5:26 PM Wednesday12 - November 2025
ಬ್ರೇಕಿಂಗ್ ನ್ಯೂಸ್
ಕೆಂಪು ಕೋಟೆ ಬಾಂಬ್ ಬ್ಲಾಸ್ಟ್ ಪ್ರಕರಣ | ಇಡೀ ದೇಶವೇ ಖಂಡಿಸಬೇಕಿದೆ: ಮಾಜಿ… ಕುಶಾಲನಗರದಲ್ಲಿ 8.60 ಕೋಟಿ ವೆಚ್ಚದ ಪ್ರಜಾಸೌಧ ತಾಲೂಕು ಆಡಳಿತ ಭವನ ನಿರ್ಮಾಣಕ್ಕೆ ಭೂಮಿ… ತಾಲ್ಲೂಕು ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ಇರಬೇಕು; ತಪ್ಪಿದವರ ವಿರುದ್ಧ ವರದಿ ನೀಡಲು ಡಿಸಿಗೆ… Mysore | ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೇಟೆ: ಕೊಡಗು ಜಿಲ್ಲೆಯ ಇಬ್ಬರ… ಕೇಂದ್ರ ಸರ್ಕಾರದ ಸಾಲ ಕೊಡಿಸುವುದಾಗಿ ಮಹಿಳೆಯರಿಗೆ ಲಕ್ಷಕ್ಕೂ ಅಧಿಕ ವಂಚನೆ: ಮಡಿಕೇರಿ ನಿವಾಸಿ… Sports | ಖೇಲೋ ಇಂಡಿಯಾ ಮಹಿಳಾ ಹಾಕಿ ಟೂರ್ನಿ: ಕುಶಾಲನಗರದ ದಿಶಾ ನಿಡ್ಯಮಲೆ… ಸದ್ಯದಲ್ಲಿ ಸರ್ಕಾರಿ ಶಾಲೆಗಳಿಗೆ ಶಿಕ್ಷಕರ ನೇಮಕಾತಿ: ಸಚಿವ ಮಧು ಬಂಗಾರಪ್ಪ ಕಬ್ಬು ಬೆಳೆಗಾರರ ಕಿವಿಗೆ ಹೂವು ಇಟ್ಟ ರಾಜ್ಯ ಕಾಂಗ್ರೆಸ್ ಸರ್ಕಾರ: ಕೇಂದ್ರ ಸಚಿವ… ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಧಾನಿಗೆ ಸಿಎಂ ಪತ್ರ: ಕೇಂದ್ರ ಸಚಿವ ಕುಮಾರಸ್ವಾಮಿ ಆರೋಪ ಯುವಕನ ಅನುಮಾನಾಸ್ಪದ ಸಾವು : ರಾಷ್ಟ್ರೀಯ ಹೆದ್ದಾರಿಯಲ್ಲಿ ಮೃತದೇಹ ಇಟ್ಟು ಪ್ರತಿಭಟನೆ

ಇತ್ತೀಚಿನ ಸುದ್ದಿ

Diamond Fest | ಪುತ್ತೂರು ಮುಳಿಯ ಜ್ಯುವೆಲ್ಸ್ ನಲ್ಲಿ ಡೈಮಂಡ್ ಫೆಸ್ಟ್‌ಗೆ ಚಾಲನೆ

05/03/2025, 22:10

ಪುತ್ತೂರು(reporterkarnataka.com): ಚಿನ್ನ,ವಜ್ರಾಭರಣಗಳಲ್ಲಿ ಸದಾ ಹೊಸತನವನ್ನು ಪರಿಚಯಿಸುವ ಮೂಲಕ ಗ್ರಾಹಕರ ಪ್ರೀತಿಗೆ ಪಾತ್ರವಾಗಿರುವ ಮುಳಿಯ ಜ್ಯುವೆಲ್ಸ್‌ನಲ್ಲಿ ಈ ವರ್ಷದ ಡೈಮಂಡ್ ಫೆಸ್ಟ್‌ಗೆ ಮಾ.3ರಂದು ಚಾಲನೆ ನೀಡಲಾಯಿತು.
ಪುತ್ತೂರು ಸಾಯ ಎಂಟರ್‌ಪ್ರೈಸಸ್ ಮಳಿಗೆಯ ಮಾಲಕಿ ಸಂಧ್ಯಾ ಸಾಯರವರು ದೀಪ ಬೆಳಗಿಸಿ ಫೆಸ್ಟ್ ಉದ್ಘಾಟಿಸಿ ಮಾತನಾಡಿ, ಮುಳಿಯ ಎಂದರೆ ನಂಬಿಕೆಯ ಪ್ರತೀಕ. ಮುಳಿಯ ಸಂಸ್ಥೆ ವ್ಯವಹಾರದೊಂದಿಗೆ ಸಾಮಾಜಿಕ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಂಡಿದೆ. ತಾನು ಪಡೆದದರಲ್ಲಿ ಸ್ವಲ್ಪವನ್ನು ಸಮಾಜಕ್ಕೆ ಅರ್ಪಿಸುತ್ತಿದೆ. ಇವರ ಸಾಮಾಜಿಕ ಚಿಂತನೆಗಳು ಉತ್ತಮ ಕಾರ್ಯವಾಗಿದೆ ಎಂದರು.


