10:33 PM Monday3 - March 2025
ಬ್ರೇಕಿಂಗ್ ನ್ಯೂಸ್
Food | ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಖರೀದಿಸುವ ಆಹಾರ ಧಾನ್ಯಗಳ… State Budget | ಬಿಜೆಪಿಯಿಂದ ಮಾರ್ಚ್ 7 ಬಜೆಟ್ ಮಂಡನೆ ದಿನ ಶಾಸಕರ… Accident | ಪುತ್ತೂರು: ಭೀಕರ ರಸ್ತೆ ಅಪಘಾತ; ಮಗು ಸಹಿತ ಇಬ್ಬರ ದಾರುಣ… JDS Meeting | ಬೆಂಗಳೂರಿನಲ್ಲಿ ಜೆಡಿಎಸ್ ಮಹತ್ವದ ಸಭೆ: ಮಾಜಿ ಪ್ರಧಾನಿ ದೇವೇಗೌಡರು,… Water | ನಾರಾಯಣಪುರ ಕಾಲುವೆಗೆ ಏ.15ರವರೆಗೆ ನೀರು ಹರಿಸಲು ರೈತ ಸಂಘ ಮುಖಂಡರು… Central Govt purchase | ಬೆಂಬಲ ಬೆಲೆಯಲ್ಲಿ ಕುಸುಬೆ ಖರೀದಿ: ಕೃಷಿ ಮಾರುಕಟ್ಟೆ… Double Murder | ಬೆಂಗಳೂರು; ಇಬ್ಬರ ಕೊಲೆಗೈದ ಆರೋಪಿಗೆ 10 ವರ್ಷ ಶಿಕ್ಷೆ;… Mangaluru | ಅಂತರ್ ಜಿಲ್ಲಾ ಖದೀಮ ಕಳ್ಳನ ಸೆರೆ: 20ಕ್ಕೂ ಹೆಚ್ಚು ದ್ವಿಚಕ್ರ… Valmiki Community | ವಾಲ್ಮೀಕಿ ಹೆಸರಲ್ಲಿ ಮೆಡಿಕಲ್ ಕಾಲೇಜು: ಮಾಜಿ ಸಂಸದ ಉಗ್ರಪ್ಪ… ಮೂಡಿಗೆರೆ: ಸರಕಾರಿ ಬಸ್ ಮತ್ತು ಪಿಕಪ್ ವಾಹನ ಮುಖಾಮುಖಿ ಡಿಕ್ಕಿ; ಅದೃಷ್ಟವಶಾತ್ ಎಲ್ಲರೂ…

ಇತ್ತೀಚಿನ ಸುದ್ದಿ

Drugs NDPS | ಅಕ್ರಮ ಗಾಂಜಾ ಸಾಗಾಟ: ಮೂಡಿಗೆರೆಯಲ್ಲಿ ಯುವಕ ಬಂಧನ; ಕಾರು ವಶ

03/03/2025, 22:27

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಅಬಕಾರಿ ಇಲಾಖೆಯ ಅಧಿಕಾರಿಗಳ ತ್ವರಿತ ಕಾರ್ಯಾಚರಣೆಯಿಂದ ಮೂಡಿಗೆರೆ ಪಟ್ಟಣದ ಬೇಲೂರು ರಸ್ತೆಯ ಬಿಜುವಳ್ಳಿ ಗ್ರಾಮದ ಹಳಸೆ ತಿರುವಿನಲ್ಲಿ ಗಾಂಜಾ ಅಕ್ರಮ ಸಾಗಾಟ ನಡೆಸುತ್ತಿದ್ದ ಯುವಕ ಬಂಧಿಸಲಾಗಿದೆ.
ಅಬಕಾರಿ ಉಪ ಆಯುಕ್ತರು, ಚಿಕ್ಕಮಗಳೂರು ಜಿಲ್ಲೆ, ಇವರ ಮಾರ್ಗದರ್ಶನದಲ್ಲಿ ಅಬಕಾರಿ ಉಪ ಅಧೀಕ್ಷಕರು, ಮೂಡಿಗೆರೆ ಅವರ ನೇತೃತ್ವದಲ್ಲಿ ಈ ದಾಳಿ ನಡೆಸಲಾಯಿತು. ವಜೀರ್ ಅಹ್ಮದ್ ಅಲಿಯಾಸ್ ಶೇಕ್ ಅಬ್ದುಲ್ಲ ಬಿನ್ ಲೇಟ್ ಅಲಿಜಾನ್ (27) ಜೆಎಂ ರಸ್ತೆ, ಮೂಡಿಗೆರೆ ಎಂಬುವವನು ತನ್ನ ವ್ಯಾಗನಾರ್ ಕಾರು (ನಂ. ಕೆಎ 19 ಎನ್ 5049) ನಲ್ಲಿ 1.975 ಕೆ.ಜಿ. ಗಾಂಜಾ ಸಾಗಾಟ ಮಾಡುತ್ತಿದ್ದಾನೆ ಎಂಬ ಮಾಹಿತಿ ದೊರಕಿದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಬಂಧಿಸಲಾಗಿದೆ.
ಆರೋಪಿಯನ್ನು ಎನ್‌ಡಿಪಿಎಸ್ (NDPS) ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ, ಚಿಕ್ಕಮಗಳೂರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಅಬಕಾರಿ ಉಪ ಅಧೀಕ್ಷಕರಾದ ಶೇಖರ್ ಎಂ.ಆರ್., ಅಬಕಾರಿ ನಿರೀಕ್ಷಕರಾದ ಲೋಕೇಶ್ ಸಿ., ಸಿಬ್ಬಂದಿಗಳಾದ ರಮೇಶ್ ತುಳಜಣ್ಣನವರ್, ಶಂಕರ ಗುರವ ಹಾಗೂ ವಾಹನ ಚಾಲಕರಾದ ಪ್ರವೀಣ್ ಅವರು ಭಾಗವಹಿಸಿದ್ದರು. ಪ್ರಕರಣವನ್ನು ಅಬಕಾರಿ ನಿರೀಕ್ಷಕರಾದ ಲೋಕೇಶ್ ಸಿ., ಮೂಡಿಗೆರೆ ಉಪ ವಿಭಾಗ ಇವರು ದಾಖಲಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು