ಇತ್ತೀಚಿನ ಸುದ್ದಿ
ಆಸ್ತಿ ವಿಚಾರಕ್ಕೆ ಕಲಹ; ಗುಂಡಿನ ದಾಳಿ : ಓರ್ವನಿಗೆ ಗಾಯ
11/12/2025, 10:44
ಮಡಿಕೇರಿ(reporterkarnataka.com): ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಕಲಹ ತೀವ್ರ ಸ್ವರೂಪ ಪಡೆದುಕೊಂಡು, ವಿರಾಜಪೇಟೆ ತಾಲ್ಲೂಕು ಕಾವಾಡಿ ಗ್ರಾಮದ ಬ್ರಿಜೇಶ್ ಮಾದಪ್ಪ ಎಂಬುವವರ ಮೇಲೆ ಗುಂಡಿನ ದಾಳಿ ನಡೆದಿದೆ.



ಗುಂಡಿನ ದಾಳಿಗೆ ಒಳಗಾದ ಬ್ರಿಜೇಶ್ ಮಾದಪ್ಪ ಅವರ ತಂದೆ ರತನ್ ಅವರ ಮೇಲೆ ಹಲ್ಲೆ ನಡೆಸಿದ ಅವರ ಪುತ್ರ ಅಮೃತ್ ಅಪ್ಪಯ್ಯ ಅವರನ್ನು ಬಂಧಿಸಲಾಗಿದ್ದು, ಗಾಯಳುಗಳನ್ನು ವಿರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.












