10:55 PM Sunday28 - December 2025
ಬ್ರೇಕಿಂಗ್ ನ್ಯೂಸ್
ಮೈಸೂರು ಅರಮನೆ ಬಳಿ ಸ್ಫೋಟ: ಸಾವಿನ ಸಂಖ್ಯೆ 3ಕ್ಕೆ ಏರಿಕೆ; ಹೆಚ್ಚಿದ ಆತಂಕ ಮಂಗಳೂರು ಡೇಟಾ ಸೆಂಟರ್ ಭಾರತದ ಅತ್ಯಂತ ವೆಚ್ಚ-ದಕ್ಷ ಕೇಂದ್ರ: ಫೀಸಿಬಿಲಿಟಿ ವರದಿ ಹೊಸ ವರ್ಷಾಚರಣೆ: ರೆಸಾರ್ಟ್, ಹೋಟೆಲ್, ಹೋಂ ಸ್ಟೇ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ಕೊಡಗಿನಲ್ಲಿ ಅರಣ್ಯ ರಕ್ಷಕರಿಂದಲೇ ಮರಗಳ ಲೂಟಿ: ಲೋಡರ್ ಬಂಧನ; ನಾಲ್ವರು ಪರಾರಿ ಖಾಸಗಿ ವಾಹನಕ್ಕೆ ನಾಮಫಲಕ | ಪೊಲೀಸಪ್ಪನಿಂದೇ ಕಾನೂನು ಉಲ್ಲಂಘನೆ: ದಂಡ ಯಾವತ್ತೇ ವಿಧಾನಸಭೆ ಚುನಾವಣೆ ನಡೆದರೂ ಬಿಜೆಪಿಗೆ ಬಹುಮತ: ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ವಿಶ್ವಾಸ ಭಾರತ ರತ್ನ ವಾಜಪೇಯಿ ಗ್ರಂಥಾಲಯ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಉದ್ಘಾಟನೆ ಜಿಲ್ಲಾ ಮತ್ತು ಕ್ಲಸ್ಟರ್ ಮಟ್ಟದಲ್ಲಿ ಡಿಜಿಟಲ್ ಆರ್ಥಿಕತೆಗೆ ಒತ್ತು: ಕೆಡಿಇಎಂ ಮತ್ತು ಎಫ್‌ಕೆಸಿಸಿಐ… ಪ್ರೀತಿಯ ಸಂಸ್ಕೃತಿ ಬೆಳೆಸಿ: ರೊಸಾರಿಯೋ ಕೆಥೆಡ್ರಲ್‌ನಲ್ಲಿ ಬಿಷಪ್ ಡಾ. ಸಲ್ಡಾನರಿಂದ ಕ್ರಿಸ್ಮಸ್ ಸಂದೇಶ ಕಲಬುರ್ಗಿಯಲ್ಲಿ ಟೆಕ್ಸ್ ಟೈಲ್ ಪಾರ್ಕ್ | ಮುಂದಿನ ತಿಂಗಳು ಉನ್ನತ ಮಟ್ಟದ ಸಭೆ:…

