10:53 PM Sunday23 - March 2025
ಬ್ರೇಕಿಂಗ್ ನ್ಯೂಸ್
IndiGo6E | ಹುಬ್ಬಳ್ಳಿ-ಬೆಂಗಳೂರು ಮಧ್ಯೆ ಮತ್ತೊಂದು ವಿಮಾನ ಸೇವೆ: ಕೇಂದ್ರ ಸಚಿವ ಪ್ರಹ್ಲಾದ್… FIR Against Madhwaraj | ಮಹಿಳೆಯ ಕಟ್ಟಿ ಹಾಕಿ ಹಲ್ಲೆ ಪ್ರಕರಣದ ಸಮರ್ಥನೆ?:… Ugadi | ರಾಜಭವನದದಲ್ಲಿ ಚಿಗುರಿದ ‘ಚಂದನ’ದ ‘ಚೈತ್ರಾಂಜಲಿ’: ಗಾಜಿನ ಮನೆಯಲ್ಲಿ ಮೂಡಿ ಬಂತು… Karnataka Bundh | ಪ್ರತಿಷ್ಠೆಗಾಗಿ ಅನಾವಶ್ಯಕ ಬಂದ್ ಕರೆ ಕೊಡಬಾರದು: ಮಾಜಿ ಗೃಹ… 23.24 ಕೋಟಿ ಮೌಲ್ಯದ ಅಕ್ರಮ ಒತ್ತುವರಿ ತೆರವು: ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್ ಕರ್ನಾಟಕ ಬಂದ್: ಚಿಕ್ಕಮಗಳೂರು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಮ್ಮದು ಜನಪರ, ಸುಸ್ಥಿರ ಹಾಗೂ ಸಮಗ್ರ ಅಭಿವೃದ್ಧಿಯ ಬಜೆಟ್: ಮುಖ್ಯಮಂತ್ರಿ ಸಿದ್ದರಾಮಯ್ಯ BJP MLAS SUSPENDED | ಸ್ಪೀಕರ್ ಪೀಠಕ್ಕೆ ಅಗೌರವ: ಡಾ. ಭರತ್ ಶೆಟ್ಟಿ,… ಹನಿಟ್ರ್ಯಾಪ್ ಪ್ರಕರಣ: ವಿಧಾನ ಸಭೆಯಲ್ಲಿ ಬಿಜೆಪಿ- ಜೆಡಿಎಸ್ ನಿಂದ ಭಾರೀ ಪ್ರತಿಭಟನೆ; ಸ್ಫೀಕರ್… ಅಂಗನವಾಡಿ ಆಹಾರ ಗುಣಮಟ್ಟದ ನಿರ್ಲಕ್ಷ್ಯ ವಹಿಸಿದರೆ ಉಪನಿರ್ದೇಶಕರ ಮೇಲೆ ಕ್ರಮ: ಸಚಿವೆ ಲಕ್ಷ್ಮೀ…

ಇತ್ತೀಚಿನ ಸುದ್ದಿ

ಪುತ್ತೂರು ಸಂತ ಫಿಲೋಮಿನಾ ಕಾಲೇಜಿನಲ್ಲಿ ಸ್ವಾಯತ್ತ ಸ್ಥಾನಮಾನದ ಉದ್ಘಾಟನೆ

22/03/2025, 22:23

ಪುತ್ತೂರು(reporterkarnataka.com): ಮಂಗಳೂರಿನ ಕ್ಯಾಥೋಲಿಕ್ ಶಿಕ್ಷಣ ಮಂಡಳಿಯ ಅಧೀನಕ್ಕೊಳಪಟ್ಟ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜು ಕರ್ನಾಟಕ ಸರ್ಕಾರದ ಅನುಮೋದನೆಯೊಂದಿಗೆ, ಮಂಗಳೂರು ವಿಶ್ವವಿದ್ಯಾಲಯ ಮತ್ತು ಯುಜಿಕೆಯಿಂದ ಮಂಗಳೂರು ವಿಶ್ವವಿದ್ಯಾನಿಯದ ಅಧೀನಕ್ಕೊಳಪಟ್ಟ ಸ್ವಾಯತ್ತ ಕಾಲೇಜು ಎಂದು ಘೋಷಿಸಲ್ಪಟ್ಟ ಹಿನ್ನೆಲೆಯಲ್ಲಿ ಇಂದು ಕಾಲೇಜಿನ ಸಭಾಂಗಣದಲ್ಲಿ ಸ್ವಾಯತ್ತ ಸ್ನಾನಮಾನದ ಉದ್ಘಾಟನಾ ಸಮಾರಂಭ ಸಂಭ್ರಮದಿಂದ ನಡೆಯಿತು.

