತು ಪ್ರವೇಶ ಬಿಡುಗಡೆಗೊಳಿಸಿ, ಕಾರ್ಯಕ್ರಮಕ್ಕೆ ಶುಭಕೋರಿದರು.
ಇದೆ ಸಂಧರ್ಭದಲ್ಲಿ, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಅಡ್ಯಾರ್ ಗಾರ್ಡನ್ ನಲ್ಲಿ ಹಮ್ಮಿಕೊಂಡಿರುವ ದಶಮಾನೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರವನ್ನು ವೇದಿಕೆಯಲ್ಲಿ ಬಿಡುಗಡೆಗೊಳಿಸಲಾಯಿತು. ಯಕ್ಷಧ್ರುವ ಪಟ್ಲ ಟ್ರಸ್ಟ್ ದುಬಾಯಿ ಘಟಕದ ಅಧ್ಯಕ್ಷರಾದಂತಹ ಸರ್ವೋತ್ತಮ ಶೆಟ್ಟಿ, ಸಂಚಾಲಕರಾದ ಪ್ರವೀಣ್ ಶೆಟ್ಟಿ ಮೊದಲಾದವರು ಅಶಕ್ತ ಕಲಾವಿದರ ನೆರವಿಗಾಗಿ ಸ್ಥಾಪಿಸಿರುವ ಪಟ್ಲ ಟ್ರಸ್ಟ್ ಇದನ್ನು ಬಲಪಡಿಸುವ ಉದ್ದೇಶದಿಂದ ನಾವೆಲ್ಲರೂ ಕೈಜೋಡಿಸೋಣ ಎಂದು ಕರೆ ನೀಡಿದರು.

ಇತ್ತೀಚಿನ ಸುದ್ದಿ

ಜಾಹೀರಾತು