ಇತ್ತೀಚಿನ ಸುದ್ದಿ
ದುಬೈಗೆ ಅಕ್ರಮ ವಿದೇಶಿ ಕರೆನ್ಸಿ ಸಾಗಾಟ ಯತ್ನ: 18.80 ಲಕ್ಷ ಮೌಲ್ಯ ಡಾಲರ್ ಜತೆ ಆರೋಪಿ ಬಂಧನ
01/04/2022, 21:12

ಮಂಗಳೂರು(reporterkarnataka.com): ವಿದೇಶಿ ಕರೆನ್ಸಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಆರೋಪಿಯು ಸ್ಪೈಸ್ ಜೆಟ್ ವಿಮಾನದಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ದುಬೈಗೆ ಪ್ರಯಾಣಿಸಲು ಸಿದ್ಧನಾಗಿದ್ದ. ಆತನಿಂದ 18,80,000 ರೂ. ಮೌಲ್ಯದ ಯುಎಸ್ ಡಾಲರ್ ಅನ್ನು ವಶಕ್ಕೆ ಪಡೆದಿದ್ದಾರೆ.
ತಪಾಸಣೆಯ ವೇಳೆ ಆತನ ಬ್ಯಾಗ್ ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಯುಎಸ್ ಡಾಲರ್ ಗಳನ್ನು ಪತ್ತೆಹಚ್ಚಿ ಅಕ್ರಮ ಡಾಲರ್ ಸಹಿತ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.