ಅಧ್ಯಕ್ಷತೆಯನ್ನುಮಂಗಳೂರು ಧರ್ಮಪ್ರಾಂತ್ಯದ ಬಿಷಸ್ ಪರಮ ಪೂಜ್ಯ ಡಾ| ಪೀಟರ್ ಪಾವ್ ಸಲ್ಮಾನ ಅವರು ವಹಿಸಿದ್ದರು. ತಮ್ಮ ಅಧ್ಯಕ್ಷೀಯ ಮಾತುಗಳಲ್ಲಿ ಅವರು ” ವಿದ್ಯೆ ಇದ್ದರೆ ಮಾತ್ರ ಸಾಲದು ವಿನಯವೂ ಇರಬೇಕು, ನೀವು ಜೀವನದಲ್ಲಿ ಉನ್ನತ ಹುದೆಯನ್ನಲಂಕರಿಸಿದ್ದರೂ ಮಾನವೀಯ ಮೌಲಗಳನ್ನು ಮರೆಯಬಾರದು. ಎಲ್ಲಾ ರೀತಿಯ ಜನರನ್ನೂ ಪ್ರೀತಿಸುವ ಹೃದಯ ವೈಶಾಲ್ಯವಿರಬೇಕು. ನಿಮ್ಮೊಂದಿಗೆ ಇತರರನ್ನೂ ಬೆಳೆಸುವ ಒಳ್ಳೆಯ ಗುಣವಿರಬೇಕು, ಸ್ವಾತ್ತ ಸಂಸ್ಥೆಯಲ್ಲಿ ಪ್ರತಿಯೋರ್ವನೂ ತನ್ನ ಕರ್ತವ್ಯ ನಿರ್ವಹಿಸುವ ಪ್ರತಿಯೋರ್ವ ವ್ಯಕ್ತಿಯೂ ತನ್ನ ಜವಾಬ್ದಾರಿಯನ್ನರಿತು ಕರ್ತವ್ಯ ನಿರ್ವಹಿಸಬೇಕು, ಸ್ವಾಯತ್ತ ಸ್ಥಾನಮಾನವು ಸಂಸ್ಥೆಗೆ ಸೇರಿದ ಹಲವರ ಕನಸು, ಇದನ್ನು ನನಸಾಗಿಸಲು ಶ್ರಮಿಸಿದ ಪ್ರತಿಯೋರ್ವರಿಗೂ ಅಭಿನಂದಿಸುತ್ತಿದ್ದೇನೆ ಎಂದು ಹೇಳಿ ಸ್ವಾಯತ್ತ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿಗಳಿಗೂ, ವಿದ್ಯಾರ್ಥಿಗಳಿಗೂ ಅಶೀರ್ವದಿಸಿದರು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಬೆಂಗಳೂರು ಮಹಾನಗರ ಮೆಟ್ರೊಪೊಲಿಟನ್ ಧರ್ಮಪ್ರಾಂತ್ಯದ ಅರ್ಚ್ ಬಿಷಪ್‌ ಪರಮ ಪೂಜ್ಯ ಡಾ| ಪೀಟರ್ ಮಚಾದೋ ಅವರು ತಮ್ಮ ಆಶೀರ್ವಚನದ ನುಡಿಗಳಲ್ಲಿ ಜನರು ವಿಮರ್ಶಾತ್ಮಕ ಚಿಂತನೆ, ಜೀವನ ಪರ್ಯಂತ ಕಲಿಕೆಯ ಬಗ್ಗೆ ಒಲವು, ಸಮರ್ಪಕ ಸಂವಹನ ಹಾಗೂ ಆವಿಷ್ಕಾರಕ್ಕೆ ಕಾರಣವಾಗುವಂತಹ ಶಿಕ್ಷಣ ದೊರೆತಲ್ಲಿ ಇತಿಹಾಸ ಸೃಷ್ಟಿಸಬಹುದು ” ಎಂದು ಹೇಳಿ ಕಾಲೇಜಿಗೆ ಸಂಬಂಧಿಸಿದ ಎಲ್ಲಾ ವ್ಯಕ್ತಿಗಳ ಮೇಲೂ ದೇವ ಕೃಪೆಯಿರಲಿ ಎಂದು ಆಶೀರ್ವದಿಸಿದರು.
ಸ್ವಾಯತ್ತ ಕಾಲೇಜಿನ ಲಾಂಛನವನ್ನು ಹಾಗೂ ಪರಿಷ್ಕರಿಸಲಾದ ಕಾಲೇಜು ವೆಬ್ ಸೈಟ್ ಅನ್ನು ಬಿಡುಗಡೆಗೊಳಿಸಿ ಮಾತನಾಡಿದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್‌ ಅವರು “ಮೌಲ್ಯಾಧಾರಿಕ ಶಿಕ್ಷಣವನ್ನು ಗ್ರಾಮೀಣ ವಿದ್ಯಾರ್ಥಿಗಳಿಗೆ ಕರಾವಳಿಯ ಹೆಮ್ಮೆಯ ಸಂಸ್ಥೆ ಸಂತ ಫಿಲೋಮಿನಾ, ಕಲಿಕೆಯಲ್ಲಿ ಮಾತ್ರವಲ್ಲದೆ ರಾಷ್ಟ್ರಕ್ಕೆ ಹಲವಾರು ಪ್ರಜ್ಞಾವಂತ ಪ್ರತಿಭೆಗಳನ್ನು ನೀಡಿರುತ್ತದೆ, ಬಿಷಪ್‌ರ ನೇತೃತ್ವದ ಕ್ರೈಸ್ತ ಸಂಸ್ಥೆಗಳು ವೈದ್ಯಕೀಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಕೊಡುಗೆಗಳನ್ನು ನೀಡುತ್ತಿವೆ. ಮುಂದಿನ ದಿನಗಳಲ್ಲಿ ಈ ಸ್ವಾಯತ್ತ ಸಂಸ್ಥೆಯು ಮುಂದಿನ ದಿನಗಳಲ್ಲಿ ವಿಶ್ವವಿದ್ಯಾನಿಲಯವಾಗಿಲಿ ” ಎಂದು ಹೇಳಿ ಯಾವುದೇ ಫಲಾಪೇಕ್ಷೆಯಿಲ್ಲದೆ ಕರ್ತವ್ಯ ನಿರ್ವಹಿಸಲು ಸಂತ ಫಿಲೋಮಿನಾ ವಿದ್ಯಾ ಸಂಸ್ಥೆಯು ತಮಗೆ ಕಲಿಸಿದ ಜೀವನ ಪಾಠವನ್ನು ಸ್ಮರಿಸಿ ಸ್ವಾಯತ್ತ ಸ್ಥಾನಮಾನ ಗಳಿಸಿದುದಕ್ಕಾಗಿ ಅಭಿನಂದಿಸಿದರು.