ಇತ್ತೀಚಿನ ಸುದ್ದಿ

ದ.ಕ. ಲೋಕಸಭೆ ಕ್ಷೇತ್ರದಲ್ಲಿ ಬಹುತೇಕ ಶಾಂತಿಯುತ ಎಲೆಕ್ಷನ್ : ಶೇ. 71.83 ಮತದಾನ

26/04/2024, 22:27

ಚಿತ್ರ :ಅನುಷ್ ಪಂಡಿತ್ ಮಂಗಳೂರು
ಮಂಗಳೂರು(reporterkarnataka.com): ಕರಾವಳಿಯ ದ.ಕ. ಲೋಕಸಭೆ ಕ್ಷೇತ್ರ ಸೇರಿದಂತೆ ರಾಜ್ಯದ 14 ಕ್ಷೇತ್ರಗಳಲ್ಲಿ ಇಂದು ಮೊದಲ ಹಂತದ ಮತದಾನ ಮತದಾನ ಬಹುತೇಕ ಶಾಂತಿಯುತವಾಗಿ ನಡೆದಿದ್ದು, ದ.ಕ.ದಲ್ಲಿ ಶೇ. 71.83ರಷ್ಟು ಮತದಾನವಾಗಿದೆ. ನಗರದ ಉರ್ವ ಕೆನರಾ ಹೈಸ್ಕೂಲಿನಲ್ಲಿ ಡಿ ಮಸ್ಟರಿಂಗ್ ಪ್ರಕ್ರಿಯೆ ನಡೆಯುತ್ತಿದೆ.
ಇಂದು ಬೆಳಗ್ಗೆ ಬೆಳಗ್ಗೆ 7 ಗಂಟೆಯಿಂದ ಸಂಜೆ 6ರ ವರೆಗೆ ಮತದಾನ ನಡೆದಿದೆ. ನಗರದ ಪಂಪ್ ವೆಲ್ ಬಳಿಯ ಕಪಿತಾನಿಯೊ ಮತಗಟ್ಟೆ ಸಮೀಪ ಬಿಜೆಪಿ ಕಾರ್ಯಕರ್ತರು ಎನ್ನಲಾದ ಕೆಲವರು ಗದ್ದಲ ನಿರ್ಮಿಸಿರುವುದನ್ನು ಬಿಟ್ಟರೆ ಶಾಂತಿಯುತ ಮತದಾನ ನಡೆದಿದೆ. ಇದೀಗ ಜಿಲ್ಲೆಯ ಎಲ್ಲ 1876 ಮತಗಟ್ಟೆಗಳಿಂದ ಚುನಾವಣಾ ಸಿಬ್ಬಂದಿಗಳು ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ (ಇವಿಎಂ) ಜತೆ ನಗರದ ಉರ್ವ ಕೆನರಾ ಹೈಸ್ಕೂಲಿನ ಡಿ ಮಸ್ಟರಿಂಗ್ ಕೇಂದ್ರಕ್ಕೆ ಆಗಮಿಸಿದ್ದಾರೆ. ಇಲ್ಲಿಂದ ಸುರತ್ಕಲ್ ನ ಎನ್ ಐಟಿಕೆ ಸ್ಟ್ರಾಂಗ್ ಕೊಠಡಿಗೆ ಇವಿಎಂಗಳನ್ನು ಸಾಗಿಸಲಾಗುವುದು.
ಜಿಲ್ಲೆಯಾದ್ಯಂತ 1876 ಮತಗಟ್ಟೆಗಳಿದ್ದು, ಒಟ್ಟು11, 255 ಮಂದಿ ಸಿಬ್ಬಂದಿಗಳನ್ನು ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾಗಿತ್ತು.

ಇದರಲ್ಲಿ ಅಧಿಕಾರಿಗಳು ಕೂಡ ಸೇರಿದ್ದಾರೆ. 2251 ಮಂದಿ ಪ್ರಿಸೈಡಿಂಗ್ ಅಧಿಕಾರಿಗಳನ್ನು ನೇಮಿಸಲಾಗಿದೆ.
ಇಂದು ಬೆಳಗ್ಗೆಯೇ ನಗರದ ಉರ್ವ ಕೆನರಾ ಹೈಸ್ಕೂಲಿನಲ್ಲಿ ಚುನಾವಣಾ ಸಿಬ್ಬಂದಿಗಳಿಗೆ ಕೊನೆಯ ಹಂತದ ಸಿದ್ದತೆಗಳನ್ನು ನಡೆಸಲಾಯಿತು. ಜಿಲ್ಲಾದ್ಯಂತವಿರುವ 1876 ಮತಗಟ್ಟೆಗಳಿಗೆ ಇವಿಎಂ ಮೆಷಿನೊಂದಿಗೆ ಸಿಬ್ಬಂದಿಗಳನ್ನು ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾದ ವಾಹನದಲ್ಲಿ ಭದ್ರತೆಯೊಂದಿಗೆ ಕಳುಹಿಸಿಕೊಡಲಾಯಿತು.

ಇತ್ತೀಚಿನ ಸುದ್ದಿ

ಜಾಹೀರಾತು