ಇತ್ತೀಚಿನ ಸುದ್ದಿ
ಮಡಿಕೇರಿಯಲ್ಲಿ ಡಿಜಿಟಲ್ ಸ್ಟುಡಿಯೋ ಕಳ್ಳತನ ಪ್ರಕರಣ: ಐವರು ಚೋರರ ಬಂಧನ
11/10/2025, 11:40

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಮಡಿಕೇರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕೊಹಿನೂರ್ ರಸ್ತೆಯಲ್ಲಿನ ಎಂ. ಎಂ. ಅಬ್ದುಲ್ ರೆಹಮಾನ್ ಎಂಬುವವರಿಗೆ ಸೇರಿದ ಬ್ರೈಟ್ ಡಿಜಿಟಲ್ ಸ್ಟುಡಿಯೋ ಕಳ್ಳತನ ಪ್ರಕಾರಣಕ್ಕೆ ಸಂಬಂಧಿದಂತೆ ಕೊಡಗು ಪೊಲೀಸರು 5 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸೆಪ್ಟೆಂಬರ್ 25ರ ರಾತ್ರಿ ಸ್ಟುಡಿಯೋದ ಶಟರ್ಸ್ ಮುರಿದು ಕಲರ್ ಪ್ರಿಂಟರ್ ಹಾಗೂ ಕೇಬಲ್ ಗಳನ್ನು ಕಳುವಾಗಿರುವ ಬಗ್ಗೆ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಬೆನ್ನತ್ತಿದ ಪೊಲೀಸರು ಮಡಿಕೇರಿ ತಾಲ್ಲೂಕಿನ ಬೇತು ಗ್ರಾಮದ ಮಹಮದ್ ಸುಹೇಲ್, ಹೊದವಾಡ ಗ್ರಾಮದ ಮಹಮದ್ ಮುಬಶೀರ್, ಮೊಹಮದ್ ಜೈನದ್ದಿನ್, ನಾಪೋಕ್ಲು ವಿನ ಕೊಳಕೇರಿ ಯ ಮುಜಾಮಿಲ್ ಹಾಗೂ ವಿರಾಜಪೇಟೆ ತಾಲ್ಲೂಕಿನ ಕುಂಜಿಲ ಗ್ರಾಮದ ಫಯಾಜ್ ರನ್ನು ಬಂಧಿಸಲಾಗಿದ್ದು, ಬಂಧಿತರಿಂದ ಒಂದು ಕಲರ್ ಪ್ರಿಂಟರ್ ಮತ್ತು ಕೇಬಲ್ ಗಳನ್ನು ವಶಕ್ಕೆ ಪಡೆಯಲಾಗಿದೆ.