ಸ್ವಾಯತ್ತ ಕಾಲೇಜಿನಲ್ಲಿ ನೂತನವಾಗಿ ನಿರ್ಮಿಸಲಾದ ಸೌಲಭ್ಯಗಳಾದ ಬೋರ್ಡ್ ರೂಮ್, ಪರೀಕ್ಷಾಂಗ ವಿಭಾಗ, ಶೈಕ್ಷಣಿಕ ವಿಭಾಗ, ಹಣಕಾಸು ವಿಭಾಗ, ನವೀಕರಿಸಿದ ಫುಡ್ ಕೋರ್ಟ್‌ ಮತ್ತು ಎಂಸಿಎ ಪ್ರಯೋಗಾಲಯಗಳನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ| ಪಿ ಎಲ್‌ ಧರ್ಮರವರು “ವಿದ್ಯಾರ್ಥಿಗಳಿಗೆ ಇನ್ನಷ್ಟು ಗುಣಮಟ್ಟದ ಶಿಕ್ಷಣವನ್ನು ನೀಡುವ ಜವಾಬ್ದಾರಿ ಸ್ವಾಯತ್ತ ಸಂಸ್ಥೆಗಳಿಗಿದೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಹಾಗೂ ಮೌಲ್ಯಾಧಾರಿತ ಶಿಕ್ಷಣವನ್ನು ನೀಡುವ ನಂಬಿಕೆಯೊಂದಿಗೆ ಸ್ವಾಯತ್ತ ಸ್ಥಾನಮಾನಕ್ಕೆ ಸಮ್ಮತಿ ನೀಡಲಾಗುತ್ತದೆ. ಉದ್ಯೋಗಕ್ಷೇತ್ರದ ಬೇಡಿಕೆಗಳಿಗೆ ಅನುಗುಣವಾದ ಪಠ್ಯಕ್ರಮವನ್ನು ರಚಿಸುವುದು ಮಾತ್ರ ಸ್ವಾಯತ್ತ ಸಂಸ್ಥೆಯ ಜವಾಬ್ದಾರಿಯಲ್ಲ. ವಿದ್ಯಾರ್ಥಿಗಳಲ್ಲಿ ಕುತೂಹಲ ಸೃಷ್ಟಿಸಿ ಅವರನ್ನು ಉತ್ತಮ ನಾಗರಿಕರನ್ನಾಗಿಸುವ ಪಠ್ಯಕ್ರಮವನ್ನು ಜವಾಬ್ದಾರಿ ಸ್ವಾಯತ್ತ ಸಂಸ್ಥೆಗಿದೆ. ಇಲ್ಲಿಯವರೆಗೆ ಸಂಸ್ಥೆ ಮಾಡಿಕೊಂಡು ಬಂದಿರುವ ಮಾಡಿಕೊಂಡು ಬಂದಿದೆಯೋ ಆ ಕೆಲಸಗಳನ್ನು ಮುಂದುವರೆಸಬೇಕು“ ಎಂದು ಅಭಿಪ್ರಾಯಪಟ್ಟರು.
ಸಂಸ್ಥೆಗೆ ಸ್ವಾಯತ್ತ ಸ್ಥಾನಮಾನ ದೊರೆತ ಸಂದರ್ಭದ ಸವಿ ನೆನಪಿಗಾಗಿ ಸಿದ್ಧಪಡಿಸಿದ ಸ್ಮರಣ ಸಂಚಿಕೆ “ಪಿಲೋಜೆನೆಸಿಸ್” ಅನ್ನು ಬಿಡುಗಡೆಗೊಳಿಸಿದ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜರವರು ಹಳ್ಳಿಯಲ್ಲಿ ಮಾತೃಭಾಷೆಯಲ್ಲಿ ಶಿಕ್ಷಣ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳು ದೇಶದ ಉನ್ನತ ಹುದ್ದೆಗಳನ್ನು ಅಲಂಕರಿಸಿರುವ ಹಲವಾರು ನಿದರ್ಶನಗಳಿವೆ. ಶಿಕ್ಷಣ ಕ್ಷೇತ್ರಕ್ಕೆ ಕ್ರೈಸ್ತ ವಿದ್ಯಾಸಂಸ್ಥೆಗಳು ನೀಡಿದ ಕೊಡುಗೆ ಅಪಾರ, ಧರ್ಮಗುರುಗಳು ಒಂದು ಚರ್ಚ್ ನಿರ್ಮಿಸಿದರೆಂದಾದಲ್ಲಿ ಅದರ ಬಳಿಯಲ್ಲೊಂದು ಶಾಲೆಯನ್ನು ನಿರ್ಮಿಸಿ ಸಮಾಜದ ಎಲ್ಲಾ ವರ್ಗದ ಜನರಿಗೂ ಮೌಲ್ಯಾಧಾರಿತ ಶಿಕ್ಷಣಕ್ಕೆ ಅನುವು ಮಾಡಿಕೊಡುವುದು ಅವರ ಹಿರಿಮೆ, ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಸದಾ ಶ್ರಮಿಸುತ್ತಿರುವ ಸಂತ ಫಿಲೋಮಿನಾ ಕಾಲೇಜು ತನ್ನ ಅರ್ಹತೆಯ ಆಧಾರದ ಮೇಲೆಯೇ ಸ್ವಾಯತ್ತತೆಯನ್ನು ಪಡೆದಿದೆ. ವಿದ್ಯಾರ್ಥಿಗಳಿಗೆ ಸಮಾಜದ ಅವಶ್ಯಕತೆಗಳಿಗನುಗುಣವಾದ ಶಿಕ್ಷಣವು ಈ ಸ್ವಾಯತ್ತ ಸಂಸ್ಥೆಯಿಂದ ನಡೆಯಲಿ ಎಂದು ಹೇಳಿದರು.
ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟರವರು “ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಂತಸವಾಗುತ್ತಿದೆ. ಶೈಕ್ಷಣಿಕ ಶ್ರೇಷ್ಠತೆ, ಕ್ರೀಡೆ ಮತ್ತು ಸಾಂಸ್ಕೃತಿಕ ಸಾಧನೆಗಳ ಸಂಕೇತವಾಗಿರುವ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿಗೆ ಸ್ವಾಯತ್ತ ಸ್ಥಾನಮಾನ ದೊರಕಿರುವುದು ಸಂತಸದ ಸಂಗತಿಯಾಗಿದೆ. ಹಲವು ದಶಕಗಳಿಂದ ಸಾವಿರಾರು ಯುವ ಮನಸ್ಸುಗಳಲ್ಲಿ ಜ್ಞಾನದ ಬೀಜ ಬಿತ್ತುತ್ತಿರುವ ಸಂತ ಫಿಲೋಮಿನಾ ಕಾಲೇಜು ಸ್ಥಾಯತ್ತ ಸ್ಥಾನಮಾನಗಳೊಂದಿಗೆ ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾಭ್ಯಾಸ, ಸೃಜನಶೀಲ ಚಿಂತನೆ, ಉದ್ಯಮಶೀಲತೆ, ನಾಯಕತ್ವ ಮತ್ತು ಸಂಶೋಧನೆಗೆ ದಾರಿದೀಪವಾಗಲಿ” ಎಂದು ಹಾರೈಸಿದರು.
ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ಅವರು ಮಾತನಾಡಿ “ಇದು ನನ್ನ ಕ್ಷೇತ್ರದ ವಿದ್ಯಾಸಂಸ್ಥೆ ಹಾಗೂ ಪುತ್ತೂರಿನ ಶಿಕ್ಷಣ ಕ್ಷೇತ್ರದ ಹೆಮ್ಮೆ ಇಲ್ಲಿ ವಿದ್ಯಾಭ್ಯಾಸ ಮಾಡಿದವರು ಸಮಾಜದ ಉನ್ನತ ಸ್ಥಾನಗಳನ್ನಲಂಕರಿಸಿರುತ್ತಾರೆ. ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಕೊಡುಗೆಗಳನ್ನು ನೀಡಿದ ಶಿಕ್ಷಣ ಸಂಸ್ಥೆ ಇನ್ನಷ್ಟು ಎತ್ತರಕ್ಕೇರಲಿ, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ನೀಡಿದರೆ ಮಾತ್ರ ಸಾಲದು ಅವರಿಗೆ ಉದ್ಯೋಗಾವಕಾಶಗಳನ್ನು ನೀಡುವ ಕೆಲಸಗಳಾಗಬೇಕು ಎಂದು ಹೇಳಿ ಸ್ವಾಯತ್ತ ಸಂಸ್ಥೆಯ ಕೆಲಸಕಾರ್ಯಗಳಿಗೆ ಶುಭ ಹಾರೈಸಿದರು.
ಸ್ವಾಯತ್ತ ಕಾಲೇಜಿಗೆ ರಿಜಿಸ್ಟ್ರಾರ್ (ಅಕಾಡೆಮಿಕ್) ಆಗಿ ನೇಮಕಗೊಂಡ ಡಾ| ನಾರ್ಬಟ್ ಮಸ್ಕರೇನಸ್, ಪರೀಕ್ಷಾಂಗ ಕುಲಸಚಿವರಾದ ಡಾ| ವಿನಯಚಂದ್ರ, ಹಣಕಾಸು ಅಧಿಕಾರಿಯಾದ ಡಾ| ಎಡ್ರಿನ್ ಎಸ್.ಡಿಸೋಜ, ಶೈಕ್ಷಣಿಕ ಉಪ ಕುಲಸಚಿವರಾದ ವಿಪಿನ್ ನಾಯಕ್ ಎನ್.ಎನ್ ಹಾಗೂ ಪರೀಕ್ಷಾಂಗ ಉಪ ಕುಲಸಚಿವರುಗಳಾದ ಜೋನ್ಸನ್ ಡೇವಿಡ್ ಸಿಕ್ಕೇರಾ ಮತ್ತು ಅಭಿಷೇಕ್ ಸುವರ್ಣ ಅವರನ್ನು ಕ್ಯಾಥೋಲಿಕ್ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ವಂ| ಡಾ|| ಪ್ರವೀಣ್ ಲಿಯೋ ಲಸ್ರಾದೊ ಅವರು ಸನ್ಮಾನಿಸಿದರು.
ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಿದ ಕಾಲೇಜು ಶಿಕ್ಷಣ ಇಲಾಖೆ ಮಂಗಳೂರು ಇದರ ಪ್ರಾದೇಶಿಕ ಜಂಟಿ ನಿರ್ದೇಶಕರಾದ ಡಾ| ಕವಿತಾ ಕೆ. ಆರ್‌. ಅವರು ಕೇವಲ ಉದ್ಯೋಗ ಕ್ಷೇತ್ರದಲ್ಲಿ ಯಶಸ್ಸು ಗಳಿಸುವಂತಹ ವಿದ್ಯಾರ್ಥಿಗಳನ್ನು ಸಮಾಜಕ್ಕೆ ನೀಡುವುದು ಮಾತ್ರವಲ್ಲದೆ ಯುವ ಉದ್ಯಮಿಗಳನ್ನು ಹಾಗೂ ನಂಶೋಧಕರನ್ನು ನೀಡುವ ಕಾರ್ಯಸಂಸ್ಥೆಯಿಂದಾಗಲಿ ಎಂದು ಹೇಳಿ ಸ್ವಾಯತ್ತ ಸ್ನಾನಮಾನ ಗಳಿಸಿದುದಕ್ಕಾಗಿ ಸಂಸ್ಥೆಗೆ ಶುಭ ಹಾರೈಸಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರಾದ ಸುತ್ತಿ ಸ್ಟೆಲ್ಲಾ ವರ್ಗೀಸ್ ವಿದ್ಯಾರ್ಥಿಗಳು ತಮ್ಮ ಕನಸುಗಳಲ್ಲಿ ನಂಬಿಕೆ ಹೊಂದಿರಬೇಕು, ಸಾಧಿಸಬಹುದಾದಂತಹ ಗುರಿಯನ್ನಿಟ್ಟುಕೊಂಡು ನಿರಂತರ ಪರಿಶ್ರಮ ಪಡಬೇಕು, ನಿಂದಕರನ್ನು ನಿರ್ಲಕ್ಷ್ಯಸಿ ಪ್ರೇರಕರನ್ನು ಅನುಸರಿಸಬೇಕು. ದೇವರಲ್ಲಿ ಅಚಲವಾದ ನಂಬಿಕೆ, ಉತ್ತಮ ಜೀವನ ಮೌಲ್ಯಗಳು, ಭಾವನೆಗಳಲ್ಲಿ ಸಮತೋಲನವನ್ನು ಸಾಧಿಸಿ, ಹೆತ್ತವರ ತ್ಯಾಗವನ್ನು ಕಡೆಗಣಿಸದೆ ಸಮಾಜಕ್ಕೆ ಉತ್ತಮ ಕೊಡುಗೆಗಳನ್ನು ನೀಡುವಂತಾಗಬೇಕು’ ಎಂದು ಅಭಿಪ್ರಾಯಪಟ್ಟರು.
