ಇತ್ತೀಚಿನ ಸುದ್ದಿ
ಕುಡಿದು ಪಿಕಪ್ ವಾಹನ ಚಾಲನೆ: ಶಾಲಾ ಬಸ್ಸಿಗೆ ಡಿಕ್ಕಿ; ಚಾಲಕ ಪೊಲೀಸ್ ವಶಕ್ಕೆ
06/07/2025, 20:44

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಕೊಡಗು ಜಿಲ್ಲೆಯ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಗುಡ್ಡೆ ಹೊಸೂರು ತೆಪ್ಪದಕಂಡಿ ಬಳಿ ಶಾಲಾ ವಾಹನಕ್ಕೆ ಪಿಕಪ್ ಜೀಪು ಡಿಕ್ಕಿ ಹೊಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಕಪ್ ಚಾಲಕನ ಬಂಧಿಸಲಾಗಿದೆ.
ಚಾಲಕ ತೀರ್ಥ ಪ್ರಸಾದ್ ಅತಿಯಾಗಿ ಮದ್ಯಪಾನ ಮಾಡಿ ವಾಹನ ಚಲಾಯಿಸಿದ್ದ ಆರೋಪದ ಮೇಲೆ ಕೆಎ 12 ಬಿ 8762 ಪಿಕಪ್ ಜೀಪನ್ನು ವಶಕ್ಕೆ ಪಡೆದು ಚಾಲಕ ತೀರ್ಥ ಪ್ರಸಾದ್ ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.