ಇತ್ತೀಚಿನ ಸುದ್ದಿ
ಡಿಜಿಟಲ್ ಇಂಡಿಯಾ; ವಾಟ್ಸಾಪ್ನಲ್ಲೇ ಪಾನ್ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ದಾಖಲೆ: ಕೇಂದ್ರ ಚಿಂತನೆ
24/05/2022, 22:17
ಹೊಸದಿಲ್ಲಿ(reporterkarnataka.com):ಇನ್ಮುಂದೆ ವಾಟ್ಸಾಪ್ ಮೂಲಕವೇ ಬಳಕೆದಾರರು ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಹಾಗೂ ವಿಮಾ ಪಾಲಿಸಿಗಳಂತಹ ದಾಖಲೆಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಅವಕಾಶ ನೀಡುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
my gov ಹೆಲ್ಪ್ ಡೆಸ್ಕ್ನೊಂದಿಗೆ ವಾಟ್ಸಾಪ್ ಒಡಂಬಡಿಕೆ ಮಾಡಿಕೊಂಡಿದ್ದು, ಈ ಮೂಲಕ ವಾಟ್ಸಾಪ್ನಲ್ಲಿಯೇ ಇನ್ಮುಂದೆ ಡಿಜಿ ಲಾಕರ್ ಸೇವೆಗಳು ಲಭ್ಯವಿರಲಿದೆ.
ದೇಶದ ನಾಗಕರಿಕರಿಗೆ ಬೆರಳ ತುದಿಯಲ್ಲಿ ಸರ್ಕಾರಿ ಸೇವೆಗಳು ದೊರಕಬೇಕು ಎಂಬುದೇ ನಮ್ಮ ಉದ್ದೇಶವಾಗಿದೆ. ಈ ಮೂಲಕ ಸದೃಢ ಡಿಜಿಟಲ್ ಇಂಡಿಯಾ ನಿರ್ಮಾಣ ಮಾಡುತ್ತೇವೆ ಎಂದು ವಾಟ್ಸಾಪ್ನ ಸಾರ್ವಜನಿಕ ನೀತಿಯ ನಿರ್ದೇಶಕ ಶಿವನಾಥ್ ತುಕ್ರಾಲ್ ಹೇಳಿದ್ದಾರೆ.