ಕಾಲೇಜು ಸ್ವಾಯತ್ತತೆಯೆಡೆಗೆ ಮುನ್ನಡೆಯುವ ಕಾರ್ಯಕ್ಕೆ ಚಾಲನೆ ನೀಡಿದ್ದ ಕ್ಯಾಥೊಲಿಕ್ ಶಿಕ್ಷಣ ಮಂಡಳಿಯ ನಿಕಟಪೂರ್ವ ಕಾರ್ಯದರ್ಶಿ ವಂ| ಆ್ಯಂಟನಿ ಮೈಕೆಲ್ ನೆರಾರವರು “ಕನಸು ನನಸಾದ ಸಾರ್ಥಕಭಾವದಿಂದ ಇಲ್ಲಿ ನಿಂತಿದ್ದೇನೆ. ಸಂಸ್ಥೆಯು ಈ ಸ್ನಾನಮಾನ ಗಳಿಸಲು ಹಗಲಿರುಳು ಶ್ರಮಿಸಿದವರಿದ್ದಾರೆ. ಅವರೆಲ್ಲರಿಗೂ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸುತ್ತಿದ್ದೇನೆ. ಹಿಂದೆಯೂ ಸಂತ ಫಿಲೋಮಿನಾ ಪ್ರಕಾಶಿಸುತ್ತಿತ್ತು. ಮುಂದೆ ಇನ್ನಷ್ಟು ಉಜ್ವಲವಾಗಿ ಪ್ರಕಾಶಿಸಲಿ’ ಎಂದು ಹೇಳಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಅತಿಥಿಗಣ್ಯರಿಗೆ ಕಾಲೇಜಿನ ಪ್ರಾಂಶುಪಾಲರಾದನಂ| ಡಾ| ಆ್ಯಂಟನಿ ಪ್ರಕಾಶ್ ಮೊಂತೇರೊ ವಂದಿಸಿದರು.
ಕಾಲೇಜಿನ ಪ್ರದರ್ಶನ ಕಲಾ ಘಟಕದ ವಿದ್ಯಾರ್ಥಿಗಳು ಪ್ರಾರ್ಥಿಸಿದರು, ಕಾಲೇಜಿನ ಸಂಚಾಲಕರಾದ ಅತಿ ಮಂ। ಲಾರೆನ್ ಮಸ್ಕರೇನಸ್ ರವರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾಲೇಜಿನ ಪ್ರಾಂಶುಪಾಲರಾದವಂ ಡಾ| ಆ್ಯಂಟನಿ ಪ್ರಕಾಶ್ ಮೊಂತೇರೊರವರು ವಂದಿಸಿದರು. ಕಾಲೇಜಿನ ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ ಭಾರತಿ ಎಸ್. ರೈ ಹಾಗೂ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ| ಮೈತ್ರಿ ಭಟ್ ಕಾರ್ಯಕ್ರಮ ನಿರೂಪಿಸಿದರು. ಮಂಗಳೂರು ಧರ್ಮಪ್ರಾಂತ್ಯದ ಶ್ರೇಷ್ಠ ಗುರುಗಳಾದ ವಂ| ಮ್ಯಾಕ್ಸಿಮ್ ನೊರೊನ್ಹಾರವರು, ಮಾಯ್ ದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಜೆರಾಲ್ ಡಿಕೋಸ್ಟ್ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಪ್ರತಿಮಾ ಹೆಗ್ಡೆ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಎ ಎಂ ಅಬ್ದುಲ್ ಕುಕ್ಸ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರು, ಧರಮಗುರುಗಳು, ಧರ್ಮ ಭಗಿನಿಯರು, ಸಿಬ್ಬಂದಿ ವರ್ಗ, ಹೆತ್ತವರು, ಹಿರಿಯ ವಿದ್ಯಾರ್ಥಿಗಳು, ವಿಶ್ರಾಂತ ಸಿಬ್ಬಂದಿಗಳು, ಊರ ಪರವೂರ ವಿದ್ಯಾಭಿಮಾನಿಗಳು, ಹಿತೈಷಿಗಳು, ಮತ್ತು ಸಹಸ್ರಾರು ಸಂಖ್ಯೆಯ ವಿದ್ಯಾರ್ಥಿಗಳು ಈ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾದರು.
ಕಾರ್ಯಕ್ರಮದ ವಿಶೇಷತೆಗಳು ಅತಿಥಿ ಗಣ್ಯರನ್ನು ಎನ್ ಸಿ ಸಿ ಕೆಡೆಟ್‌ ಗಳ ಗೌರವ ರಕ್ಷೆಯ ಬಳಿಕ ಕಾಲೇಜಿನ ಪ್ರದರ್ಶನ ಕಲಾ ಘಟಕದ ವಿದ್ಯಾರ್ಥಿಗಳು ಚೆಂಡೆ ವಾದ್ಯಗಳ ಮೆರವಣಿಗೆಯ ಮೂಲಕ ಸಭೆಗೆ ಕಡೆರುವ ಸಂದರ್ಭದಲ್ಲಿ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಪೂರ್ಣ ಕಲಶಗಳೊಂದಿಗೆ ಸಾಂಪ್ರದಾಯಿಕ ಸ್ವಾಗತ ನೀಡಿದರು. ಕಾಲೇಜಿನ ಯಕ್ಷಕಲಾ ಕೇಂದ್ರದ ವಿದ್ಯಾರ್ಥಿಗಳು ಯಕ್ಷನ್ನತ್ಯದ ಮೂಲಕ ಸ್ವಾಗತ ಕೋರಿದರು. “ಕಾಲೇಜಿನ ಪರಂಪರೆಯ ಒಂದು ನೋಟ” ಎಂಬ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು. ಈ ಸಾಕ್ಷ್ಯಚಿತ್ರದಲ್ಲಿ ಸಂಸ್ಥಾಪಕರ ದೃಷ್ಟಿಕೋನ ಸಂಸ್ಥೆಯ ಶ್ರೀಮಂತ ಇತಿಹಾಸ, ಶೈಕ್ಷಣಿಕ ಶ್ರೇಷ್ಠತೆ ಮತ್ತು ಸಾಂಸ್ಕೃತಿಕ ಪರಂಪರೆ, ಸಾಧನೆಗಳು ಗುಣಮಟ್ಟದ ಶಿಕ್ಷಣಕ್ಕೆ ಸಂಸ್ಥೆ ನೀಡುತ್ತಿರುವ ಪ್ರಾಮುಖ್ಯತೆ ಕ್ಯಾಂಪಸ್ ಪರಿಸರ, ಪಠ್ಯ ಹಾಗೂ ಪಕ್ಷೇತರ ವಿಷಯಗಳಲ್ಲಿ ವಿದ್ಯಾರ್ಥಿಗಳಿಗಿರುವ ವಿಪುಲ ಅವಕಾಶಗಳನ್ನು ಚಿತ್ರೀಕರಿಸಲಾಗಿದೆ. ಸಂಸ್ಥೆಯು ಸ್ವಾಯತ್ತ ಸ್ಥಾನಮಾನ ಗಳಿಸುವ ಸಂದರ್ಭದಲ್ಲಿ ತಮ್ಮದೇ ರೀತಿಯಲ್ಲಿ ಕೊಡುಗೆ ನೀಡಿದ ಭಾನುಪ್ರಕಾಶ್, ಹಾಗೂ ಅಪೇಕ್ಷಾ ಇವರುಗಳ ಸೇವೆಯನ್ನು ಗುರುತಿಸಿ ನನ್ನಾನಿಸಲಾಯಿತು. ನಂಸ್ಥೆಯ ಅಭಿವೃದ್ಧಿಗೆ ಗಮನಾರ್ಹ ಕೊಡುಗೆ ನೀಡಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕ್ಯಾಥೊಲಿಕ್ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ಹಾಗೂ ಕಾಲೇಜಿನ ಸಂಚಾಲಕರಾಗಿದ್ದ ವಂ| ಜೆರಾಲ್ಡ್ ಡಿಸೋಜ, ಪ್ರಾಂಶುಪಾಲರುಗಳಾಗಿದ್ದ ವಂ| ಫ್ರಾನ್ಸಿಸ್ ಶ್ರೀವಿಯರ್ ಗೋಮ್ಸ್, ಮತ್ತು ಪ್ರೊ| ಲೊಯೋ ನೊರೋನ್ನಾರವರನ್ನು ಈ ಸಂದರ್ಭದಲ್ಲಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಈ ವೇದಿಕೆಯಲ್ಲಿ ಅಪರಾಹ್ನ ಕಾಲೇಜಿನ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ವತಿಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಾಯಂಕಾಲ ನಡೆದ ವಿಶೇಷ ಕಾರ್ಯಕ್ರಮ “ಆಟಾನಮಿ ಇವ್ ಗಾಲಾ”ದಲ್ಲಿ ಝೀ ಸರೆಗಮಪಾ, ವಾಯ್ಸ್ ಆಫ್ ಇಂಡಿಯಾ ಖ್ಯಾತಿಯ ಹಿನ್ನೆಲೆ ಗಾಯಕ ಜಸ್ಕರಣ್ ಸಿಂಗ್, ಝೀ ಸರೆಗಮಪಾಖ್ಯಾತಿಯ ಸಮನ್ನಿ ರೈ ಕಲರ್ಸ್ ಕನ್ನಡ ಎದೆತುಂಬಿ ಹಾಡಿದೆನು ಖ್ಯಾತಿಯ ನಾದಿರಾ ಬಾನು ಹಾಗೂ ಕಲಾವಿದರಾದ ಸುಪ್ರೀತ್ ಸಫಲಿಗ ಮತ್ತು ಮಲ್ಲಿಕಾ ಮಟ್ಟಿ ಜೋಗಿ ಇವರುಗಳು ಭಾಗವಹಿಸಿದ್ದರು.
ನಾರ್ಬರ್ಟ್‌ ಮಸ್ಕರೇನಸ್, ಪರೀಕ್ಷಾಂಗ ಕುಲಸಚಿವರಾದ ಡಾ| ವಿನಯಚಂದ್ರ, ಹಣಕಾಸು ಅಧಿಕಾರಿಯಾದ ಡಾ| ಎಡ್ರಿನ್ ಎಸ್.ಡಿಸೋಜ, ಶೈಕ್ಷಣಿಕ ಉಪ ಕುಲಸಚಿವರಾದ ವಿಪಿನ್ ನಾಯಕ್ ಎನ್.ಎನ್ ಹಾಗೂ ಪರೀಕ್ಷಾಂಗ ಉಪ ಕುಲಸಚಿವರುಗಳಾದ ಜೋನ್ಸನ್ ಡೇವಿಡ್ ಸಿಕ್ಕೇರಾ ಮತ್ತು ಅಭಿಷೇಕ್ ಸುವರ್ಣ ಅವರನ್ನು ಕ್ಯಾಥೋಲಿಕ್ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ವಂ| ಡಾ|| ಪ್ರವೀಣ್ ಲಿಯೋ ಲಸ್ರಾದೊ ಅವರು ಸನ್ಮಾನಿಸಿದರು.
ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಿದ ಕಾಲೇಜು ಶಿಕ್ಷಣ ಇಲಾಖೆ ಮಂಗಳೂರು ಇದರ ಪ್ರಾದೇಶಿಕ ಜಂಟಿ ನಿರ್ದೇಶಕರಾದ ಡಾ| ಕವಿತಾ ಕೆ. ಆರ್‌. ಅವರು ಕೇವಲ ಉದ್ಯೋಗ ಕ್ಷೇತ್ರದಲ್ಲಿ ಯಶಸ್ಸು ಗಳಿಸುವಂತಹ ವಿದ್ಯಾರ್ಥಿಗಳನ್ನು ಸಮಾಜಕ್ಕೆ ನೀಡುವುದು ಮಾತ್ರವಲ್ಲದೆ ಯುವ ಉದ್ಯಮಿಗಳನ್ನು ಹಾಗೂ ನಂಶೋಧಕರನ್ನು ನೀಡುವ ಕಾರ್ಯಸಂಸ್ಥೆಯಿಂದಾಗಲಿ ಎಂದು ಹೇಳಿ ಸ್ವಾಯತ್ತ ಸ್ನಾನಮಾನ ಗಳಿಸಿದುದಕ್ಕಾಗಿ ಸಂಸ್ಥೆಗೆ ಶುಭ ಹಾರೈಸಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರಾದ ಸುತ್ತಿ ಸ್ಟೆಲ್ಲಾ ವರ್ಗೀಸ್ ವಿದ್ಯಾರ್ಥಿಗಳು ತಮ್ಮ ಕನಸುಗಳಲ್ಲಿ ನಂಬಿಕೆ ಹೊಂದಿರಬೇಕು, ಸಾಧಿಸಬಹುದಾದಂತಹ ಗುರಿಯನ್ನಿಟ್ಟುಕೊಂಡು ನಿರಂತರ ಪರಿಶ್ರಮ ಪಡಬೇಕು, ನಿಂದಕರನ್ನು ನಿರ್ಲಕ್ಷ್ಯಸಿ ಪ್ರೇರಕರನ್ನು ಅನುಸರಿಸಬೇಕು. ದೇವರಲ್ಲಿ ಅಚಲವಾದ ನಂಬಿಕೆ, ಉತ್ತಮ ಜೀವನ ಮೌಲ್ಯಗಳು, ಭಾವನೆಗಳಲ್ಲಿ ಸಮತೋಲನವನ್ನು ಸಾಧಿಸಿ, ಹೆತ್ತವರ ತ್ಯಾಗವನ್ನು ಕಡೆಗಣಿಸದೆ ಸಮಾಜಕ್ಕೆ ಉತ್ತಮ ಕೊಡುಗೆಗಳನ್ನು ನೀಡುವಂತಾಗಬೇಕು’ ಎಂದು ಅಭಿಪ್ರಾಯಪಟ್ಟರು.
ಕಾಲೇಜು ಸ್ವಾಯತ್ತತೆಯೆಡೆಗೆ ಮುನ್ನಡೆಯುವ ಕಾರ್ಯಕ್ಕೆ ಚಾಲನೆ ನೀಡಿದ್ದ ಕ್ಯಾಥೊಲಿಕ್ ಶಿಕ್ಷಣ ಮಂಡಳಿಯ ನಿಕಟಪೂರ್ವ ಕಾರ್ಯದರ್ಶಿ ವಂ| ಆ್ಯಂಟನಿ ಮೈಕೆಲ್ ನೆರಾರವರು “ಕನಸು ನನಸಾದ ಸಾರ್ಥಕಭಾವದಿಂದ ಇಲ್ಲಿ ನಿಂತಿದ್ದೇನೆ. ಸಂಸ್ಥೆಯು ಈ ಸ್ನಾನಮಾನ ಗಳಿಸಲು ಹಗಲಿರುಳು ಶ್ರಮಿಸಿದವರಿದ್ದಾರೆ. ಅವರೆಲ್ಲರಿಗೂ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸುತ್ತಿದ್ದೇನೆ. ಹಿಂದೆಯೂ ಸಂತ ಫಿಲೋಮಿನಾ ಪ್ರಕಾಶಿಸುತ್ತಿತ್ತು. ಮುಂದೆ ಇನ್ನಷ್ಟು ಉಜ್ವಲವಾಗಿ ಪ್ರಕಾಶಿಸಲಿ’ ಎಂದು ಹೇಳಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಅತಿಥಿಗಣ್ಯರಿಗೆ ಕಾಲೇಜಿನ ಪ್ರಾಂಶುಪಾಲರಾದನಂ| ಡಾ| ಆ್ಯಂಟನಿ ಪ್ರಕಾಶ್ ಮೊಂತೇರೊ ವಂದಿಸಿದರು.
ಕಾಲೇಜಿನ ಪ್ರದರ್ಶನ ಕಲಾ ಘಟಕದ ವಿದ್ಯಾರ್ಥಿಗಳು ಪ್ರಾರ್ಥಿಸಿದರು, ಕಾಲೇಜಿನ ಸಂಚಾಲಕರಾದ ಅತಿ ಮಂ। ಲಾರೆನ್ ಮಸ್ಕರೇನಸ್ ರವರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾಲೇಜಿನ ಪ್ರಾಂಶುಪಾಲರಾದವಂ ಡಾ| ಆ್ಯಂಟನಿ ಪ್ರಕಾಶ್ ಮೊಂತೇರೊರವರು ವಂದಿಸಿದರು. ಕಾಲೇಜಿನ ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ ಭಾರತಿ ಎಸ್. ರೈ ಹಾಗೂ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ| ಮೈತ್ರಿ ಭಟ್ ಕಾರ್ಯಕ್ರಮ ನಿರೂಪಿಸಿದರು. ಮಂಗಳೂರು ಧರ್ಮಪ್ರಾಂತ್ಯದ ಶ್ರೇಷ್ಠ ಗುರುಗಳಾದ ವಂ| ಮ್ಯಾಕ್ಸಿಮ್ ನೊರೊನ್ಹಾರವರು, ಮಾಯ್ ದೆ ದೇವುಸ್ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಜೆರಾಲ್ ಡಿಕೋಸ್ಟ್ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಪ್ರತಿಮಾ ಹೆಗ್ಡೆ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಎ ಎಂ ಅಬ್ದುಲ್ ಕುಕ್ಸ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರು, ಧರಮಗುರುಗಳು, ಧರ್ಮ ಭಗಿನಿಯರು, ಸಿಬ್ಬಂದಿ ವರ್ಗ, ಹೆತ್ತವರು, ಹಿರಿಯ ವಿದ್ಯಾರ್ಥಿಗಳು, ವಿಶ್ರಾಂತ ಸಿಬ್ಬಂದಿಗಳು, ಊರ ಪರವೂರ ವಿದ್ಯಾಭಿಮಾನಿಗಳು, ಹಿತೈಷಿಗಳು, ಮತ್ತು ಸಹಸ್ರಾರು ಸಂಖ್ಯೆಯ ವಿದ್ಯಾರ್ಥಿಗಳು ಈ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾದರು.