ಸಂಗೀತ ಶಿಕ್ಷಕಿ ಚೈತ್ರಿಕಾ ಕೋಡಿಬೈಲು ಮಾತನಾಡಿ ವಜ್ರ ಅಂದರೆ ಬಲ, ಹೊಳಪು, ಸುಂದರ ಆಭರಣಗಳು ರಾಜ್ಯದಾದ್ಯಂತ ಮನೆಮಾತಾಗಿರುವ ಬ್ರಾಂಡ್ ಆಗಿದೆ. ಮುಳಿಯ ಸಂಸ್ಥೆ ವಜ್ರದಂತೆ ಮತ್ತಷ್ಟು ಬಲಶಾಲಿಯಾಗಿ ಬೆಳೆಯಲಿ. ಈ ಫೆಸ್ಟ್ ಯಶಸ್ಸನ್ನು ತರಲಿ ಎಂದು ಹಾರೈಸಿದರು.
ಮಹಾಲಕ್ಷ್ಮಿ ಗ್ಲಾಸ್ ಮತ್ತು ಪ್ರೈವುಡ್ಸ್‌ನ ಮಾಲಕಿ ಋತ್ವಿಕಾ ಭರತ್‌ ಮಾತನಾಡಿ, ಮುಳಿಯ ಡೈಮಂಡ್ ಫೆಸ್ಟ್ ಒಂದು ತಿಂಗಳು ನಡೆಯಲಿದೆ.ಫೆಸ್ಟ್‌ಗೆ ಉತ್ತಮ ಸ್ಪಂದನೆ ಸಿಗಲಿ, ಗ್ರಾಹಕರು ಯಶಸ್ವಿಗೊಳಿಸಲಿ ಎಂದು ಹಾರೈಸಿದರು.
ಆಡಳಿತ ನಿರ್ದೇಶಕಿ ಅಶ್ವಿನಿಕೃಷ್ಣ ಮುಳಿಯ ಮಾತನಾಡಿ, ವಜ್ರಾಭರಣಗಳ ಉತ್ಸವ ಆಯೋಜನೆ ಮಾಡಿದ್ದೇವೆ. ಮಹಿಳೆಯರು ಇಷ್ಟಪಡುವ ಪರಂಪರಾಗತವಾದ ವಜ್ರಾಭರಣಗಳ ಸಂಗ್ರಹ ಇದೆ. ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಹಲವು ವೈಶಿಷ್ಟ್ಯಗಳ ಆಭರಣ ಒದಗಿಸುತ್ತಿದ್ದೇವೆ. ರೂ. 9000 ದಿಂದ 15000 ದವರೆಗಿನ ವಜ್ರಾಭರಣಗಳಿವೆ. ಗ್ರಾಹಕರು ಇದನ್ನು ಯಶಸ್ಸುಗೊಳಿಸಿ ಎಂದರು.
ಆಡಳಿತ ನಿರ್ದೇಶಕಿ ಕೃಷ್ಣವೇಣಿ ಮುಳಿಯ ಮಾತನಾಡಿ ಬಂಗಾರ ಜೀವನದ ಆಧಾರ, ವಜ್ರವೂ ಜೀವನಕ್ಕೆ ಆತ್ಮವಿಶ್ವಾಸ ತುಂಬಿ ಭದ್ರತೆ ತರುತ್ತದೆ. ವಜ್ರ ಅಂದರೆ ಪ್ರಭಲತೆ ಹೊಂದಿರುತ್ತದೆ. ಆಭರಣ ಪ್ರಿಯರು ವಿಶೇಷತೆ ಪರಿಶೀಲಿಸಿ ಧರಿಸಿದಾಗ ಆಭರಣ ದೀರ್ಘಬಾಳ್ವಿಕೆ ಬರುತ್ತದೆ. ಗ್ರಾಹಕರಿಗಾಗಿ ಆಯೋಜನೆ ಮಾಡಿದ ಈ ಹಬ್ಬವನ್ನು ಗ್ರಾಹಕರು ಪ್ರೀತಿಸಿ ಯಶಸ್ವಿಗೊಳಿಸಿ ಎಂದರು.
ಶೋರೂಮ್ ಮ್ಯಾನೇಜರ್ ರಾಘವೇಂದ್ರ ಪಾಟೀಲ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಿಬ್ಬಂದಿ ರಾಜೇಶ್ ಸ್ವಾಗತಿಸಿ ಪ್ರಭಾಕರ ಭಟ್ ವಂದಿಸಿದರು. ಪ್ಲೋರ್ ಮ್ಯಾನೇಜ‌ರ್ ಪ್ರವೀಣ್ ಕಾರ್ಯಕ್ರಮ ನಿರೂಪಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು