ಇತ್ತೀಚಿನ ಸುದ್ದಿ
ದೊಡ್ಡಕೊಪ್ಲ: 50 ಲಕ್ಷ ರೂ ವೆಚ್ಚದಲ್ಲಿ ಬೃಹತ್ ಚರಂಡಿಯ ತಡೆಗೋಡೆ ಕಾಮಗಾರಿಗೆ ಶಾಸಕ ಡಾ. ಭರತ್ ಶೆಟ್ಟಿ ಗುದ್ದಲಿಪೂಜೆ
26/12/2022, 20:12

ಸುರತ್ಕಲ್(reporterlarnataka.com): ಸುಮಾರು 50 ಲಕ್ಷ ರೂ ವೆಚ್ಚದಲ್ಲಿ ವಾರ್ಡ್ 1ರ ಸುರತ್ಕಲ್ ಪಶ್ಚಿಮದಲ್ಲಿ ದೊಡ್ಡಕೊಪ್ಲ ಶ್ರೀ ರಾಮ ಭಜನಾ ಮಂದಿರ ಮತ್ತು ಮಿತ್ರಪಟ್ಣ ಸಾರ್ವಜನಿಕ ಶೌಚಾಲಯ ಬಳಿ ಬೃಹತ್ ಚರಂಡಿಯ ತಡೆಗೋಡೆ ಕಾಮಗಾರಿಗೆ ಶಾಸಕ ಡಾ.ವೈ. ಭರತ್ ಶೆಟ್ಟಿ ಗುದ್ದಲಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಕಾರ್ಪೊರೇಟರ್ ಶೋಭಾ ರಾಜೇಶ್, ಸ್ಥಾಯಿ ಸಮಿತಿ ಅಧ್ಯಕ್ಷೆ ನಯನಾ ಕೋಟ್ಯಾನ್, ಮಂಡಲದ ಕಾರ್ಯದರ್ಶಿ ರಾಘವೇಂದ್ರ ಶೆಣೈ, ಪುಷ್ಪರಾಜ್ ಮುಕ್ಕ, ಶಕ್ತಿ ಕೇಂದ್ರ ಪ್ರಮುಖ್ ರಾಜೇಶ್ ಮುಕ್ಕ, ಮಿತ್ರಪಟ್ಣ ಮೊಗವೀರ ಸಂಘದ ಅಧ್ಯಕ್ಷರಾದ ರವೀಂದ್ರ ಕರ್ಕೇರ, ಐದು ಪಟ್ಣ ಅಧ್ಯಕ್ಷರಾದ ಸುರೇಶ್ ಕರ್ಕೇರ, ಮಿತ್ರಪಟ್ಣ ಮಹಿಳಾ ಸಂಘದ ಅಧ್ಯಕ್ಷೆ ಕವಿತಾ ಶರತ್, ಮೀನುಗಾರಿಕಾ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ವಸಂತ್ ಸುವರ್ಣ, ಮಾರುತಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಕಿಶೋರ್ ಪುತ್ರನ್, ಶೈಲೇಶ್, ನವೀನ್ ಚೆಕ್ ಪೋಸ್ಟ್, ರಂಜಿತ್, ಲಕ್ಶ್ಮಣ ಬಂಗೇರ ನವೀನ್ ಮಲ್ಲಮಾರ್, ಆಶಾ, ಭವ್ಯ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.