8:01 AM Sunday22 - December 2024
ಬ್ರೇಕಿಂಗ್ ನ್ಯೂಸ್
ಸಿ. ಟಿ. ರವಿ ಸದಸ್ಯತ್ವ ಅನರ್ಹಗೊಳಿಸಿ: ಮಲೆನಾಡು ಪ್ರದೇಶಾಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷ… ಎಲ್ಲರನ್ನೂ ಒಳಗೊಳ್ಳುವ ಸಮಾಜ ನಿರ್ಮಿಸೋಣ: ಆರ್ಚ್ ಬಿಷಪ್ಸ್ ಹೌಸ್ ಕ್ರಿಸ್ಮಸ್ ಆಚರಣೆಯಲ್ಲಿ ಮುಖ್ಯಮಂತ್ರಿ… ವಕ್ಫ್ ಹೋರಾಟಕ್ಕೆ ಮಣಿದು ಸಮಿತಿ ರಚನೆಗೆ ಸರಕಾರ ನಿರ್ಧಾರ: ಪ್ರತಿಪಕ್ಷ ನಾಯಕ ಆರ್‌.… ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ: ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ರಾತ್ರಿಯಡೀ ಪೊಲೀಸ್ ವಾಹನದಲ್ಲಿ ಸಿ.ಟಿ. ರವಿ ಸುತ್ತಾಟ!: ಕಾರಣ ಏನು ಗೊತ್ತೇ? ಸಿ.ಟಿ.ರವಿ ಬಂಧನ: ಚಿಕ್ಕಮಗಳೂರು, ಕೊಟ್ಟಿಗೆಹಾರದಲ್ಲಿ ಬಿಜೆಪಿ ಭಾರೀ ಪ್ರತಿಭಟನೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಪಿಒಸಿ ದರ್ಜೆ: ವಿಮಾನಯಾನ ಸಚಿವ ಜತೆ ಸಂಸದ ಕ್ಯಾಪ್ಟನ್… ಮಂಗಳೂರು: ಹೊಸ ವರ್ಷದ ಆಚರಣೆಗೆ ತರಿಸಿದ್ದ 9 ಲಕ್ಷ ರೂ. ಮೌಲ್ಯದ ಡ್ರಗ್ಸ್… ಎನ್.ಆರ್.ಪುರ: ತಂದೆ- ಮಗನ ಮೇಲೆ ಕಾಡಾನೆ ದಾಳಿ; ತಂದೆ ಸಾವು; ಮಗ ತಪ್ಪಿಸಿಕೊಂಡು… ಅರಣ್ಯ ಹಕ್ಕು ಕಾಯ್ದೆಯಡಿ ಇದುವರೆಗೆ 16,665 ಪ್ರಕರಣಗಳಲ್ಲಿ ಹಕ್ಕುಪತ್ರ ವಿತರಣೆ: ಸದನದಲ್ಲಿ ಸಿಎಂ…

ಇತ್ತೀಚಿನ ಸುದ್ದಿ

ದುಬೈ: 6.8 ದಶಲಕ್ಷ ಡಾಲರ್ ಮೌಲ್ಯದ ‘ಬಾಹ್ಯಾಕಾಶ’ದ ಅಪೂರ್ವ ಕಪ್ಪು ವಜ್ರ ಪ್ರದರ್ಶನ

19/01/2022, 21:42

ದುಬೈ(reporterkarnataka.com): ಅಂತಾರಾಷ್ಟ್ರೀಯ ಹರಾಜು‌ ಸಂಸ್ಥೆಯಾದ ಸೊದೆಬಿಯ ದುಬೈ ಘಟಕವು ಸೋಮವಾರ ಬಾಹ್ಯಾಕಾಶದಿಂದ ಬಂದಿದೆಯೆಂದು ನಂಬಲಾದ ಅಪರೂಪದ ಕಪ್ಪುವಜ್ರವನ್ನು ಪ್ರದರ್ಶನಕ್ಕಿರಿಸಿದೆ.

‘ದಿ ಎನಿಗ್ಮಾ’ ಎಂದು ಹೆಸರಿಡಲಾದ 555.55 ಕ್ಯಾರಟ್‌ನ ಕಪ್ಪು ವಜ್ರವು ಫೆಬ್ರವರಿಯಲ್ಲಿ ಲಂಡನ್‌ನಲ್ಲಿ ಹರಾಜಾಗಲಿದ್ದು, ಅದಕ್ಕೆ ಪೂರ್ವಭಾವಿಯಾಗಿ ದುಬೈ ಹಾಗೂ ಅಮೆರಿಕದ ಲಾಸ್‌ಏಂಜಲೀಸ್‌ನಲ್ಲಿ ಅದರ ಪ್ರದರ್ಶನವನ್ನೇಪಡಿಸಲಾಗಿದೆ. ಸೋಮವಾರ ಈ ಅಪರೂಪದ ವಜ್ರವನ್ನು ಪತ್ರಕರ್ತರಿಗೆ ಪ್ರದರ್ಶಿಸಲಾಯಿತು.

