ಇತ್ತೀಚಿನ ಸುದ್ದಿ
ದಿನಬಳಕೆ ವಸ್ತುಗಳ ಖರೀದಿಗಾಗಿ ಮುಗಿಬಿದ್ದ ಜನ: ನಿಯಮವನ್ನು ಗಾಳಿಗೆ ತೋರಿದ ಸಾರ್ವಜನಿಕರು !
23/05/2021, 15:44

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ
info.reporterkarnataka@gmail.com
ಮುಸ್ಕಿ ಪಟ್ಟಣದಲ್ಲಿ ಕೊರೋನಾ ಎರಡನೆಯ ಲಾಕ್ ಡೌನ್ ನಿಮಿತ್ಯ ಭಾನುವಾರ ಅಗತ್ಯ ವಸ್ತುಗಳಾದ ತರಕಾರಿ, ಕಿರಾಣಿ, ಎಣ್ಣೆ ಖರೀದಿಗೆ
ಸಾರ್ವಜನಿಕ ಸರಕಾರದ ಆದೇಶವನ್ನು ಗಾಳಿಗೆ ತೂರಿದ್ದು ಕಂಡು ಬಂತು.
ಸಾಮಾಜಿಕ ಅಂತರವಿಲ್ಲ ಮುಖಕ್ಕೆ ಕೆಲವರಿಗೆ ಮಾಸ್ಕ್ ಇಲ್ಲದೆ ಒಬ್ಬರನ್ನೊಬ್ಬರು ಆಂಟಿ ಕೊಂಡು ವಸ್ತುಗಳನ್ನು ಖರೀದಿಸುವುದು ದೃಶ್ಯ ಕಾಣುತ್ತಿತ್ತು.
ಬೆಳ್ಳಂಬೆಳಗ್ಗೆ ಜನರು ಕಿರಾಣಿ, ಬ್ರಾಂಡಿ ಶಾಪ್, ತರಕಾರಿ ಕೇಂದ್ರದಲ್ಲಿ ಮುಗಿಬಿದ್ದಿದ್ದರು.
ತಾಲೂಕಾಡಳಿತ ಸಾರ್ವಜನಿಕರ ಅಂತರ ಕಾಪಾಡುವಲ್ಲಿ ವಿಫಲವಾಗಿದೆ ಎಂದು ಪಟ್ಟಣದ ನಾಗರಿಕರಿಂದ ಮಾತು ಕೇಳಿಬರುತ್ತಿತ್ತು.
ಪುರಸಭೆ ಆಡಳಿತ, ಆರೋಗ್ಯ ಇಲಾಖೆ, ತಹಶೀಲ್ದಾರ್, ಪೊಲೀಸ್ ಇಲಾಖೆ ಇನ್ನು ಹೆಚ್ಚಿನ ಕ್ರಮ ಕೈಗೊಂಡು ಸಾಮಾಜಿಕ ಅಂತರ ಕಾಪಾಡಲು ಕ್ರಮ ಕೈಗೊಳ್ಳುವ ಅಗತ್ಯವಿದೆ.
ಪೊಲೀಸ್ ಇಲಾಖೆ 9 ಗಂಟೆಯೊಳಗೆ ರಸ್ತೆ ಇಳಿದಿದೆ.ಸಿಪಿಐ ದೀಪಕ್ ಬೋಸ ರೆಡ್ಡಿ, ಪಿಎಸ್ಐ ಸಿದ್ದರಾಮ್ ಬಿದರಾಣಿ ಜನರನ್ನು ಕಂಟ್ರೋಲ್ ಮಾಡಲು ಮುಂದಾಗುವ ದೃಶ್ಯ ಕಂಡು ಬಂತು.