ಕಾರ್ಯಕ್ರಮದ ವಿಶೇಷತೆಗಳು ಅತಿಥಿ ಗಣ್ಯರನ್ನು ಎನ್ ಸಿ ಸಿ ಕೆಡೆಟ್‌ ಗಳ ಗೌರವ ರಕ್ಷೆಯ ಬಳಿಕ ಕಾಲೇಜಿನ ಪ್ರದರ್ಶನ ಕಲಾ ಘಟಕದ ವಿದ್ಯಾರ್ಥಿಗಳು ಚೆಂಡೆ ವಾದ್ಯಗಳ ಮೆರವಣಿಗೆಯ ಮೂಲಕ ಸಭೆಗೆ ಕಡೆರುವ ಸಂದರ್ಭದಲ್ಲಿ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಪೂರ್ಣ ಕಲಶಗಳೊಂದಿಗೆ ಸಾಂಪ್ರದಾಯಿಕ ಸ್ವಾಗತ ನೀಡಿದರು. ಕಾಲೇಜಿನ ಯಕ್ಷಕಲಾ ಕೇಂದ್ರದ ವಿದ್ಯಾರ್ಥಿಗಳು ಯಕ್ಷನ್ನತ್ಯದ ಮೂಲಕ ಸ್ವಾಗತ ಕೋರಿದರು. “ಕಾಲೇಜಿನ ಪರಂಪರೆಯ ಒಂದು ನೋಟ” ಎಂಬ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು. ಈ ಸಾಕ್ಷ್ಯಚಿತ್ರದಲ್ಲಿ ಸಂಸ್ಥಾಪಕರ ದೃಷ್ಟಿಕೋನ ಸಂಸ್ಥೆಯ ಶ್ರೀಮಂತ ಇತಿಹಾಸ, ಶೈಕ್ಷಣಿಕ ಶ್ರೇಷ್ಠತೆ ಮತ್ತು ಸಾಂಸ್ಕೃತಿಕ ಪರಂಪರೆ, ಸಾಧನೆಗಳು ಗುಣಮಟ್ಟದ ಶಿಕ್ಷಣಕ್ಕೆ ಸಂಸ್ಥೆ ನೀಡುತ್ತಿರುವ ಪ್ರಾಮುಖ್ಯತೆ ಕ್ಯಾಂಪಸ್ ಪರಿಸರ, ಪಠ್ಯ ಹಾಗೂ ಪಕ್ಷೇತರ ವಿಷಯಗಳಲ್ಲಿ ವಿದ್ಯಾರ್ಥಿಗಳಿಗಿರುವ ವಿಪುಲ ಅವಕಾಶಗಳನ್ನು ಚಿತ್ರೀಕರಿಸಲಾಗಿದೆ. ಸಂಸ್ಥೆಯು ಸ್ವಾಯತ್ತ ಸ್ಥಾನಮಾನ ಗಳಿಸುವ ಸಂದರ್ಭದಲ್ಲಿ ತಮ್ಮದೇ ರೀತಿಯಲ್ಲಿ ಕೊಡುಗೆ ನೀಡಿದ ಭಾನುಪ್ರಕಾಶ್, ಹಾಗೂ ಅಪೇಕ್ಷಾ ಇವರುಗಳ ಸೇವೆಯನ್ನು ಗುರುತಿಸಿ ನನ್ನಾನಿಸಲಾಯಿತು. ನಂಸ್ಥೆಯ ಅಭಿವೃದ್ಧಿಗೆ ಗಮನಾರ್ಹ ಕೊಡುಗೆ ನೀಡಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕ್ಯಾಥೊಲಿಕ್ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ಹಾಗೂ ಕಾಲೇಜಿನ ಸಂಚಾಲಕರಾಗಿದ್ದ ವಂ| ಜೆರಾಲ್ಡ್ ಡಿಸೋಜ, ಪ್ರಾಂಶುಪಾಲರುಗಳಾಗಿದ್ದ ವಂ| ಫ್ರಾನ್ಸಿಸ್ ಶ್ರೀವಿಯರ್ ಗೋಮ್ಸ್, ಮತ್ತು ಪ್ರೊ| ಲೊಯೋ ನೊರೋನ್ನಾರವರನ್ನು ಈ ಸಂದರ್ಭದಲ್ಲಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಈ ವೇದಿಕೆಯಲ್ಲಿ ಅಪರಾಹ್ನ ಕಾಲೇಜಿನ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ವತಿಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಾಯಂಕಾಲ ನಡೆದ ವಿಶೇಷ ಕಾರ್ಯಕ್ರಮ “ಆಟಾನಮಿ ಇವ್ ಗಾಲಾ”ದಲ್ಲಿ ಝೀ ಸರೆಗಮಪಾ, ವಾಯ್ಸ್ ಆಫ್ ಇಂಡಿಯಾ ಖ್ಯಾತಿಯ ಹಿನ್ನೆಲೆ ಗಾಯಕ ಜಸ್ಕರಣ್ ಸಿಂಗ್, ಝೀ ಸರೆಗಮಪಾಖ್ಯಾತಿಯ ಸಮನ್ನಿ ರೈ ಕಲರ್ಸ್ ಕನ್ನಡ ಎದೆತುಂಬಿ ಹಾಡಿದೆನು ಖ್ಯಾತಿಯ ನಾದಿರಾ ಬಾನು ಹಾಗೂ ಕಲಾವಿದರಾದ ಸುಪ್ರೀತ್ ಸಫಲಿಗ ಮತ್ತು ಮಲ್ಲಿಕಾ ಮಟ್ಟಿ ಜೋಗಿ ಇವರುಗಳು ಭಾಗವಹಿಸಿದ್ದರು. ಮಸ್ಕರೇನಸ್, ಪರೀಕ್ಷಾಂಗ ಕುಲಸಚಿವರಾದ ಡಾ| ವಿನಯಚಂದ್ರ, ಹಣಕಾಸು ಅಧಿಕಾರಿಯಾದ ಡಾ| ಎಡ್ರಿನ್ ಎಸ್.ಡಿಸೋಜ, ಶೈಕ್ಷಣಿಕ ಉಪ ಕುಲಸಚಿವರಾದ ವಿಪಿನ್ ನಾಯಕ್ ಎನ್.ಎನ್ ಹಾಗೂ ಪರೀಕ್ಷಾಂಗ ಉಪ ಕುಲಸಚಿವರುಗಳಾದ ಜೋನ್ಸನ್ ಡೇವಿಡ್ ಸಿಕ್ಕೇರಾ ಮತ್ತು ಅಭಿಷೇಕ್ ಸುವರ್ಣ ಅವರನ್ನು ಕ್ಯಾಥೋಲಿಕ್ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ವಂ| ಡಾ|| ಪ್ರವೀಣ್ ಲಿಯೋ ಲಸ್ರಾದೊ ಅವರು ಸನ್ಮಾನಿಸಿದರು.

ಜಾಹೀರಾತು