ಈ ಅಪೂರ್ವ ವಜ್ರವು ಕನಿಷ್ಠ 50 ಲಕ್ಷ ಬ್ರಿಟಿಶ್ ಪೌಂಡ್ (6.8 ದಶಲಕ್ಷ ಡಾಲರ್) ಬೆಲೆಗೆ ಮಾರಾಟವಾಗುವ ನಿರೀಕ್ಷೆಯನ್ನು ಸೊದೆಬಿ ಹೊಂದಿದೆ. ಕ್ರಿಪ್ಟೊಕರೆನ್ಸಿಯನ್ನು ಕೂಡಾ ಪಾವತಿಯ ವಿಧಾನವಾಗಿ ಸ್ವೀಕರಿಸುವ ಯೋಜನೆಯನ್ನು ಸೊದೆಬಿ ಹೊಂದಿದೆ ಎಂದು ಮೂಲಗಳು ತಿಳಿಸಿವೆ.

‘ಎನಿಗ್ಮಾ’ ಕಪ್ಪು ವಜ್ರಕ್ಕೆ 5 ಅಂಕಿ ಮಹತ್ವದ್ದಾಗಿದೆ. ಈ ವಜ್ರವು 555.5 ಕ್ಯಾರಟ್ನದ್ದಾಗಿದ್ದು, 55 ಮುಖಗಳನ್ನು ಹೊಂದಿದೆಯೆಂದು ‘ಸೊದೆಬಿ ದುಬೈ’ನ ಆಭರಣ ತಜ್ಡೆ ಸೋಫಿ ಸ್ಟೀವನ್ಸ್ ತಿಳಿಸಿದ್ದಾರೆ.

ಈ ಕಪ್ಪು ವಜ್ರವು ಬಾಹ್ಯಾಕಾಶ ಮೂಲದ್ದೆಂದು ನಾವು ನಂಬುತ್ತೇವೆ. ಉಲ್ಕಾಶಿಲೆಗಳು ಭೂಮಿಯೊಂದಿಗೆ ಘರ್ಷಿಸುವಾಗ ಉಂಟಾಗುವ ರಾಸಾಯನಿಕ ಅನಿಲ ಸಂಯೋಜನೆಯಿಂದ ಈ ಕಪ್ಪು ಶಿಲೆ ರೂಪುಗೊಂಡಿರಬಹುದು ಅಥವಾ ಸ್ವತಃ ಉಲ್ಕಾಶಿಲೆಗಳಿಂದಲೇ ಅದು ಭೂಮಿಗೆ ಬಂದಿರಬಹುದು’’ ಎಂದು ಸೋಫಿಸ್ಟೀವನ್ಸ್ ಹೇಳಿದ್ದಾರೆ.

ಕಾರ್ಬನಾಡೊ ಎಂದು ಕೂಡಾ ಕರೆಯಲಾಗುವ ಕಪ್ಪುವಜ್ರವು ಅತ್ಯಂತ ಅಪರೂಪವಾಗಿ ದೊರೆಯುತ್ತದೆ. ಈವರೆಗೆ ಪ್ರಾಕೃತಿಕವಾಗಿ ಬ್ರೆಝಿಲ್ ಹಾಗೂ ಮಧ್ಯ ಆಫ್ರಿಕದಲ್ಲಿ ಮಾತ್ರವೇ ಸಿಕ್ಕಿವೆ.‌

ಈ ಅಪೂರ್ವ ವಜ್ರವು ಕನಿಷ್ಠ 50 ಲಕ್ಷ ಬ್ರಿಟಿಶ್ ಪೌಂಡ್ (6.8 ದಶಲಕ್ಷ ಡಾಲರ್) ಬೆಲೆಗೆ ಮಾರಾಟವಾಗುವ ನಿರೀಕ್ಷೆಯನ್ನು ಸೊದೆಬಿ ಹೊಂದಿದೆ.

ಇತ್ತೀಚಿನ ಸುದ್ದಿ

ಜಾಹೀರಾತು