ಇತ್ತೀಚಿನ ಸುದ್ದಿ
ಡಾ. ಸುಮಾ ಟಿ. ರೋಡನ್ನವರ್ ಗೆ ಹಿಂದಿ ಸೇವಾ ಪ್ರಶಸ್ತಿ ಪ್ರದಾನ
18/06/2024, 23:30
ಮಂಗಳೂರು(reporterkarnataka.com):ವಿಶ್ವ ಹಿಂದಿ ಸಾಹಿತ್ಯ ಸೇವಾ ಸಂಸ್ಥಾನ್ ಪ್ರಯಾಗ್ ರಾಜ್ ಅವರು ರಾಷ್ಟ್ರೀಯ ಮಟ್ಟದ ಹಿಂದಿ ಭಾಷಾ ವಿಷಯದಲ್ಲಿ ಉತ್ತಮ ಸೇವೆಗಾಗಿ 2024 ರ ಹಿಂದಿ ಸೇವಾ ಪ್ರಶಸ್ತಿಯನ್ನು ಮಂಗಳೂರು ವಿವಿ ಕಾಲೇಜಿನ ಹಿಂದಿ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ಸುಮಾ ರೋಡನ್ನವರ್ ಅವರಿಗೆ ಪ್ರದಾನ ಮಾಡಲಾಯಿತು.
ಮಂಗಳೂರು ವಿವಿ ಕಾಲೇಜಿನಲ್ಲಿ ಇತ್ತೀಚಿಗೆ ನಡೆದ ಎರಡು ದಿನಗಳ ರಾಷ್ಟ್ರೀಯ ಹಿಂದಿ ಅಧಿವೇಶನದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಿದರು.